'RRR ಬ್ಯಾನ್ ಮಾಡಿ ಅಂದಿದ್ದ ವಿಸ್ವ ಗುರುವಿನ ಶಿಷ್ಯರು ಎಲ್ ಮಕ್ಕಾಡೆ ಮಲ್ಕೊಂಡವ್ರೆ ನೋಡ್ರಾಪ್ಪಾ': ಪ್ರಕಾಶ್ ರಾಜ್ ಲೇವಡಿ

ಆರ್ ಆರ್ ಆರ್ ಸಿನಿಮಾ ಬ್ಯಾನ್ ಮಾಡಿ, ಚಿತ್ರಮಂದಿರಗಳನ್ನು ಸುಡುವುದಾಗಿ ಹೇಳಿದ್ದ ಬಿಜೆಪಿ ನಾಯಕರ ವಿರುದ್ಧ ಬಹು ಭಾಷಾ ನಟ ಪ್ರಕಾಶ್ ರಾಜ್ ಟೀಕಾ ಪ್ರಹಾರ ನಡೆಸಿದ್ದಾರೆ.
ನಟ ಪ್ರಕಾಶ್ ರಾಜ್
ನಟ ಪ್ರಕಾಶ್ ರಾಜ್

ಬೆಂಗಳೂರು: ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಒಲಿದು ಬಂದಿದ್ದು, ದೇಶ, ವಿದೇಶಗಳ ಗಣ್ಯರು, ಸಿನಿ ರಸಿಕರಿಂದ ಚಿತ್ರ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಈ ಮಧ್ಯೆ ಆರ್ ಆರ್ ಆರ್ ಸಿನಿಮಾ ಬ್ಯಾನ್ ಮಾಡಿ, ಚಿತ್ರಮಂದಿರಗಳನ್ನು ಸುಡುವುದಾಗಿ ಹೇಳಿದ್ದ ಬಿಜೆಪಿ ನಾಯಕರ ವಿರುದ್ಧ ಬಹು ಭಾಷಾ ನಟ ಪ್ರಕಾಶ್ ರಾಜ್ ಟೀಕಾ ಪ್ರಹಾರ ನಡೆಸಿದ್ದಾರೆ.

ಈ ಕುರಿತ ಬಿಜೆಪಿ ನಾಯಕರ ಹೇಳಿಕೆ ಇರುವ ವಿಡಿಯೋವೊಂದನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಕಾಶ್ ರಾಜ್,  'ವಿಸ್ವ ಗುರುವಿನ ಶಿಷ್ಯರು ಆರ್ ಆರ್ ಆರ್ ಸಿನಿಮಾ ಬ್ಯಾನ್ ಮಾಡಿ, ಚಿತ್ರಮಂದಿರಗಳನ್ನು ಕೆಡುವುತೀವಿ ಅಂದಿದ್ರು, ಎಲ್ ಮಕ್ಕಾಡೆ ಮಲ್ಕೊಂಡವ್ರೆ ನೋಡ್ರಾಪಾ..ಅಂತಾ ಲೇವಡಿ ಮಾಡಿದ್ದಾರೆ.

ಆರ್ ಆರ್ ಆರ್ ಚಿತ್ರ ಬಿಡುಗಡೆಯಾದಾಗ ಅದರಲ್ಲಿ ಕೋಮರಮ್ ಭೀಮನನ್ನು ಬಿಂಬಿಸಿದ ರೀತಿಯ ಬಗ್ಗೆ ತೆಲಂಗಾಣದ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಭೀಮನ ಪಾತ್ರದಾರಿ ಜ್ಯೂನಿಯರ್ ಎನ್ ಟಿಆರ್ ಮುಸ್ಲಿಂರು ಧರಿಸುವ ಟೋಫಿ ಧರಿಸಿದ್ದಕ್ಕೆ ವಿರೋಧಿಸಿದ್ದರು. ಅಲ್ಲದೇ, ಚಿತ್ರವನ್ನು ಬ್ಯಾನ್ ಮಾಡುವಂತೆಯೂ ಒತ್ತಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com