ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಪ್ರಾಜೆಕ್ಟ್ ನಿಂತುಹೋಗಿದ್ದು ಹೇಗೆ, ನಿರ್ದೇಶಕ ನರ್ತನ್ ಏನಂತಾರೆ?

ಮಫ್ತಿ ಚಿತ್ರದ ನಿರ್ದೇಶಕ ನರ್ತನ್ ಶಿವರಾಜ್ ಕುಮಾರ್ ಜೊತೆ ಭೈರತಿ ರಣಗಲ್ ಚಿತ್ರವನ್ನು ಮಾಡಲು ಹೊರಟಿದ್ದಾರೆ. ಈ ಹಿಂದೆ ಅವರು ರಾಕಿಂಗ್ ಸ್ಟಾರ್ ಯಶ್ ಜೊತೆ 19ನೇ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. 
ರಾಕಿಂಗ್ ಸ್ಟಾರ್ ಯಶ್
ರಾಕಿಂಗ್ ಸ್ಟಾರ್ ಯಶ್
Updated on

ಬೆಂಗಳೂರು: ಮಫ್ತಿ ಚಿತ್ರದ ನಿರ್ದೇಶಕ ನರ್ತನ್ ಶಿವರಾಜ್ ಕುಮಾರ್ ಜೊತೆ ಭೈರತಿ ರಣಗಲ್ ಚಿತ್ರವನ್ನು ಮಾಡಲು ಹೊರಟಿದ್ದಾರೆ. ಈ ಹಿಂದೆ ಅವರು ರಾಕಿಂಗ್ ಸ್ಟಾರ್ ಯಶ್ ಜೊತೆ 19ನೇ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. 

ಕೆಜಿಎಫ್ ಚಿತ್ರಕ್ಕೂ ಮುುನ್ನ ಒಂದೊಳ್ಳೆ ಚಿತ್ರ ಮಾಡೋಣವೆಂದು ಯಶ್ ಮತ್ತು ನರ್ತನ್ ಮಧ್ಯೆ ಮಾತುಕತೆಯಾಗಿತ್ತಂತೆ. ಅಂದುಕೊಂಡಂತೆ ನಡೆದಿದ್ದರೆ ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಯಶ್ (Yash) ನಟಿಸಬೇಕಿತ್ತು. ಎಲ್ಲವೂ ಒಪ್ಪಿತವಾಗಿದ್ದರೆ ಚಿತ್ರೀಕರಣವೂ ನಡೆದಿರುತ್ತಿತ್ತು. ಆದರೆ, ಈ ಪ್ರಾಜೆಕ್ಟ್ ನಿಂತು ಹೋಯಿತು. ಒಂದೂವರೆ ವರ್ಷದಿಂದ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದ ನರ್ತನ್, ಯಾಕೆ ಈ ಸಿನಿಮಾ ಮಾಡಲಿಲ್ಲ ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ನಿನ್ನೆ ಚಿತ್ರದ ಮುಹೂರ್ತ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಅದರ ಬಗ್ಗೆ ಮಾತನಾಡಿದ್ದಾರೆ.

‘ನಾನು ಮಾಡಿದ್ದ ಕಥೆಯು ಬೇರೊಂದು ಸಿನಿಮಾದ ಕಥೆಯನ್ನು ಹೋಲುತ್ತಿತ್ತು. ಹಾಗಾಗಿ ಯಶ್ ಅವರು ಈ ಸಿನಿಮಾವನ್ನು ಮಾಡುವುದು ಬೇಡ ಎಂದರು. ಇದರ ಹೊರತಾಗಿ ಬೇರೆ ಯಾವುದೇ ಕಾರಣವಿಲ್ಲ’ ಎಂದಿದ್ದಾರೆ.

ಖಂಡಿತಾ ಮುಂದೊಂದು ದಿನ ಯಶ್ ಜೊತೆ ಸಿನಿಮಾ ಮಾಡಿಯೇ ಮಾಡುತ್ತೇನೆ, ಸೂಪರ್ ಸ್ಟಾರ್ ಅವರು. ಅವರಿಗಾಗಿ ಸ್ಕ್ರಿಪ್ಟ್ ಬರೆಯುತ್ತಿದ್ದೇವೆ. ಅವರು ಸಂಪರ್ಕದಲ್ಲಿದ್ದಾರೆ. ನೆಟ್ ಫ್ಲಿಕ್ಸ್, ಅಮೆಜಾನ್ ಲ್ಲಿ ದಿನಕ್ಕೆ ನಾಲ್ಕೈದು ಸಿನಿಮಾ ಬರುತ್ತದೆ. ನಾವು ಕಥೆ ಬರೆದಿರೋದು ಯಾವುದಾದರೊಂದರಲ್ಲಿ ಬಂದಿರುತ್ತದೆ. ಆಗ ನಾವು ಕಥೆ, ಸ್ಕ್ರಿಪ್ಟ್ ಬದಲಾಯಿಸಬೇಕಾಗುತ್ತದೆ. ಯಶ್ ಅವರಿಗೆ ಬೇರೆ ಲೆವಲ್ಲಲ್ಲಿ ಚಿತ್ರ ಮಾಡಬೇಕಾಗುತ್ತದೆ. ತಿದ್ದುಪಡಿ ಮಾಡುತ್ತಿದ್ದೇವೆ. ಮುಂದೊಂದು ದಿನ ಅವರ ಜೊತೆ ಸಿನಿಮಾ ಮಾಡುತ್ತೇವೆ ಎಂಬ ನಂಬಿಕೆಯಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com