ತ್ರಿಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಮನ್ಸೂರ್ ಅಲಿ ಖಾನ್ ಬಂಧಿಸುವಂತೆ ತಮಿಳುನಾಡು ಪೊಲೀಸರಿಗೆ NCW ನಿರ್ದೇಶನ
ನಟಿ ತ್ರಿಶಾ ಕೃಷ್ಣನ್ ಬಗ್ಗೆ ಕೀಳು ಮಟ್ಟದ ಹೇಳಿಕೆ ಕೊಟ್ಟಿರುವ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ (NCW) ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿದೆ.
Published: 20th November 2023 05:07 PM | Last Updated: 20th November 2023 07:25 PM | A+A A-

ತ್ರಿಷಾ-ಮನ್ಸೂರ್ ಅಲಿ ಖಾನ್
ನವದೆಹಲಿ: ನಟಿ ತ್ರಿಶಾ ಕೃಷ್ಣನ್ ಬಗ್ಗೆ ಕೀಳು ಮಟ್ಟದ ಹೇಳಿಕೆ ಕೊಟ್ಟಿರುವ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ (NCW) ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿದೆ.
NCW ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ನಟ ಮನ್ಸೂರ್ ಅಲಿ ಖಾನ್ ನಟಿ ತ್ರಿಷಾ ಕೃಷ್ಣ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ವಿಷಯದಲ್ಲಿ ನಾವು ಸ್ವಯಂ ಪ್ರೇರಿತರಾಗಿ IPC ಸೆಕ್ಷನ್ 509 B ಮತ್ತು ಇತರ ಸೆಕ್ಷನ್ ಗಳನ್ನು ಜಾರಿಗೊಳಿಸುವಂತೆ DGPಗೆ ನಿರ್ದೇಶಿಸುತ್ತೇವೆ ಎಂದು ಬರೆದುಕೊಂಡಿದೆ.
ಈ ಹೇಳಿಕೆ ಬಗ್ಗೆ ಲಿಯೋ ನಿರ್ದೇಶಕ ಲೋಕೇಶ್ ಕನಕರಾಜ್ ಮಾತನಾಡಿ, ತಾವೆಲ್ಲರೂ ಒಂದೇ ತಂಡದಲ್ಲಿ ಕೆಲಸ ಮಾಡಿದ್ದೇವೆ. ಮನ್ಸೂರ್ ಅಲಿ ಖಾನ್ ಕೊಟ್ಟಿರುವ ಸ್ತ್ರೀದ್ವೇಷದ ಕಾಮೆಂಟ್‌ಗಳನ್ನು ಕೇಳಿ ನಾನು ಅಸಮಾಧಾನಗೊಂಡಿದ್ದು ಕೋಪಗೊಂಡಿದ್ದೇನೆ ಎಂದಿದ್ದರು.
ದಕ್ಷಿಣ ಭಾರತದ ನಟ ಮನ್ಸೂರ್ ಅಲಿ ಖಾನ್ ಇತ್ತೀಚೆಗೆ ನಟಿ ತ್ರಿಶಾ ಕೃಷ್ಣನ್ ಅವರ ಬಗ್ಗೆ ಹೇಳಿಕೆ ನೀಡಿದ್ದು, ಅದರ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ತ್ರಿಶಾ ಕೃಷ್ಣನ್ 'ಲಿಯೋ' ಸ್ಟಾರ್ ಮನ್ಸೂರ್ ಅಲಿ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: Leo: ತ್ರಿಶಾ ಕುರಿತಂತೆ ರೇಪ್, ಬೆಡ್ ರೂಂ ಸೀನ್ ಹೇಳಿಕೆ ಕೊಟ್ಟ ನಟ ಮನ್ಸೂರ್ ಅಲಿ ಖಾನ್, ವಿಡಿಯೋ ವೈರಲ್!
