ಧ್ರುವ ಸರ್ಜಾ 'ಕಿಂಗ್ ಡಮ್'ಗೆ 'ಸತ್ಯವತಿ'ಯಾಗಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಎಂಟ್ರಿ!
ಧ್ರುವ ಸರ್ಜಾ ಅಭಿನಯದ ಮುಂಬರುವ ಚಿತ್ರ ಕೆಡಿ ಮೂಲಕ ನಟಿ ಶಿಲ್ಪಾ ಶೆಟ್ಟಿ ಕನ್ನಡ ಇಂಡಸ್ಟ್ರಿಗೆ ಮತ್ತೆ ಬರಲಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು.
Published: 23rd March 2023 02:08 PM | Last Updated: 23rd March 2023 03:14 PM | A+A A-

ಕೆ.ಡಿ ಸಿನಿಮಾ ಪೋಸ್ಟರ್
ಧ್ರುವ ಸರ್ಜಾ ಅಭಿನಯದ ಮುಂಬರುವ ಚಿತ್ರ ಕೆಡಿ ಮೂಲಕ ನಟಿ ಶಿಲ್ಪಾ ಶೆಟ್ಟಿ ಕನ್ನಡ ಇಂಡಸ್ಟ್ರಿಗೆ ಮತ್ತೆ ಬರಲಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು.
ಕೆ.ಡಿ ಸಿನಿಮಾ ಮೂಲಕ ಶಿಲ್ಪಾ ಶೆಟ್ಟಿ ಕನ್ನಡಕ್ಕೆ ಕಮ್ ಬ್ಯಾಕ್ ಆಗುತ್ತಿದ್ದು, ನಿರ್ದೇಶಕರು ಬುಧವಾರ ಶಿಲ್ಪಾ ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಧಿಕೃತಗೊಳಿಸಿದ್ದಾರೆ.
ಯುಗಾದಿ ಹಬ್ಬದ ಪ್ರಯುಕ್ತ ಶಿಲ್ಪಾ ಶೆಟ್ಟಿ ಅವರ ಸತ್ಯವತಿ ಲುಕ್ ರಿವೀಲ್ ಆಗಿದೆ. ಮಹಾಭಾರತದ ಕೌರವ ಕುಲದ ಮಹಾತಾಯಿ ಸತ್ಯವತಿಯಾಗಿದ್ದು, ಈ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ಧ್ರುವ ಸರ್ಜಾ ಅಮ್ಮನಾಗಿ ಕಾಣಿಸಿಕೊಳ್ಳಲಿದ್ದಾರಾ? ಎಂಬ ಪ್ರಶ್ನೆಯೊಂದು ಮೂಡುತ್ತಿದೆ. ಇನ್ನು ಬಾಲಿವುಡ್ ಖಳನಾಯಕ ಸಂಜಯ್ ದತ್ 'ಕೆಡಿ' ಸಿನಿಮಾದಲ್ಲಿ ಪವರ್ ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಪ್ರೇಮ್ ನಿರ್ದೇಶನದ ಕೆ.ಡಿ ಸಿನಿಮಾ ಮೂಲಕ ಬಾಲಿವುಡ್ ಬೆಡಗಿ ಶಿಲ್ಪಾಶೆಟ್ಟಿ 17 ವರ್ಷಗಳ ನಂತರ ಕನ್ನಡಕ್ಕೆ ಕಮ್ ಬ್ಯಾಕ್?
ಪೋಲ್ಕ ಚುಕ್ಕೆಗಳ ಸೀರೆ, ಹೆಣೆದ ಕೂದಲು, ಕೈಚೀಲ ಮತ್ತು ಸನ್‌ಗ್ಲಾಸ್‌ಗಳನ್ನು ಒಳಗೊಂಡಿರುವ ರೆಟ್ರೊ ಉಡುಗೆ-ಅಪ್‌ನಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಶಿಲ್ಪಾ ಪಾತ್ರದ ಹೆಸರು ಸತ್ಯವತಿ. ಕೆವಿಎನ್ ಪ್ರೊಡಕ್ಷನ್ಸ್‌ನಿಂದ ಬಂಡವಾಳ ಹೂಡಲ್ಪಟ್ಟ ಕೆಡಿಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿದ್ದಾರೆ. 1968-1978 ರ ನೈಜ ಘಟನೆಯನ್ನು ಆಧರಿಸಿದ ಕಥೆ ಕೆ.ಡಿ ಸಿನಿಮಾವಾಗಿದೆ, ಆಕ್ಷನ್ ಸೀಕ್ವೆನ್ಸ್‌ಗಳ ಹೊರತಾಗಿ ಇದೊಂದು ಪ್ರೇಮಕಥೆಯಾಗಿದೆ.