ನನ್ನ ಸಹೋದರನಿಗಾಗಿ ನಾನು 'ಅಜಾಗ್ರತ' ಸಿನಿಮಾ ಒಪ್ಪಿಕೊಂಡೆ: ರಾಧಿಕಾ ಕುಮಾರಸ್ವಾಮಿ

ರವಿ ಬೋಪಣ್ಣ (2022) ಅವರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ರಾಧಿಕಾ ಕುಮಾರಸ್ವಾಮಿ ಸದ್ಯ ನಿರ್ಮಾಣದ (ಶಮಿಕಾ ಪ್ರೊಡಕ್ಷನ್ಸ್) ಅಡಿಯಲ್ಲಿ ನಿರ್ಮಿಸಲಾದ ಭೈರಾದೇವಿ ಬಿಡುಗಡೆಗೆ ಕಾಯುತ್ತಿದ್ದಾರೆ. 
ರಾಧಿಕಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ
Updated on

ರವಿ ಬೋಪಣ್ಣ (2022) ಅವರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ರಾಧಿಕಾ ಕುಮಾರಸ್ವಾಮಿ ಸದ್ಯ ನಿರ್ಮಾಣದ (ಶಮಿಕಾ ಪ್ರೊಡಕ್ಷನ್ಸ್) ಅಡಿಯಲ್ಲಿ ನಿರ್ಮಿಸಲಾದ ಭೈರಾದೇವಿ ಬಿಡುಗಡೆಗೆ ಕಾಯುತ್ತಿದ್ದಾರೆ.  ಈಗ ಅಂತಿಮವಾಗಿ ಒಂದು ವರ್ಷದ ವಿರಾಮದ ನಂತರ ಮತ್ತೊಂದು ಯೋಜನೆಗೆ ಸಹಿ ಹಾಕಿದ್ದಾರೆ.

ಎಂ. ಶಶಿಧರ್ ನಿರ್ದೇಶನದ 'ಅಜಾಗ್ರತ' ಎಂಬ ಈ ಬಹುಭಾಷಾ ಚಿತ್ರ ಏಳು ಭಾಷೆಗಳಲ್ಲಿ ತಯಾರಾಗಿದೆ. ಶನಿವಾರ ಹೈದರಾಬಾದ್‌ನಲ್ಲಿ ಪ್ರಾರಂಭವಾದ ಈ ಚಿತ್ರದ ಮೂಲಕ ದಕ್ಷಿಣ ಭಾರತಕ್ಕೆ ಪಾದಾರ್ಪಣೆ ಮಾಡಿದ ಶ್ರೇಯಸ್ ತಲ್ಪಾಡೆ ಕೂಡ ಅಜಾಗ್ರತದಲ್ಲಿ ನಟಿಸಿದ್ದಾರೆ.

ಈ ವೇಳೆ ಸಿನಿಮಾ ಎಕ್ಸ್ ಪ್ರೆಸ್ ಜೊತೆ ರಾಧಿಕಾ ಕುಮಾರಸ್ವಾಮಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಚಿತ್ರವನ್ನು ನಿರ್ಮಿಸುತ್ತಿರುವ ತನ್ನ ಸಹೋದರ ರವಿರಾಜ್‌ಗಾಗಿ ಅಜಾಗ್ರತ ಚಿತ್ರವನ್ನು  ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಭೈರಾದೇವಿ ಬಿಡುಗಡೆಯಾಗುವವರೆಗೂ ನಾನು ಯಾವುದೇ ಚಿತ್ರವನ್ನು ಒಪ್ಪಿಕೊಳ್ಳಲು ಬಯಸಲಿಲ್ಲ. ವಾಸ್ತವವಾಗಿ, ನನಗೆ ಮಲಯಾಳಂ ಇಂಡಸ್ಟ್ರಿಯಿಂದಲೂ ಆಫರ್‌ಗಳು ಬಂದವು ಆದರೆ ಬೇರೆ ಯಾವುದೇ ಪ್ರಾಜೆಕ್ಟ್‌ಗಳನ್ನು ತೆಗೆದುಕೊಳ್ಳುವ ಮೊದಲು ನನ್ನ ಚಿತ್ರವನ್ನು ಮೊದಲು ಬಿಡುಗಡೆ ಮಾಡಲು ನಾನು ಅವುಗಳನ್ನು ಕೈಬಿಡಬೇಕಾಯಿತು ಎಂದು ಹೇಳಿದ್ದಾರೆ.