ತ್ರಿಷಾ ಅವರು, ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡಿರುವ ವೀಡಿಯೊ ಇತ್ತೀಚೆಗೆ ನನ್ನ ಗಮನಕ್ಕೆ ಬಂದಿದೆ. ಆ ನಟನ ಮಾತುಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅಗೌರವ, ಸ್ತ್ರೀದ್ವೇಷ, ಕೆಟ್ಟ ಅಭಿರುಚಿ ಹಾಗೂ ಲೈಂಗಿಕ ಲೋಭವನ್ನು ಹೊಂದಿದೆ. ನನ್ನೊಂದಿಗೆ ನಟಿಸಲು ಅವರು ಬಯಸಬಹುದು ಆದರೆ ನಾನು ಅವರಂತಹ ಕೆಟ್ಟ ವ್ಯಕ್ತಿಯೊಂದಿಗೆ ಎಂದಿಗೂ ಪರದೆಯನ್ನು ಹಂಚಿಕೊಳ್ಳುವುದಿಲ್ಲ. ಈ ಹಿಂದೆ ಪರದೆ ಹಂಚಿಕೊಂಡಿದ್ದಕ್ಕೆ ನಾನು ಕೃತಜ್ಞಳಾಗಿದ್ದೇನೆ. ಮತ್ತು ನನ್ನ ಉಳಿದ ಚಲನಚಿತ್ರ ವೃತ್ತಿಜೀವನದಲ್ಲಿ ನಾನು ಅವರೊಟ್ಟಿಗೆ ಎಂದಿಗೂ ಪರದೆ ಹಂಚಿಕೊಳ್ಳದಂತೆ ಎಚ್ಚರವಹಿಸುತ್ತೇನೆ. ಅವರಂತಹವರು ಮನುಕುಲಕ್ಕೆ ಕೆಟ್ಟ ಹೆಸರು ತರುತ್ತಾರೆ ಎಂದು ಬರೆದುಕೊಂಡಿದ್ದಾರೆ.
ತ್ರಿಶಾಗೆ ಮನ್ಸೂರ್ ಅಲಿ ಖಾನ್ ಹೇಳಿದ್ದೇನು?
ಮನ್ಸೂರ್ ಅಲಿ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದು, 'ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಚಿತ್ರದಲ್ಲಿ ರೇಪ್ ಸೀನ್ ಇರುತ್ತದೆ ಎಂದು ನಾನು ಭಾವಿಸಿದೆ. ನನ್ನ ಹಿಂದಿನ ಚಿತ್ರಗಳಲ್ಲಿ ಇತರ ನಟಿಯರೊಂದಿಗೆ ಮಾಡಿದಂತೆ ನಾನು ತ್ರಿಷಾಳನ್ನು ಬೆಡ್ ರೂಂಗೆ ಕರೆದುಕೊಂಡು ಹೋಗಿ ರೇಪ್ ಮಾಡುವ ಸೀನ್ ಇರುತ್ತದೆ ಎಂದು ನಾನು ಭಾವಿಸಿದೆ. ನಾನು ಅನೇಕ ಚಿತ್ರಗಳಲ್ಲಿ ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಇದು ನನಗೆ ಹೊಸದಲ್ಲ. ಆದರೆ ಲಿಯೋ ಸಿನಿಮಾನವರು ತ್ರಿಷಾರ ಮುಖವನ್ನು ಸಹ ನನಗೆ ತೋರಿಸಲಿಲ್ಲ ಎಂದು ಹೇಳಿದ್ದಾರೆ.
600 ಕೋಟಿ ಕ್ಲಬ್‌ನಲ್ಲಿ ಲಿಯೋ
ಸಾಮಾಜಿಕ ಜಾಲತಾಣಗಳಲ್ಲಿ ತ್ರಿಷಾ ಪರವಾಗಿ ಹಲವು ಹ್ಯಾಶ್‌ಟ್ಯಾಗ್‌ಗಳು ಹರಿದಾಡುತ್ತಿದ್ದು, ಮನ್ಸೂರ್ ಅವರನ್ನು ಬಂಧಿಸಿ ಎಲ್ಲರ ಮುಂದೆ ಕ್ಷಮೆಯಾಚಿಸಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿವೆ. ಲಿಯೋವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ. ದಳಪತಿ ವಿಜಯ್, ತ್ರಿಶಾ, ಮನ್ಸೂರ್ ಅಲಿ ಖಾನ್, ಸಂಜಯ್ ದತ್ ಮತ್ತು ಅರ್ಜುನ್ ಸರ್ಜಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕಲೆಕ್ಷನ್ ಬಗ್ಗೆ ಹೇಳುವುದಾದರೆ, ಚಿತ್ರವು ವಿಶ್ವಾದ್ಯಂತ 600 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಸದ್ಯದಲ್ಲೇ ಚಿತ್ರ ಒಟಿಟಿಗೆ ಬರಲಿದೆ.