ಗುರುರಾಜ್ ಕುಲಕರ್ಣಿ ಮುಂದಿನ ಸಿನಿಮಾದಲ್ಲಿ ರವಿಚಂದ್ರನ್ ನಟನೆ
ಕ್ರೇಜಿ ಸ್ಟಾರ್ ರವಿಚಂದ್ರನ್ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ. ಅನೀಶ್ ಜೊತೆಗೆ ಗೌರಿ ಶಂಕರದಲ್ಲಿ ನಟಿಸುತ್ತಿರುವ ರವಿಚಂದ್ರನ್, ಮತ್ತೊಂದು ಆಸಕ್ತಿದಾಯಕ ಸಿನಿಮಾಗೆ ಒಪ್ಪಿಗೆ ನೀಡಿದ್ದಾರೆ.
Published: 22nd March 2023 05:47 PM | Last Updated: 23rd March 2023 01:40 PM | A+A A-

ರವಿಚಂದ್ರನ್
ಕ್ರೇಜಿ ಸ್ಟಾರ್ ರವಿಚಂದ್ರನ್ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ. ಅನೀಶ್ ಜೊತೆಗೆ ಗೌರಿ ಶಂಕರದಲ್ಲಿ ನಟಿಸುತ್ತಿರುವ ರವಿಚಂದ್ರನ್, ಮತ್ತೊಂದು ಆಸಕ್ತಿದಾಯಕ ಸಿನಿಮಾಗೆ ಒಪ್ಪಿಗೆ ನೀಡಿದ್ದಾರೆ.
ರವಿಚಂದ್ರನ್ ಅವರ ಮುಂದಿನ ಸಿನಿಮಾ ನಿರ್ದೇಶಕ ಗುರುರಾಜ್ ಕುಲಕರಣಿ (ನಾಡಗೌಡ) ನಿರ್ದೇಶನದ ಕಾನೂನು ಕಥಾಹಂದರದ್ದಾಗಿರಲಿದೆ. ಅಮೃತ್ ಅಪಾರ್ಟ್ಮೆಂಟ್ ನ ನಿರ್ದೇಶಕ, ಆಕ್ಸಿಡೆಂಟ್ ಹಾಗೂ ಲಾಸ್ಟ್ ಬಸ್ ನ ನಿರ್ಮಾಪಕ ಇದೇ ಮೊದಲ ಬಾರಿಗೆ ಸಿನಿಮಾ ಮಾಡುತ್ತಿದ್ದಾರೆ.
ಏ.23 ರಂದು ಸಿನಿಮಾ ಅಧಿಕೃತವಾಗಿ ಸೆಟ್ಟೇರಲಿದೆ. ಇದಕ್ಕೂ ಮುನ್ನ ತಂಡದಿಂದ ಚಿತ್ರದ ಶೀರ್ಷಿಕೆ ಘೋಷಣೆಯಾಗಲಿದೆ ಹಾಗೂ ರವಿಚಂದ್ರನ್ ನಿರ್ವಹಿಸುತ್ತಿರುವ ಪಾತ್ರದ ವಿವರಗಳು ಹಾಗೂ ಫಸ್ಟ್ ಲುಕ್ ಬಹಿರಂಗವಾಗಲಿದೆ.
ಇದನ್ನೂ ಓದಿ: ರವಿಚಂದ್ರನ್ ಮತ್ತು ಅಪೂರ್ವ ನಟನೆಯ ಗೌರಿ ಶಂಕರ ಚಿತ್ರದ ಫಸ್ಟ್ ಲುಕ್ ರಿಲೀಸ್
ಕಥೆ ಕೇಳಿದ ಬಳಿಕ ರವಿಚಂದ್ರನ್ ಈ ಸಿನಿಮಾದ ಕಥೆ ಇಂದಿನ ಪೀಳಿಗೆಯೊಂದಿಗೆ ಕನೆಕ್ಟ್ ಆಗಲು ಅವಕಾಶ ನೀಡುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು ಹಾಗೂ ವಿವಿಧ ಫಾರ್ಮಾಟ್ ಗಳಲ್ಲಿ ಇಂದಿನ ದಿನಗಳ ಕಂಟೆಂಟ್ ಗೆ ಹೊಂದಾಣಿಕೆಯಾಗುತ್ತದೆ ಎಂದು ಹೇಳಿದ್ದಾಗಿ ನಿರ್ದೇಶಕ ಗುರುರಾಜ್ ಹೇಳಿದ್ದಾರೆ. ಈ ಸಿನಿಮಾ ಮೂಲಕ ರವಿಚಂದ್ರನ್ ಅವರಿಗೆ ಹೊಸ ವೀಕ್ಷಕರು ಲಭ್ಯವಾಗಲಿದ್ದಾರೆ ಎನ್ನುತ್ತಾರೆ ಗುರುರಾಜ್.