ಶಶಿಧರ್ ನಿರ್ದೇಶನದ ಮುಂದಿನ ಚಿತ್ರವನ್ನು ನನ್ನ ಸಹೋದರ ನಿರ್ಮಿಸುತ್ತಿದ್ದರು ಮತ್ತು ನಾನು ಚಿತ್ರದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಕೆಲವು ನಾಯಕಿಯರ ಹೆಸರುಗಳನ್ನು ಸೂಚಿಸಿದ್ದೇನೆ ಆದರೆ ಯಾವುದೂ ಅವರಿಗೆ ಸರಿಹೊಂದಲಿಲ್ಲ,  ನಾಯಕಿಯನ್ನು ಹುಡುಕಲು ನಡೆಸುತ್ತಿದ್ದ ಹೋರಾಟವನ್ನು ನಾನು ನೋಡಿದೆ . ಹೀಗಾಗಿ ನಾನು ಚಿತ್ರ ಒಪ್ಪಿಕೊಂಡೆ.  ನಾನು  ಸಿನಿಮಾ ಒಪ್ಪಿಕೊಂಡಿದ್ದರಿಂದ  ಅವರು ಸಂತೋಷ ಪಟ್ಟಿದ್ದಾರೆ ಎಂಬುದಾಗಿ ರಾಧಿಕಾ ತಿಳಿಸಿದ್ದಾರೆ. ಭೈರಾದೇವಿಯ ನಂತರವೇ ಅಜಾಗ್ರತ ರಿಲೀಸ್ ಆಗಲಿದೆ ಎಂದು ರಾಧಿಕಾ ತಿಳಿಸಿದ್ದಾರೆ.

ನಿರ್ದೇಶಕ ಶಶಿಧರ್ ತನ್ನ ಸಹೋದರನೊಂದಿಗಿನ ಚರ್ಚೆಯ ಸಮಯದಲ್ಲಿ ಅವರ ಕೆಲಸದ ಮಾದರಿಯನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅವರಿಗೆ ಚಲನಚಿತ್ರ ನಿರ್ಮಾಣದ ಬಗ್ಗೆಬಹಳ ಉತ್ಸಾಹವಿದೆ ಎಂದು ಅರ್ಥಮಾಡಿಕೊಂಡಿದ್ದೇನೆ ಎಂದು ರಾಧಿಕಾ ಹೇಳುತ್ತಾರೆ. ನಾನು ಸಿನಿಮಾಗೆ ಬಂದಾಗ, ನಾನು ಸಂಭಾಷಣೆಯ ಜೊತೆಗೆ  ಕಥೆಯನ್ನು ಕೇಳಿದ್ದೆ.  ನಿರ್ದೇಶಕರು ಒಂದು ದಿನದ ಸಮಯದಲ್ಲಿ ನನಗೆ ತಿಳಿಸಿದರು. 'ವಿಷಯ-ಆಧಾರಿತ', ಕಥೆಯನ್ನು  ಕಮರ್ಷಿಯಲ್ ಅಂಶಗಳೊಂದಿಗೆ  ಉತ್ತಮ ಸಂದೇಶ ಹೊಂದಿದೆ.

ನಾನು ನಿರ್ದೇಶಕರ ಚೊಚ್ಚಲ ಚಿತ್ರ ಗರ್ಗವನ್ನು ನೋಡಿದ್ದೇನೆ, ಮೊದಲ ಪ್ರಯತ್ನ ಚೆನ್ನಾಗಿದೆ. ನಾನು ಪ್ರಾಜೆಕ್ಟ್‌ಗೆ ಸೇರಿದ ನಂತರ ಅವರು ಅಜಾಗ್ರತ ಗಮನಾರ್ಹವಾಗಿ ಸುಧಾರಿಸಿದ್ದಾರೆ, ವಿಶೇಷವಾಗಿ ಹಾಡುಗಳು ಮತ್ತು ಚಿತ್ರವನ್ನು ಪ್ರಸ್ತುತಪಡಿಸುವ ರೀತಿ ವಿಶೇಷವಾಗಿದೆ ಎಂದಿದ್ದಾರೆ.

