'ಒಂದನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ' ಸಿನಿಮಾ ಡಿಜಿಟಲ್ ವೇದಿಕೆಗೆ ಪಾದಾರ್ಪಣೆ!

ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಚಿತ್ರವು ಡಿಜಿಟಲ್ ಪ್ಲಾಟ್ಫಾರ್ಮ್ ಆದ ಜಂಕಾರ್ ಮ್ಯೂಸಿಕ್ ಮೂವೀಸ್ ನಲ್ಲಿ ಬಿಡುಗಡೆಗೊಂಡು ನೋಡಲು ಲಭ್ಯವಿದೆ ಎಂದು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಸಂತೋಷ್‌ ಕೊಡೆಂಕೇರಿ ಹೇಳಿದ್ದಾರೆ.
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ಸಿನಿಮಾ ಸ್ಟಿಲ್
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ಸಿನಿಮಾ ಸ್ಟಿಲ್

ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಚಿತ್ರವು ಡಿಜಿಟಲ್ ಪ್ಲಾಟ್ಫಾರ್ಮ್ ಆದ ಜಂಕಾರ್ ಮ್ಯೂಸಿಕ್ ಮೂವೀಸ್ ನಲ್ಲಿ ಬಿಡುಗಡೆಗೊಂಡು ನೋಡಲು ಲಭ್ಯವಿದೆ ಎಂದು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಸಂತೋಷ್‌ ಕೊಡೆಂಕೇರಿ ಹೇಳಿದ್ದಾರೆ.

ಒಬ್ಬ ಕಲಾವಿದ, ಇಪ್ಪತ್ತ ನಾಲ್ಕು ಪಾತ್ರಗಳು… ನಾಲ್ಕು ಹಾಡುಗಳು… ಹನ್ನೆರಡು ಪ್ರಾಸಂಗಿಕ ಹಾಡುಗಳು ಹೊಂದಿರುವ “ಶ್ರೀ. ರವೀಂದ್ರನಾಥ್ ಠಾಗೂರ್” ಅವರ ಕಾದಂಬರಿ ಆಧರಿತ ಚಿತ್ರ ಒಂದು ವಿಶ್ವಮಟ್ಟದ ರಂಗಭೂಮಿ ಅನುಭವದ ಚಿತ್ರ ಎಂದು ಸಂತೋಷ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

<strong>ಪೋಸ್ಟರ್</strong>
ಪೋಸ್ಟರ್

ಸಿನಿಮಾ ತಂತ್ರಗಾರಿಕೆಯಲ್ಲಿ ರಂಗಭೂಮಿಯ ನಿರೂಪಣೆ, ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಶ್ರೀ ರವೀಂದ್ರನಾಥ್ ಠಾಗೂರ್ ಅವರ “Once There was a King” ಕಾದಂಬರಿಯನ್ನು ರಂಗ ರೂಪಕ್ಕೆ ತಂದು ರಂಗಭೂಮಿಯ ಮೇಲೆ ಇಪ್ಪತ್ತೊಂದು ವರ್ಷಗಳ ಹಿಂದೆ ಯೋಗೇಶ್ ಮಾಸ್ಟರ್ ಅವರು ಮಾಡಿದ ಏಕವ್ಯಕ್ತಿ ಪ್ರದರ್ಶನದ ಪ್ರಯೋಗ ಇದು.

ಈ ಪ್ರಯೋಗವನ್ನು, ರಂಗಭೂಮಿಯಿಂದ ಚಲನಚಿತ್ರ ಮಾದ್ಯಮಕ್ಕೆ ತರುವ ಸಾಹಸ ಮಾಡಿದ್ದು ದೃಷ್ಟಿ ಮೀಡಿಯಾ ಸಂಸ್ಥೆ. ಸಿನಿಮಾ ಮಾಧ್ಯಮದಲ್ಲಿ ರಂಗಭೂಮಿಯಲ್ಲಿ ಇರುವ ಇತಿಮಿತಿಗಳನ್ನು ಮೀರಲು ಸಾಧ್ಯವಾಯಿತು.

ಮೇಕಪ್, ಅಗತ್ಯದ ವೇಷಭೂಷಣ, ಬೆಳಕು ಮತ್ತು ಅಭಿನಯದ ಸೂಕ್ಷ್ಮ ಸಂವೇದನೆಗಳನ್ನು ಸೆರೆಹಿಡಿಯಲು ಸಾಧ್ಯವಾಯಿತು. ಒಟ್ಟಾರೆ ಹೇಳುವುದಾದರೆ ರಂಗ ಪ್ರಯೋಗದ ಸ್ವರೂಪವನ್ನು ಬದಲಿಸದೇ ಅದನ್ನು ಸಿನಿಮಾದ ಮೂಲಕ ಮತ್ತಷ್ಟು ಕುಸುರಿಗೊಳಿಸುವ ಕೆಲಸ ಇದಾಗಿದೆ.

ವಿವಿಧ ಚಲನಚಿತ್ರೋತ್ಸವಗಳಲ್ಲಿ ಪ್ರಶಂಸೆ ಗಳಿಸಿರುವ ಈ ಪ್ರಯೋಗಾತ್ಮಕ ಪ್ರಯತ್ನವು ಸೆಪ್ಟೆಂಬರ್ 9 ರಂದು ಜಂಕಾರ್ ಮ್ಯೂಸಿಕ್ ಮೂವೀಸ್ ಡಿಜಿಟಲ್ ವೇದಿಕೆಯಲ್ಲಿ ಪಾದಾರ್ಪಣೆ ಮಾಡಿತು.

ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ” ಚಿತ್ರವು ಸೆಪ್ಟಂಬರ್ 9ರಂದು ಜಂಕಾರ್ ಮ್ಯೂಸಿಕ್ ಮೂವೀಸ್ ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆಗೊಂಡಿರುವುದು ನಮಗೆ ಹೆಮ್ಮೆಯ ಸಂಗತಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com