ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾ ರಿಲೀಸ್ ಡೇಟ್ ಫಿಕ್ಸ್: ಅತಿಥಿ ಪಾತ್ರದಲ್ಲಿ ದರ್ಶನ್!

ಯಶಸ್ ಸೂರ್ಯ ಅಭಿನಯದ ಯೋಗರಾಜ್ ಭಟ್ ಅವರ ಮುಂಬರುವ ಚಿತ್ರ ಗರಡಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ.  ಸಾಂಪ್ರದಾಯಿಕ ಕುಸ್ತಿಯ ಕೇಂದ್ರಿತ ಕಥೆಯುಳ್ಳ ಈ ಚಿತ್ರವು ನವೆಂಬರ್ 10 ರಂದು ಬಿಡುಗಡೆಯಾಗಲಿದೆ.
ಗರಡಿ ಸಿನಿಮಾ ಸ್ಟಿಲ್
ಗರಡಿ ಸಿನಿಮಾ ಸ್ಟಿಲ್

ಯಶಸ್ ಸೂರ್ಯ ಅಭಿನಯದ ಯೋಗರಾಜ್ ಭಟ್ ಅವರ ಮುಂಬರುವ ಚಿತ್ರ ಗರಡಿ ಸಿನಿಮಾ ಶೂಟಿಂಗ್ ಮುಕ್ತಾಯಗೊಂಡಿದೆ. ಸಾಂಪ್ರದಾಯಿಕ ಕುಸ್ತಿಯ ಕೇಂದ್ರಿತ ಕಥೆಯುಳ್ಳ ಈ ಚಿತ್ರವು ನವೆಂಬರ್ 10 ರಂದು ಬಿಡುಗಡೆಯಾಗಲಿದೆ. ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಈ ಸುದ್ದಿ ಅಧಿಕೃತವಾಗಿ ಬಹಿರಂಗವಾಗಿದೆ.

ವನಜಾ ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಹೌಸ್ ಮತ್ತು ಸೌಮ್ಯಾ ಫಿಲಂಸ್ ನಿರ್ಮಿಸಿರುವ ಗರಡಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ ಗಮನ ಸೆಳೆದಿದೆ ರಾಜಕಾರಣಿ, ನಿರ್ಮಾಪಕ, ನಟ ಮತ್ತು ನಿರ್ದೇಶಕ ಬಿ.ಸಿ.ಪಾಟೀಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಸೋನಾಲ್ ಮೊಂಟೇರೊ  ನಾಯಕಿಯಾಗಿ ನಟಿಸಿದ್ದಾರೆ ಮತ್ತು ಚಿತ್ರದಲ್ಲಿ ರವಿಶಂಕರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರಂಜನ್ ಬಾಬು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದರೆ, ವಿ ಹರಿಕೃಷ್ಣ ಯೋಗರಾಜ್ ಭಟ್ ಸಂಗೀತ ಸಂಯೋಜಿಸಿದ್ದಾರೆ.

ಗರಡಿ ಜೊತೆಗೆ, ಯೋಗರಾಜ್ ಭಟ್ ಅವರು ಶಿವರಾಜಕುಮಾರ್ ಮತ್ತು ಪ್ರಭುದೇವ ಅಭಿನಯದ ಕರಟಕ ದಮನಕದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com