ಸುದೀಪ್, ದರ್ಶನ್, ಶಿವಣ್ಣ, ಯಶ್ ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ? ತಮಿಳು ಚಿತ್ರ ವಿತರಿಸಿ 36 ಕೋಟಿ ರೂ. ಪಡೆದವರು ಕಾಣೋಲ್ವಾ?

ಕಾವೇರಿ ವಿಚಾರದಲ್ಲಿ ನಿಮ್ಮ ಕಣ್ಣಿಗೆ ನಾವು ನಾಲ್ಕು ಮಂದಿ ಮಾತ್ರ ಕಾಣುವುದಾ? ಬೇರೆ ಯಾರು ಕಾವುದಿಲ್ಲವಾ? ಎಂದು ಪ್ರಶ್ನಿಸುವ ಮೂಲಕ ನಟ ದರ್ಶನ್​, ಕಲಾವಿದರ ಪರ ಬ್ಯಾಟ್​ ಬೀಸಿದ್ದಾರೆ.
ದರ್ಶನ್
ದರ್ಶನ್

ಮೈಸೂರು: ಕಾವೇರಿ ವಿಚಾರದಲ್ಲಿ ನಿಮ್ಮ ಕಣ್ಣಿಗೆ ನಾವು ನಾಲ್ಕು ಮಂದಿ ಮಾತ್ರ ಕಾಣುವುದಾ? ಬೇರೆ ಯಾರು ಕಾವುದಿಲ್ಲವಾ? ಎಂದು ಪ್ರಶ್ನಿಸುವ ಮೂಲಕ ನಟ ದರ್ಶನ್​, ಕಲಾವಿದರ ಪರ ಬ್ಯಾಟ್​ ಬೀಸಿದ್ದಾರೆ.

ಬಂಡೂರು ಪಟ್ಟಣದಲ್ಲಿ ಗಂಗಾ ಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಡೆದ ನೈಸರ್ಗಿಕ ಕೃಷಿಕರಿಗೆ 100 ಹಳ್ಳಿಕಾರ್ ತಳಿಯ ಗೋದಾನ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾವೇರಿ ಹೋರಾಟ ಬಂದಾಗಲೆಲ್ಲಾ ದರ್ಶನ್, ಸುದೀಪ್, ಶಿವಣ್ಣ, ಯಶ್ ಮತ್ತೊಬ್ಬರು ಮಾತ್ರ ಕಾಣಿಸೋದಾ? ಎಂದು  ಬೇಸರ ವ್ಯಕ್ತಪಡಿಸಿದ್ದಾರೆ.

ಕಾವೇರಿ ಚಳವಳಿಗೆ ಕನ್ನಡ ಚಿತ್ರರಂಗದ ಸ್ಟಾರ್​ಗಳು ಬರ್ತಿಲ್ಲ ಅನ್ನೋ ಆರೋಪಕ್ಕೆ ತಿರುಗೇಟು ನೀಡಿರುವ ದರ್ಶನ್, ಇತ್ತೀಚೆಗೆ ತಮಿಳು ಸಿನಿಮಾ ಒಂದು ಬಿಡುಗಡೆಯಾಯಿತು. ಆ ಸಿನಿಮಾವನ್ನು ಕನ್ನಡದ ವಿತರಕರೊಬ್ಬರು ಕರ್ನಾಟಕ‌ದಲ್ಲಿ ಹಂಚಿಕೆ ಮಾಡಲು ಬರೋಬ್ಬರಿ 6 ಕೋಟಿಗೆ ಖರೀದಿ ಮಾಡಿದ್ದರು. ಅದರಿಂದ ಅವರು ಸುಮಾರು 36 ರಿಂದ 37 ಕೋಟಿ ರೂಪಾಯಿ ಸಂಪಾದಿಸಿದರು. ಅಂದು ಕನ್ನಡದವರು ತಮಿಳು ಸಿನಿಮಾಗೆ 37 ಕೋಟಿ ರೂಪಾಯಿ ಕೊಂಡೊಯ್ಯಲು ಬಿಟ್ಟು ಈಗ, ಕನ್ನಡ ಕಲಾವಿದರನ್ನು ಮಾತ್ರ ಹೋರಾಟಕ್ಕೆ ಕರೆಯೋದು ಯಾವ ನ್ಯಾಯ? ಎಂದು ಪ್ರಶ್ನೆ ಮಾಡಿದರು.

ಕಾವೇರಿ ವಿವಾದ ಆರಂಭ ಆಗುತ್ತಿದ್ದಂತೆ ಸ್ಯಾಂಡಲ್‌ವುಡ್ ತಾರೆಯರ ಮೇಲೆ ಆಕ್ರೋಶ ವ್ಯಕ್ತವಾಗಿತ್ತು. ಕಾವೇರಿ ವಿವಾದದ ಬಗ್ಗೆ ಸೂಪರ್‌ಸ್ಟಾರ್‌ಗಳು ಯಾಕೆ ಧ್ವನಿ ಎತ್ತಿಲ್ಲ ಅಂತ ಆಕ್ರೋಶ ವ್ಯಕ್ತವಾಗಿತ್ತು. ಹೋರಾಟದಲ್ಲಿ ಭಾಗಿಯಾಗಿದ್ದ ದರ್ಶನ್ ಕಲಾವಿದರ ಬಗ್ಗೆ ಮಾತಾಡಿದವರಿಗೆ ದರ್ಶನ್ ತಿರುಗೇಟು ನೀಡಿದ್ದಾರೆ.

ಎಲ್ಲೋ ಇದ್ದು ಏನೋ ಮಾಡಿದವರಿಗೆ ನೂರಾರು ಕೋಟಿ ಕೊಡ್ತೀರಾ ಯಾಕೆ ನೀವು ಕನ್ನಡ ಸಿನಿಮಾಗೆ ಕೊಡಲ್ಲ." ಎಂದು ಪ್ರಶ್ನೆ ಮಾಡಿದ್ದಾರೆ. "ನೀವು ಕನ್ನಡ ಕಲಾವಿದರಿಗೆ ಕೊಟ್ಟರೆ ಮಾತ್ರ ಕನ್ನಡ ಕಲಾವಿದರು ಬರ್ತಾರೆ. ಅವರು ದೊಡ್ಡ ಕಲಾವಿದರು. ನಾನು ಇಲ್ಲ ಅಂತ ಹೇಳುವುದಿಲ್ಲ. ನಾನು ಅವರ ಬಗ್ಗೆ ಮಾತಾಡುತ್ತಿಲ್ಲ. ಕರ್ನಾಟಕದಿಂದ 35, 36 ಕೋಟಿ ಹೋಯ್ತು ಸ್ವಾಮಿ. ಯಾಕೆ ಅವರ ಬಾಯ್ ಬಂದ್ ಮಾಡಿಲ್ಲ." ಎಂದು ದರ್ಶನ್ ಸವಾಲೆಸೆದಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com