
ಈ ಹಿಂದೆ ಹಲವು ನಾಯಕರು ಕಿರುತೆರೆಯಿಂದ ಬೆಳ್ಳಿತೆರೆಗೆ ಪ್ರವೇಶಿಸಿ ಯಶಸ್ಸು ಕಂಡಿದ್ದಾರೆ, ಅವರ ಪಟ್ಟಿಗೆ ಈಗ ನಟ ಶರತ್ ಪದ್ಮನಾಭ ಸೇರುತ್ತಿದ್ದಾರೆ ಪಾರು ಧಾರಾವಾಹಿಯಲ್ಲಿನ ಜನಪ್ರಿಯ ಪಾತ್ರಕ್ಕೆ ಹೆಸರುವಾಸಿಯಾದ ನಟ, ಈಗ ವರ್ಧನ್ ಎಂಹೆಚ್ ಅವರ ಸಸ್ಪೆನ್ಸ್ ಥ್ರಿಲ್ಲರ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಚಲನಚಿತ್ರ ನಿರ್ಮಾಣದಲ್ಲಿ ಡಿಪ್ಲೊಮಾ ಪಡೆದಿರುವ ನಿರ್ದೇಶಕ ವರ್ಧನ್ ಅವರು ಈ ಹಿಂದೆ ರೈತರ ಕುರಿತು ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ, ಇದು ಅವರಿಗೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಈ ಮುಂಬರುವ ಈ ಸಿನಿಮಾ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ.
ಚಿತ್ರದ ಬಗ್ಗೆಮಾಹಿತಿ ನೀಡಿರುವ, ವರ್ಧನ್, ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಮಡಿಲ್ಲ , ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದರೂ, ಚಲನಚಿತ್ರದ ಮೊದಲಾರ್ಧವು ಹಾಸ್ಯಮಯ ಸನ್ನಿವೇಶಗಳಿಂದ ಕೂಡಿದೆಎಂದು ಹೇಳಿದ್ದಾರೆ.
ಚಿತ್ರವು ನಗರ ಮತ್ತು ಕಾಡಿನೊಳಗೆ ಇರುವ ಪ್ರಮುಖ ಭಾಗಗಳಲ್ಲಿ ನಡೆಯುತ್ತದೆ. ಬೆಂಗಳೂರು, ಸಕಲೇಶಪುರ ಮತ್ತು ಮಡಿಕೇರಿಯಲ್ಲಿ ಸ್ಥಳಗಳನ್ನು ಗುರುತಿಸಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಚಿತ್ರೀಕರಣದ ಮೊದಲ ಶೆಡ್ಯೂಲ್ ಮುಗಿದಿದ್ದು, ಮುಂದಿನ ದೃಶ್ಯಗಳ ಚಿತ್ರೀಕರಣವನ್ನು ತಂಡವು ಶೀಘ್ರದಲ್ಲೇ ಪುನರಾರಂಭಿಸಲಿದೆ. ಮೇರಿ, ಮೋಜಿ, ಬ್ರಾಹ್ಮಿ ಮತ್ತು ಇನ್ನೂ ಬಿಡುಗಡೆಯಾಗದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಅನೂಷಾ ಕೃಷ್ಣ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ರೋಣದ ಬಕ್ಕೇಶ್ ಸಂಗೀತ ಸಂಯೋಜನೆ ಮಾಡಲಿದ್ದು, ಚೊಚ್ಚಲ ನಟ ಎಂಕೆ ರಾಜ್ ಛಾಯಾಗ್ರಹಣ ಮಾಡಲಿದ್ದಾರೆ.
Advertisement