10 ಸೈಮಾ ಪ್ರಶಸ್ತಿ ಬಾಚಿಕೊಂಡ ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ಸಿನಿಮಾ!
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ 'ಕಾಂತಾರ' ಸಿನಿಮಾ ಕಳೆದ ವರ್ಷ ದೊಡ್ಡ ದಾಖಲೆಯನ್ನೇ ಸೃಷ್ಟಿಸಿದೆ, ಅದರ ಜೊತೆಗೆ ಹಲವು ಪ್ರಶಸ್ತಿಗಳನ್ನು ದಕ್ಕಿಸಿಕೊಂಡಿದೆ, ಕಾಂತಾರ ಸಿನಿಮಾ ಪ್ರಶಸ್ತಿ ಯಾತ್ರೆ ಮತ್ತೆ ಮುಂದುವರಿದಿದೆ.
Published: 21st September 2023 01:10 PM | Last Updated: 21st September 2023 02:29 PM | A+A A-

ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ 'ಕಾಂತಾರ' ಸಿನಿಮಾ ಕಳೆದ ವರ್ಷ ದೊಡ್ಡ ದಾಖಲೆಯನ್ನೇ ಸೃಷ್ಟಿಸಿದೆ, ಅದರ ಜೊತೆಗೆ ಹಲವು ಪ್ರಶಸ್ತಿಗಳನ್ನು ದಕ್ಕಿಸಿಕೊಂಡಿದೆ, ಕಾಂತಾರ ಸಿನಿಮಾ ಪ್ರಶಸ್ತಿ ಯಾತ್ರೆ ಮತ್ತೆ ಮುಂದುವರಿದಿದೆ.
ಸೈಮಾ 2023ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕಾಂತಾರ ಬರೋಬ್ಬರೀ 10 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಸೈಮಾ ಪ್ರಶಸ್ತಿ ದೊರೆತಿರುವ ಬಗ್ಗೆ ರಿಷಬ್ ಶೆಟ್ಟಿ ಮಾತನಾಡಿದ್ದಾರೆ. ಈ ಪ್ರಭಾವಶಾಲಿ ಪ್ರಶಸ್ತಿಗಳು ಚಲನಚಿತ್ರದ ರಾಷ್ಟ್ರೀಯ ಮನ್ನಣೆ ಸೂಚಿಸುವುದಲ್ಲದೆ ಇಡೀ ತಂಡದ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
'ಜನರ ಮನ್ನಣೆಯಿಂದ ಸಿಕ್ಕ ಪ್ರೀತಿಯೇ, ಕಾಂತಾರದ ಯಶಸ್ಸಿಗೆ ಕಾರಣ, ಸೈಮಾ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ನಿರ್ದೇಶನ, ಪಾಥ್ ಬ್ರೇಕಿಂಗ್ ಸ್ಟೋರಿ ಹಾಗು ಅತ್ಯುತ್ತಮ ನಟ, ನಟಿ, ಖಳನಟ, ಹಾಸ್ಯ ನಟ, ಸಂಗೀತ ನಿರ್ದೇಶಕ, ಗಾಯಕ, ಸಾಹಿತಿ ಸೇರಿದಂತೆ ಒಟ್ಟು ಹತ್ತು ಪ್ರಶಸ್ತಿಗಳನ್ನು ಪಡೆದಿದೆ. ಮನ ತುಂಬಿ ಬಂದಿದೆ, ಜವಾಬ್ದಾರಿ ಹೆಚ್ಚಿಸಿದೆ. ನಿಮ್ಮ ಪ್ರೀತಿ, ಆಶೀರ್ವಾದ ಹೀಗೇ ಇರಲಿ. ಈ ಎಲ್ಲಾ ಯಶಸ್ಸನ್ನು ದೈವ ನರ್ತಕರು, ಅಪ್ಪು ಸರ್ ಹಾಗೂ ಕನ್ನಡಿಗರಿಗೆ ಸಮರ್ಪಣೆ' ಎಂದು ಹೇಳಿದ್ದಾರೆ.
