ಗೋವಾ ಸಿನಿಮೋತ್ಸವದಲ್ಲಿ ಕಾಂತಾರಕ್ಕೆ ಮತ್ತೊಂದು ಗರಿ: ವಿಶೇಷ ತೀರ್ಪುಗಾರರ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಗಲ್ಲಾಪಟ್ಟಿಯಲ್ಲಿ ದೊಡ್ಡ ಸದ್ದು ಮಾಡಿದ್ದ ಕಾಂತಾರ ಚಿತ್ರಕ್ಕೆ ಇದೀಗ ಮತ್ತೊಂದು ಪ್ರಶಸ್ತಿ ಗರಿ ಸಿಕ್ಕಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಭಾರತೀಯ ಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಅವರು ಕಾಂತಾರ ಚಿತ್ರಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. 
ರಿಷಬ್ ಶೆಟ್ಟಿ

ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಅಥವಾ 'ಸಿಲ್ವರ್ ಪೀಕಾಕ್' ಪ್ರಶಸ್ತಿ ಪಡೆದ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿಗೆ 'ಕಾಂತಾರ' ಪಾತ್ರವಾಗಿದೆ.

ತೀರ್ಪುಗಾರರ ಗಮನ ಸೆಳೆಯುವುದು ಪ್ರತಿ ವರ್ಷವೂ ವಿಶೇಷ. ಈ ಬಾರಿ ಆ ಗೌರವ ನಿರ್ದೇಶಕ ರಿಷಬ್ ಶೆಟ್ಟಿ ಪಾಲಾಗಿದೆ. 'ಕಾಂತಾರ' ಸಿನಿಮಾದಲ್ಲಿ ಅದ್ಭುತ ನಟನೆಗೆ ಹಾಗೂ ಅದ್ಭುತವಾಗಿ ಕತೆ ಹೇಳಿರುವ ರೀತಿಗೆ ರಿಷಬ್ ಶೆಟ್ಟಿ ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ನೀಡಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಟ್ವೀಟ್ ಮಾಡಿದೆ.

ಈ ಪ್ರಶಸ್ತಿಯನ್ನು ಚಲನಚಿತ್ರದ ಕೆಲವು ಅಂಶಗಳಿಗಾಗಿ ನೀಡಲಾಗುತ್ತದೆ. ಒಬ್ಬ ವ್ಯಕ್ತಿಗೆ ಅವನ ಅಥವಾ ಅವಳ ಕಲಾತ್ಮಕ ಕೊಡುಗೆಗಾಗಿ ನೀಡಲಾಗುತ್ತದೆ. ಪ್ರಶಸ್ತಿಯು ಬೆಳ್ಳಿ ನವಿಲು ಪದಕ, 15 ಲಕ್ಷ ರೂ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com