ಫಿಲ್ಮ್ ಚೇಂಬರ್ ಚುನಾವಣೆ ಫಲಿತಾಂಶ ಪ್ರಕಟ: ಅಧ್ಯಕ್ಷರಾಗಿ ಎನ್.ಎಮ್. ಸುರೇಶ್ ಆಯ್ಕೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು (ಶನಿವಾರ) ನಡೆದ ಚುನಾವಣೆಯಲ್ಲಿ 2023ನೇ ಸಾಲಿಗೆ ಅಧ್ಯಕ್ಷರಾಗಿ ನಿರ್ಮಾಪಕ, ವಿತರಕ ಎನ್.ಎಮ್. ಸುರೇಶ್ ಆಯ್ಕೆಯಾಗಿದ್ದಾರೆ.
Published: 24th September 2023 10:06 AM | Last Updated: 24th September 2023 10:06 AM | A+A A-

ಎನ್ ಎಂ ಸುರೇಶ್
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು (ಶನಿವಾರ) ನಡೆದ ಚುನಾವಣೆಯಲ್ಲಿ 2023ನೇ ಸಾಲಿಗೆ ಅಧ್ಯಕ್ಷರಾಗಿ ನಿರ್ಮಾಪಕ, ವಿತರಕ ಎನ್.ಎಮ್. ಸುರೇಶ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಎನ್.ಎಮ್.ಸುರೇಶ್, ಮಾರ್ಸ್ ಸುರೇಶ್, ಶಿಲ್ಪಾ ಶ್ರೀನಿವಾಸ್ ಮತ್ತು ಎ.ಗಣೇಶ್ ಆಯ್ಕೆ ಬಯಸಿದ್ದರು. ಕೊನೆಗೂ ಅಧ್ಯಕ್ಷ ಸ್ಥಾನದ ಗೆಲುವು ಎನ್.ಎಮ್. ಸುರೇಶ್ ಅವರ ಪಾಲಾಗಿದೆ.
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಫಿಲಂ ಚೇಂಬರ್ ಅಧ್ಯಕ್ಷರಾಗಿ ನಿರ್ಮಾಪಕ ಎನ್.ಎಮ್.ಸುರೇಶ್ ಗೆಲುವು ಸಾಧಿಸಿದ್ದಾರೆ.
ಶಿಲ್ಪ ಶ್ರೀನಿವಾಸ್ 217, ಗಣೇಶ್ 204, ಸುರೇಶ್ ಎಮ್.ಎನ್ 337, ವಿ.ಹೆಚ್.ಸುರೇಶ್ 181 ಮತಗಳನ್ನು ಪಡೆದಿದ್ದಾರೆ. 120 ವೋಟ್ ಗಳಿಂದ ಎನ್.ಎಮ್ .ಸುರೇಶ್ ಗೆಲುವು ಸಾಧಿಸಿದ್ದಾರೆ.
ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಹಿರಿಯ ನಟಿ ಪ್ರಮಿಳಾ ಜೋಷಾಯ್ 307 ವೋಟ್ ನಿಂದ ಗೆದ್ದಿದ್ದಾರೆ. ವಿತರಕರ ವಲಯದಿಂದ ವೆಂಕಟೇಶ್.ಜಿ, ಪ್ರದರ್ಶಕರ ವಲಯದಿಂದ ನರಸಿಂಹುಲು ಗೆಲುವು ದಾಖಲಿಸಿದ್ದಾರೆ.
ಇದನ್ನೂ ಓದಿ: ಅಕ್ಟೋಬರ್ 13 ರಂದು ರಾಷ್ಟ್ರೀಯ ಸಿನಿಮಾ ದಿನ ಆಚರಣೆ; ಅಂದು ಟಿಕೆಟ್ ಬೆಲೆ 99 ರೂ.
ಗೌರವ ಕಾರ್ಯದರ್ಶಿ ನಿರ್ಮಾಪಕ ವಲಯ ಭಾ.ಮಾ.ಗಿರೀಶ್, ವಿತರಕರ ವಲಯದಿಂದ ಕರಿಸುಬ್ಬು, ಪ್ರದರ್ಶಕರ ವಲಯದಿಂದ ಸುಂದರ ರಾಜು ಗೆಲುವು ಸಾಧಿಸಿದ್ದಾರೆ. ಖಜಾಂಚಿಯಾಗಿ ಗೆಲುವು ಪಡೆದ ಜಯಸಿಂಹ ಮುಸುರಿ ಸಾಧಿಸಿದ್ದಾರೆ.
ಬೆಳಗ್ಗೆ 65ನೇ ಸರ್ವ ಸದಸ್ಯರ ಸಭೆ ನಡೆಯಿತು. ಈ ಸಭೆಯಲ್ಲಿ ಚುನಾವಣೆ ಮತ್ತು ಈವರೆಗೂ ವಾಣಿಜ್ಯ ಮಂಡಳಿ ನಡೆದುಕೊಂಡು ಬಂದ ಹಾದಿಯ ಕುರಿತು ಚರ್ಚೆ ನಡೆಯಿತು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಿತು. ಒಟ್ಟು ಮತಗಳು ಸಂಖ್ಯೆ 1,599. ಚಲಾವಣೆ ಆದ ಮತಗಳು ಸಂಖ್ಯೆ 967 ಆಗಿದ್ದವು.