ಗೋಲ್ಡನ್ ಸ್ಟಾರ್ ಗಣೇಶ್ ಮುಂದಿನ ಚಿತ್ರಕ್ಕೆ ಜೇಮ್ಸ್ ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್ ಕಟ್?
ಜೇಮ್ಸ್ (ಮಾರ್ಚ್ 2022) ಚಿತ್ರ ಬಿಡುಗಡೆಯಾದ ನಂತರ, ನಿರ್ದೇಶಕ ಚೇತನ್ ಕುಮಾರ್ ಅವರ ಮುಂದಿನ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ, ಇಶಾನ್‌ಗಾಗಿ ಸಿನಿಮಾ ನಿರ್ದೇಶಿಸುತ್ತಾರೆ ಎಂಬ ವದಂತಿ ಕೇಳಿ ಬಂದಿದ್ವು, ಆದರೂ ಅದು ಖಚಿತವಾಗಿರಲಿಲ್ಲ.
Published: 20th March 2023 11:51 AM | Last Updated: 20th March 2023 11:51 AM | A+A A-

ಚೇತನ್ ಕುಮಾರ್
ಜೇಮ್ಸ್ (ಮಾರ್ಚ್ 2022) ಚಿತ್ರ ಬಿಡುಗಡೆಯಾದ ನಂತರ, ನಿರ್ದೇಶಕ ಚೇತನ್ ಕುಮಾರ್ ಅವರ ಮುಂದಿನ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ, ಇಶಾನ್‌ಗಾಗಿ ಸಿನಿಮಾ ನಿರ್ದೇಶಿಸುತ್ತಾರೆ ಎಂಬ ವದಂತಿ ಕೇಳಿ ಬಂದಿದ್ವು, ಆದರೂ ಅದು ಖಚಿತವಾಗಿರಲಿಲ್ಲ.
ಆದರೆ ಮುಂದಿನ ಸಿನಿಮಾಗಾಗಿ ಚೇತನ್ ಸಜ್ಜಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಬಹದ್ದೂರ್ ಮತ್ತು ಬರ್ಜರಿ ಚಿತ್ರ ನಿರ್ಮಾಪಕರು ಗಣೇಶ್‌ಗಾಗಿ ಪ್ರಾಜೆಕ್ಟ್ ಮಾಡಲು ಸಿದ್ಧರಾಗಿದ್ದಾರೆ. ಇದು ಚೇತನ್ ಮತ್ತು ಗಣೇಶ್ ನಡುವಿನ ಮೊದಲ ಸಹಯೋಗವಾಗಿದೆ.
ಗಣೇಶ್ ಹೆಚ್ಚಾಗಿ ಪ್ರಣಯ ಮತ್ತು ಹಾಸ್ಯವಿರುವ ಕೌಟುಂಬಿಕ ಮನರಂಜನಾ ಚಿತ್ರಗಳಿಂದ ಹೆಸರುವಾಸಿಯಾಗಿದ್ದಾರೆ, ಆದರೆ ಚೇತನ್ ಮಾಸ್ ಕಮರ್ಷಿಯಲ್ ಸಿನಿಮಾಗಳಿಂದ ಪ್ರಸಿದ್ಧರಾಗಿದ್ದಾರೆ, ಹೀಗಾಗಿ ನಟ-ನಿರ್ದೇಶಕರ ಕಾಂಬಿನೇಷನ್ ಸಾಕಷ್ಟು ಆಸಕ್ತಿ ಮೂಡಿಸಿದೆ.
ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಈ ಯೋಜನೆಯ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ. ಸದ್ಯ ಗಣೇಶ್ ಪ್ರೀತಂ ಗುಬ್ಬಿ ನಿರ್ದೇಶನದ ಬಾನದಾರಿಯಲ್ಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ, ಆ ಸಿನಿಮಾ ರಿಲೀಸ್ ಆದ ನಂತರ ಹೊಸ ಸಿನಿಮಾ ಆರಂಭವಾಗಲಿದೆ.
ರುಕ್ಮಿಣಿ ವಸಂತ್ ಮತ್ತು ರೀಷ್ಮಾ ನಾಣಯ್ಯ ನಟಿಸಿರುವ ಬಾನದಾರಿಯಲ್ಲಿ ಹೊರತಾಗಿ, ಗಣೇಶ್ ಟ್ರಿಬಲ್ ರೈಡಿಂಗ್ ನಿರ್ದೇಶಕ ಮಹೇಶ್ ಗೌಡ ಅವರೊಂದಿಗೆ ಮುಂದಿನ ಸಿನಿಮಾ ಫಿಕ್ಸ್ ಆಗಿದೆ. ಸುನಿ ಅವರ ಮುಂದಿನ, ಚಿತ್ರಕ್ಕೆ ರಾಯಗಡ ಎಂಬ ಟೈಟಲ್ ಇಡಲಾಗಿದೆ.