ನಟಿಯನ್ನು ಬ್ಲಾಕ್ ಮಾಡಿದ ಅಲ್ಲು ಅರ್ಜುನ್: ಸ್ಕ್ರೀನ್‌ಶಾಟ್ ಹಂಚಿಕೊಂಡ 'ವರುಡು' ನಾಯಕಿ ಭಾನುಶ್ರೀ ಮೆಹ್ರಾ!
2010ರಲ್ಲಿ ತೆರೆಗೆ ಬಂದ `ವರುಡು’ ಚಿತ್ರದಲ್ಲಿ ನಟಿ ಭಾನುಶ್ರೀ ಮೆಹ್ರಾ ಅವರು ಅಲ್ಲು ಅರ್ಜುನ್ ಜತೆ ನಟಿಸಿದ್ದರು. ಇದಾದ ನಂತರ ಭಾನುಶ್ರೀ ಕೆಲವು ಚಲನಚಿತ್ರಗಳಲ್ಲಿ ನಟಿಸಿದರು.
Published: 20th March 2023 01:47 PM | Last Updated: 20th March 2023 02:46 PM | A+A A-

ಅಲ್ಲು ಅರ್ಜುನ್
ಹೈದರಾಬಾದ್: 2010ರಲ್ಲಿ ತೆರೆಗೆ ಬಂದ `ವರುಡು’ ಚಿತ್ರದಲ್ಲಿ ನಟಿ ಭಾನುಶ್ರೀ ಮೆಹ್ರಾ ಅವರು ಅಲ್ಲು ಅರ್ಜುನ್ ಜತೆ ನಟಿಸಿದ್ದರು. ಇದಾದ ನಂತರ ಭಾನುಶ್ರೀ ಕೆಲವು ಚಲನಚಿತ್ರಗಳಲ್ಲಿ ನಟಿಸಿದರು.
ಆದರೆ ಅಷ್ಟಾಗಿ ಸಿನಿಮಾದಲ್ಲಿ ಯಶಸ್ಸು ಪಡೆದುಕೊಂಡಿಲ್ಲ. ಭಾನುಶ್ರೀ ಕನ್ನಡದಲ್ಲಿ ಕೋಮಲಕುಮಾರ್ ಅಭಿನಯದ `ಡೀಲ್ ರಾಜ’ ಚಿತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ನಟಿ, ಅಲ್ಲು ಅರ್ಜುನ್ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಅಲ್ಲು ಅರ್ಜುನ್ ತಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂದು ನಟಿ ಬಹಿರಂಗಪಡಿಸಿದ್ದಾರೆ.
ಭಾನುಶ್ರೀ ನಂತರ ತೆಲುಗಿನಲ್ಲೇ ‘ಡಿಂಗ್ ಡಾಂಗ್ ಬೆಲ್’, ‘ಅಲಾ ಎಲಾ’ ರಾಮ್ ಚರಣ್ ಸಿನಿಮಾ ‘ಗೋವಿಂದುಡು ಅಂದರಿವಾಡೆಲೆ’, ‘ರನ್’ ಮತ್ತು ‘ಮಿಸ್ ಇಂಡಿಯಾ’ದಲ್ಲಿ ಕೀರ್ತಿ ಸುರೇಶ್ ಜತೆ ಚಿಕ್ಕ ಪಾತ್ರದಲ್ಲಿ ನಟಿಸಿದರು.
If you ever feel like you're stuck in a rut, just remember that I acted in Varudu with Allu Arjun and STILL couldn't get any work. But I've learned to find humor in my struggles – especially now that Allu Arjun has blocked me on Twitter Go subscribe ?https://t.co/mqX2lVNjwx pic.twitter.com/ycSR5yGpfl
— Bhanushree Mehra (@IAmBhanuShree) March 18, 2023
ಮಾರ್ಚ್ 18ರಂದು ಭಾನುಶ್ರೀ ಟ್ವಿಟ್ಟರ್‌ನಲ್ಲಿ ಅಲ್ಲು ಅರ್ಜುನ್ ತನ್ನನ್ನು ಬ್ಲಾಕ್ ಮಾಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ನಟಿ ಟ್ವೀಟ್ ಸ್ಕ್ರೀನ್‌ಶಾಟ್ ಹಂಚಿಕೊಂಡು ನೀವು ಯಾವಾಗಲಾದರೂ ಹಳಿಯಲ್ಲಿ ಸಿಕ್ಕಿಕೊಂಡಿದ್ದೀರಿ ಎಂದು ಭಾಸವಾಗಿದೆಯೆ? ಆದರೆ ಆ ಅನುಭವ ನನಗಾಗಿದೆ. ನಾನು ಅಲ್ಲು ಅರ್ಜುನ್ ಜತೆ ವರುಡು ಚಿತ್ರದಲ್ಲಿ ನಟಿಸಿದ್ದೇನೆ.
ಆದರೂ ಇನ್ನೂ ಯಾವುದೇ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂಬುದನ್ನು ನೆನಪಿಡಿ. ಕೆಲಸ ಸಿಗುತ್ತಿಲ್ಲ ಎಂದು ನೆನಪು ಮಾಡಿಕೊಂಡಿದ್ದೇನೆ. ಆದರೆ, ನನ್ನ ಕಷ್ಟಗಳಿಂದಲೇ ಖುಷಿಯನ್ನು ಕಂಡುಕೊಳ್ಳಲು ಕಲಿತಿದ್ದೇನೆ. ಅದರಲ್ಲೂ ಅಲ್ಲು ಅರ್ಜುನ್ ಟ್ವಿಟರ್‌ನಲ್ಲಿ ನನ್ನನ್ನು ಬ್ಲಾಕ್ ಮಾಡಿದ್ದ ಮೇಲೆ ಕಲಿತುಕೊಂಡಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಭಾನುಶ್ರೀ ಈ ಟ್ವೀಟ್ ನಂತರದಲ್ಲಿ ಮತ್ತೊಂದು ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ, ತನ್ನ ವೃತ್ತಿಜೀವನದ ಹಿನ್ನಡೆಗೆ ಅಲ್ಲು ಅರ್ಜುನ್ ಕಾರಣರಲ್ಲ ಎಂತಲೂ ಸ್ಪಷ್ಟಪಡಿಸಿದ್ದಾರೆ.