ಗೌಡರ ಹುಡುಗನ್ನ ಹುಡುಕಿ; ಮದ್ವೆ ಆಗ್ತೀನಿ: ನಟಿ ರಮ್ಯಾ
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ರಮ್ಯಾ ಅವರು ಮದುವೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, ಗೌಡರ ಹುಡುಗನನ್ನು ಹುಡುಕಿ ಮದುವೆ ಆಗ್ತೀನಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
Published: 02nd May 2023 07:17 PM | Last Updated: 02nd May 2023 07:17 PM | A+A A-

ನಟಿ ರಮ್ಯಾ
ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ರಮ್ಯಾ ಅವರು ಮದುವೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, ಗೌಡರ ಹುಡುಗನನ್ನು ಹುಡುಕಿ ಮದುವೆ ಆಗ್ತೀನಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪ್ರಚಾರಕ್ಕೆ ಬಂದಿದ್ದ ರಮ್ಯಾ ಅವರನ್ನು ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು ಈ ಪೈಕಿ ಮದುವೆ ಯಾವಾಗ ಆಗ್ತೀರಾ? ಎಂಬುದು ಪ್ರಮುಖವಾಗಿತ್ತು. ಇದಕ್ಕೆ ನಗುತ್ತಲೇ ಉತ್ತರಿಸಿದ ಅವರು, ನನಗೆ ಹುಡುಗ ಸಿಗುತ್ತಿಲ್ಲ. ನೀವೇ ಹುಡುಗನನ್ನು ಹುಡುಕಿಕೊಡಿ ಎಂದಿದ್ದಾರೆ.
‘ನನಗೂ ಹುಡುಗನ್ನ ನೋಡಿ ನೋಡಿ ಸಾಕಾಗೋಯ್ತು. ಮಂಡ್ಯದಲ್ಲೇ ಸ್ವಯಂವರ ಮಾಡಿ’ ಎಂದು ರಮ್ಯಾ ಹಾಸ್ಯ ಚಟಾಕಿ ಹಾರಿಸಿದರು. ಉತ್ತರಕಾಂಡ ಹೆಸರಿನ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿರುವ ರಮ್ಯಾ, ಈ ಬಾರಿಯ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಸಕ್ರೀಯರಾಗಿದ್ದು, ಮಂಡ್ಯ ಸೇರಿದಂತೆ ಹಲವು ಕಡೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.