''ನಿಮ್ಮ ತೆವಲಿಗೋಸ್ಕರ ನ್ಯೂಸ್ ಹಾಕ್ಬೇಡಿ: ರೊಚ್ಚಿಗೆದ್ದ ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ! ವಿಡಿಯೋ
ಕಾಮಿಡಿ ಕಿಲಾಡಿ ಖ್ಯಾತಿಯ ಖ್ಯಾತಿಯ ನಯನಾ ಫೇಕ್ ನ್ಯೂಸ್ ವಿರುದ್ಧ ಗರಂ ಆಗಿದ್ದಾರೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ನಯನಾ, ಗಂಡನಿಂದ ಪ್ರೆಗ್ನೆಂಟ್ ಆಗಿದ್ದಾರೆ, ಅವರಿಗೆ ಡಿಲಿವರಿ ಆಗಿ ಅವರಿಗೆ ಗಂಡು ಮಗು ಆಗಿದೆ, ಅವಳಿ-ಜವಳಿ ಮಕ್ಕಳಾಗಿವೆ ಅಂತಾ ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳೇ ಆಕೆಯ ಆಕ್ರೋಶಕ್ಕೆ ಕಾರಣವಾಗಿದೆ.
Published: 03rd October 2023 08:53 PM | Last Updated: 05th October 2023 12:25 PM | A+A A-

ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ
ಕಾಮಿಡಿ ಕಿಲಾಡಿ ಖ್ಯಾತಿಯ ಖ್ಯಾತಿಯ ನಯನಾ ಫೇಕ್ ನ್ಯೂಸ್ ವಿರುದ್ಧ ಗರಂ ಆಗಿದ್ದಾರೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ನಯನಾ, ಗಂಡನಿಂದ ಪ್ರೆಗ್ನೆಂಟ್ ಆಗಿದ್ದಾರೆ, ಅವರಿಗೆ ಡಿಲಿವರಿ ಆಗಿ ಅವರಿಗೆ ಗಂಡು ಮಗು ಆಗಿದೆ, ಅವಳಿ-ಜವಳಿ ಮಕ್ಕಳಾಗಿವೆ ಅಂತಾ ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳೇ ಆಕೆಯ ಆಕ್ರೋಶಕ್ಕೆ ಕಾರಣವಾಗಿದೆ.
ಇಂತಹ ಫೇಕ್ ನ್ಯೂಸ್ ವಿರುದ್ಧ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ವಿಡಿಯೋವೊಂದನ್ನು ಹಂಚಿಕೊಂಡಿರುವ ನಯನಾ, ದಯವಿಟ್ಟು ನಿಮ್ಮ ತೆವಲಿಗೋಸ್ಕರ ಫಾಲೋವರ್ಸ್ ಬೇಕು ಅಂತ ಈ ರೀತಿ ಫೇಕ್ ನ್ಯೂಸ್ ಹಾಕಬೇಡಿ’ ಮಗು ಆದ ಮೇಲೆ ನನ್ನ ಪ್ರೀತಿಯ ಕನ್ನಡದ ಜನತೆಗೆ ನಾನು ತಿಳಿಸುತ್ತೀನಿ ನಾನೇ ಪೋಸ್ಟ್ ಮಾಡ್ತೀನಿ ಅಂತಾ ಹೇಳಿದ್ದಾರೆ.
ಒಂದು ಚೂರು ಮಾನ ಮರ್ಯಾದೆ ನಾಚಿಕೆ ಅನ್ನೋದು ಇದ್ದರೆ ಅಂತಹ ನ್ಯೂಸ್ ಡಿಲೀಟ್ ಮಾಡಬೇಕು ಎಂದು ಮನವಿ ಮಾಡಿರುವ ನಯನಾ, ಫೇಕ್ ನ್ಯೂಸ್‌ನ ಯಾರೂ ನಂಬುವುದಕ್ಕೆ ಹೋಗಬೇಡಿ ಎಂದಿದ್ದಾರೆ.