ರಾಜ್​ ಬಿ ಶೆಟ್ಟಿಗೆ ಮಾಲಿವುಡ್​ ಬಿಗ್​ ಆಫರ್​: ​ಮಮ್ಮುಟ್ಟಿ ಜೊತೆ ಸ್ಕ್ರೀನ್​ ಶೇರ್​ ಮಾಡಲಿರುವ 'ಟೋಬಿ'!

ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಹೊಸ ಸಿನಿಮಾ 'ಟರ್ಬೊ'ದಲ್ಲಿ ರಾಜ್‌ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ವತ: ಮಮ್ಮುಟ್ಟಿ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ತಮ್ಮ ಸಿನಿಮಾ ತಂಡಕ್ಕೆ ರಾಜ್ ಬಿ ಶೆಟ್ಟಿಯನ್ನು ಗ್ರ್ಯಾಂಡ್ ಆಗಿಯೇ ವೆಲ್‌ಕಮ್ ಮಾಡಿದ್ದಾರೆ.
ಟರ್ಬೋ ಸಿನಿಮಾ ಸ್ಟಿಲ್
ಟರ್ಬೋ ಸಿನಿಮಾ ಸ್ಟಿಲ್

ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಹೊಸ ಸಿನಿಮಾ 'ಟರ್ಬೊ'ದಲ್ಲಿ ರಾಜ್‌ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ವತ: ಮಮ್ಮುಟ್ಟಿ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ತಮ್ಮ ಸಿನಿಮಾ ತಂಡಕ್ಕೆ ರಾಜ್ ಬಿ ಶೆಟ್ಟಿಯನ್ನು ಗ್ರ್ಯಾಂಡ್ ಆಗಿಯೇ ವೆಲ್‌ಕಮ್ ಮಾಡಿದ್ದಾರೆ.

ಸ್ಯಾಂಡಲ್​ವುಡ್​ ನಟ ರಾಜ್​ ಬಿ ಶೆಟ್ಟಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಮಾಡುತ್ತಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ ‘ಟರ್ಬೊ’ ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಸ್ಯಾಂಡಲ್​ವುಡ್ ನಟ ರಾಜ್ ಬಿ ಶೆಟ್ಟಿ ಕೂಡ ನಟಿಸುತ್ತಿದ್ದಾರೆ.

ವೈಶಾಖ್ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ಮಲಯಾಳಂ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಸದ್ಯ ಮಮ್ಮುಟಿ ಫಿಲಂಸ್ ಅಧಿಕೃತವಾಗಿ ರಾಜ್ ಬಿ ಶೆಟ್ಟಿಯನ್ನ ಬರಮಾಡಿಕೊಂಡಿದ್ದು, ಶೀಘ್ರದಲ್ಲೇ ಚಿತ್ರತಂಡ ಸೇರಲಿದ್ದಾರಂತೆ.

ರಾಜ್​ ಬಿ ಶೆಟ್ಟಿ ಸ್ಯಾಂಡಲ್​ವುಡ್​ ನಲ್ಲಿ ಸುಮಾರು11 ಸಿನಿಮಾಗಳನ್ನು ಮಾಡಿದ್ದಾರೆ. ಇದರ ಜೊತೆಗೆ ಅತ್ತ ಮಲಯಾಳಂ ಚಿತ್ರರಂಗ ಕೂಡ ಅವರ ನಟನೆಯನ್ನು ಮೆಚ್ಚಿಕೊಂಡಿದ್ದು, ಮಾಲಿವುಡ್ ನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆಫರ್ ಗಳು ಬರುತ್ತಿವೆ.

ಇದೇ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. 'ಟರ್ಬೋ' ಸಿನಿಮಾವನ್ನು ಮಲಯಾಳಂ ಮೆಗಾಸ್ಟಾರ್ ನಿರ್ಮಾಣ ಸಂಸ್ಥೆ ಮಮ್ಮುಟ್ಟಿ ಕಂಪನಿ ಹಣ ಹೂಡುತ್ತಿದೆ. ಮಿದುನ್ ಮಾನ್ಯೂಯೆಲ್ ಥಾಮಸ್ ಈ ಸಿನಿಮಾಗೆ ಸ್ಕ್ರಿಪ್ಟ್ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com