ಜವಾನ್ ಚಿತ್ರದ ಟ್ರೈಲರ್
ಸಿನಿಮಾ ಸುದ್ದಿ
ಮೂರು ದಿನದಲ್ಲಿ 384 ಕೋಟಿ ರೂ. ಗಳಿಸಿದ ಎಸ್ ಆರ್ ಕೆ ಜವಾನ್ ಚಿತ್ರ!
ಬಾಲಿವುಡ್ ನಟ ಶಾರೂಖ್ ಖಾನ್ ನಟನೆಯ ಚಿತ್ರ ಜವಾನ್ ಮೂರೇ ದಿನಗಳಲ್ಲಿ ಜಾಗತಿಕವಾಗಿ 384.69 ಕೋಟಿ ರೂಪಾಯಿಗಳನ್ನು ಗಳಿಸಿದೆ.
ನವದೆಹಲಿ: ಬಾಲಿವುಡ್ ನಟ ಶಾರೂಖ್ ಖಾನ್ ನಟನೆಯ ಚಿತ್ರ ಜವಾನ್ ಮೂರೇ ದಿನಗಳಲ್ಲಿ ಜಾಗತಿಕವಾಗಿ 384.69 ಕೋಟಿ ರೂಪಾಯಿಗಳನ್ನು ಗಳಿಸಿದೆ.
ಸಿನಿಮಾ ತಂಡ ಈ ಬಗ್ಗೆ ಮಾಹಿತಿ ನೀಡಿದೆ. ತಮಿಳು ಚಿತ್ರ ನಿರ್ದೇಶಕ ಅಟ್ಲೀ ನಿರ್ದೇಶಿಸಿರುವ ಈ ಸಿನಿಮಾ ಗುರುವಾರ (ಸೆ.೦7 ರಂದು) ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆ ಕಂಡಿತ್ತು. ನಯನತಾರ, ವಿಜಯ್ ಸೇತುಪಥಿ, ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಿನಿಮಾ ಸಂಗ್ರಹಿಸಿರುವ ಮೊತ್ತದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಒಂದೇ ದಿನದಲ್ಲಿ ಗರಿಷ್ಠ 68.72 ಕೋಟಿ ರೂಪಾಯಿ (ಹಿಂದಿ) ಗಳಿಸಿದೆ. ಒಟ್ಟಾರೆ ಎಲ್ಲಾ ಭಾಷೆಗಳಲ್ಲಿ 144.22 ಕೋಟಿ ರೂಪಾಯಿ ಗಳಿಸಿದೆ. ಮೂರು ದಿನಗಳಲ್ಲಿ 384.69 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದೆ ಎಂದು ಸಿನಿಮಾ ತಂಡ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