PHOTOS: ಸೈಮಾ 2023 ಪ್ರಶಸ್ತಿ ಪ್ರದಾನ: ಈ ಬಾರಿ ಕನ್ನಡದಲ್ಲಿ ಯಾರಿಗೆಲ್ಲ ಪ್ರಶಸ್ತಿ ಒಲಿದಿದೆ ನೋಡಿ...
ಹಲವು ತಂತ್ರಜ್ಞರು, ನಟರು ಮತ್ತು ಹಿರಿಯ ಚಲನಚಿತ್ರ ನಿರ್ಮಾಪಕರು ಸೇರಿದಂತೆ ವೈವಿಧ್ಯಮಯ ವ್ಯಕ್ತಿಗಳನ್ನು ನಾವು ಭೇಟಿಯಾಗುತ್ತೇವೆ. ನಾನು ಪ್ರಸಿದ್ಧ ವ್ಯಕ್ತಿಗಳಾದ ಕಮಲ್ ಹಾಸನ್, ನಿರ್ದೇಶಕ ಮಣಿರತ್ನಂ, ಲೋಕೇಶ್ ಕನಕರಾಜ್, ಗಾಯತ್ರಿ ಪುಷ್ಕರ್, ಎಸ್‌ಜೆ ಸೂರ್ಯ ಮತ್ತು ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಚಲನಚಿತ್ರ ನಿರ್ಮಾಪಕರನ್ನು ಭೇಟಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಪುರಸ್ಕಾರಗಳ ಮಹಾಪೂರವೇ ಹರಿದುಬರುತ್ತಿದ್ದಂತೆ ಕಾಂತಾರ 2 ಚಿತ್ರದ ನಿರೀಕ್ಷೆಯೂ ಜೋರಾಗಿದೆ. ತಾನು ಮತ್ತು ತನ್ನ ಪ್ರತಿಭಾವಂತ ಬರಹಗಾರರಾದ ಅನಿರುದ್ಧ್ ಮಹೇಶ್ ಮತ್ತು ಶನಿಲ್ ಗುರು ತಂಡವು ಕಥೆಯನ್ನು ಉತ್ತಮವಾಗಿ ಹೊಂದಿಸುತ್ತಿದ್ದಾರೆ ಎಂದು ರಿಷಬ್ ತಿಳಿಸಿದ್ದಾರೆ. ಅವರ ತೂಕ ಇಳಿಕೆ ವದಂತಿಗಳ ಬಗ್ಗೆ ಕೇಳಿದಾಗ ರಿಷಬ್ ಶೆಟ್ಟಿ ಗುಟ್ಟು ಬಿಟ್ಟುಕೊಟ್ಟಿಲ್ಲ. ಶೂಟಿಂಗ್ ವೇಳಾಪಟ್ಟಿ ತೆರೆದುಕೊಳ್ಳುತ್ತಿದ್ದಂತೆ ವಿವರಗಳನ್ನು ಬಹಿರಂಗಪಡಿಸುವ ಭರವಸೆ ನೀಡಿದರು.
ಸದ್ಯ ಶೂಟಿಂಗ್ ಗಾಗಿ, ಸ್ಥಳಗಳನ್ನು ಅಂತಿಮಗೊಳಿಸುವುದು ಮತ್ತು ತಾಜಾ ಮುಖಗಳನ್ನು ಹುಡುಕುವತ್ತ ಗಮನ ಹರಿಸಲಾಗಿದೆ, ವಿಶೇಷವಾಗಿ ಕನ್ನಡ ಚಲನಚಿತ್ರೋದ್ಯಮದಿಂದ ಬಂದ ನಾಯಕಿಯರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಮೂಲ ಕಾಂತಾರದ ಕೆಲವು ನಟರು ಸಹ ಸೇರುವ ನಿರೀಕ್ಷೆಯಿದೆ. ನವೆಂಬರ್ ಅಂತ್ಯದ ವೇಳೆಗೆ ಅಥವಾ ಬಹುಶಃ ಡಿಸೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸಲು ನಾವು ಯೋಜಿಸಿದ್ದೇವೆ ಎಂದು ರಿಷಬ್ ವಿವರಿಸಿದ್ದಾರೆ.