ರಾಧಿಕಾ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದಾರೆ. “ಅಜಾಗ್ರತ ಮತ್ತು ಭೈರಾದೇವಿಯ ಹೊರತಾಗಿ, ನಾನು ಮತ್ತೊಂದು ಸಿನಿಮಾಗೆ ಸಿದ್ಧವಾಗಿದ್ದೇನೆ. ಕಥೆ ಸಿದ್ಧವಾಗುತ್ತಿದ್ದು, ಸಿನಿಮಾ ರಿಲೀಸ್ ಆದ ನಂತರ ಘೋಷಣೆ ಮಾಡಲಾಗುವುದು.  ತಮ್ಮ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಇನ್ನಷ್ಟು ವೈವಿಧ್ಯಮಯ ಸಿನಿಮಾಗಳನ್ನು ತರಲು ಮುಂದಾಗಿರುವುದಾಗಿ ರಾಧಿಕಾ ತಿಳಿಸಿದ್ದಾರೆ.

ನನ್ನ ನಿರ್ಮಾಣದ ಸಿನಿಮಾದಲ್ಲಿ ನಾನೇ ನಟಿಸಬೇಕು ಎಂಬ ಅಗತ್ಯವಿಲ್ಲ. ಇತರ ನಟರು ಮತ್ತು ನಿರ್ದೇಶಕರು ಹೇಳಲು ಉತ್ತಮ ಕಥೆಯನ್ನು ಹೊಂದಿರುವವರೆಗೆ ಯೋಜನೆಗಳನ್ನು ಬ್ಯಾಂಕ್‌ರೋಲ್ ಮಾಡಲು ನಾನು ರೆಡಿ ಎಂದಿದ್ದಾರೆ ರಾಧಿಕಾ.

ನಟಿ ಮತ್ತು ನಿರ್ಮಾಪಕಿಯಾಗಿ, ರಾಧಿಕಾ ಅವರು ಸಿನಿಮಾದ ಪ್ರತಿಯೊಂದು ವಿಭಾಗದಲ್ಲೂ ಕೆಲಸ ಮಾಡಲು ಇಷ್ಟಪಡುತ್ತಾರೆ. ನಾನು ಪ್ರತಿ ವಿಭಾಗದಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುತ್ತೇನೆ. ಆಜಾಗ್ರತ ಇದೊಂದು ಸರಳವಾದ ಕಥೆಯಾಗಿದ್ದು, ಮೇಕಿಂಗ್ ಮೇಲೆ ಹೆಚ್ಚಿನ ಗಮನವನ್ನು ನೀಡಲಾಗಿದೆ, ಇದು ಇಂದಿನ ಚಲನಚಿತ್ರಗಳಲ್ಲಿ ಅತಿ ಪ್ರಮುಖವಾಗಿದೆ ಎಂದು ಅವರು ಹೇಳುತ್ತಾರೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಕೊಂಕಣಿ ಮತ್ತು ಮರಾಠಿ ಸೇರಿದಂತೆ ಏಳು ಭಾಷೆಗಳಲ್ಲಿ ಅಜಾಗ್ರತವನ್ನು ಏಕಕಾಲದಲ್ಲಿ ಚಿತ್ರೀಕರಿಸಲಾಗುತ್ತದೆ ಮತ್ತು ಬಿಡುಗಡೆ ಮಾಡಲಾಗುತ್ತದೆ. ಚಿತ್ರದಲ್ಲಿ ಸಮುದ್ರಕನಿ, ಜಯಪ್ರಕಾಶ್, ಸ್ಪರ್ಶ ರೇಖಾ, ದೇವರಾಜ್, ಸುಚೇಂದ್ರ ಪ್ರಸಾದ್, ಮತ್ತು ವಿನಯ್ ಪ್ರಸಾದ್ ಕೂಡ ನಟಿಸಿದ್ದಾರೆ. ಶ್ರೀಹರಿ ಸಂಗೀತ ನೀಡಿದ್ದು, ಸಂದೀಪ್ ವಲ್ಲೂರಿ ಛಾಯಾಗ್ರಾಹಣ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com