ತಮಿಳು ಖ್ಯಾತ ನಟ ಅಜಿತ್ ಕುಮಾರ್ ತಂದೆ ಪಿ. ಸುಬ್ರಹ್ಮಣ್ಯಂ ವಿಧಿವಶ
ತಮಿಳು ಖ್ಯಾತ ನಟ ಅಜಿತ್ ಕುಮಾರ್ ತಂದೆ ಪಿ.ಸುಬ್ರಹ್ಮಣ್ಯಂ (84) ಇಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ .
Published: 24th March 2023 10:53 AM | Last Updated: 24th March 2023 10:53 AM | A+A A-

ಪೋಷಕರೊಂದಿಗೆ ನಟ ಅಜಿತ್
ಚೆನ್ನೈ: ತಮಿಳು ಖ್ಯಾತ ನಟ ಅಜಿತ್ ಕುಮಾರ್ ತಂದೆ ಪಿ.ಸುಬ್ರಹ್ಮಣ್ಯಂ (84) ಇಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ .
ಅಜಿತ್ ಕುಮಾರ್ ಫ್ಯಾಮಿಲಿ ಜೊತೆ ಯುರೋಪ್ ಟೂರ್ನಲ್ಲಿದ್ದಾರೆ. ಆದಷ್ಟು ಬೇಗ ಚೆನ್ನೈನ ತಂದೆ ನಿವಾಸಕ್ಕೆ ಬಂದು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಅಜಿತ್ ಕುಮಾರ್ ಫ್ಯಾನ್ಸ್ ಟ್ವಿಟರ್ ಪೇಜ್ನಲ್ಲಿ ಫೋಟೋ ಶೇರ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
ನಟ ಅಜಿತ್ ತಂದೆ ಪಿ.ಸುಬ್ರಹ್ಮಣ್ಯಂ ಮೂಲತಹ ಕೇರಳದ ಪಾಲಕ್ಕಾಡ್ ಮೂಲದವರು. ಪಶ್ಚಿಮ ಬಂಗಾಳದ ಮೋಹಿನಿಯವರನ್ನು ಮದುವೆಯಾಗಿದ್ದರು. ಈ ದಂಪತಿಯ ಮೂರು ಗಂಡು ಮಕ್ಕಳಲ್ಲಿ ಅಜಿತ್ ನಡುವಿನವರಾಗಿದ್ದಾರೆ. ಅಜಿತ್ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಅಪಾರ ಖ್ಯಾತಿ ಪಡೆದಿದ್ದಾರೆ. ಇನ್ನಿಬ್ಬರು ಮಕ್ಕಳು ಉದ್ಯಮ ಕ್ಷೇತ್ರದಲ್ಲಿದ್ದಾರೆ.