Yash: ಯಶ್ ಸಿನಿಮಾ 'ಟಾಕ್ಸಿಕ್' ಶೂಟಿಂಗ್ ಏಪ್ರಿಲ್ ನಲ್ಲಿ ಆರಂಭ, ಬೆಂಗಳೂರಲ್ಲೇ ಬಹುತೇಕ ಚಿತ್ರೀಕರಣ

ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಬಹು ನಿರೀಕ್ಷಿತ ಚಿತ್ರ, 'ಟಾಕ್ಸಿಕ್ - ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್', ಘೋಷಣೆಯಾದ ದಿನದಿಂದಲೂ ಅದರ ಟೈಟಲ್, ಟೀಸರ್ ಮೂಲಕ ಅಪಾರ ನಿರೀಕ್ಷೆ ಹುಟ್ಟಿಸಿದೆ.
ಟಾಕ್ಸಿಕ್ ಚಿತ್ರದಲ್ಲಿ ಯಶ್ ಫಸ್ಟ್ ಲುಕ್
ಟಾಕ್ಸಿಕ್ ಚಿತ್ರದಲ್ಲಿ ಯಶ್ ಫಸ್ಟ್ ಲುಕ್
Updated on

ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಬಹು ನಿರೀಕ್ಷಿತ ಚಿತ್ರ, 'ಟಾಕ್ಸಿಕ್ - ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್', ಘೋಷಣೆಯಾದ ದಿನದಿಂದಲೂ ಅದರ ಟೈಟಲ್, ಟೀಸರ್ ಮೂಲಕ ಅಪಾರ ನಿರೀಕ್ಷೆ ಹುಟ್ಟಿಸಿದೆ. ವೆಂಕಟ್ ಕೆ ನಾರಾಯಣ ಅವರ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಸ್ವಂತ ಬ್ಯಾನರ್ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಸಿನಿಮಾ ಬಹುಭಾಷೆಗಳಲ್ಲಿ ಜಾಗತಿಗ ಮಟ್ಟದಲ್ಲಿ ತೆರೆಗೆ ಬರಲಿದೆ.

ಚಿತ್ರದ ಬಿಡುಗಡೆ ದಿನಾಂಕ ಏಪ್ರಿಲ್ 10, 2025 ಎಂದು ದೃಢವಾಗಿ ನಿಶ್ಚಯಿಸಲಾಗಿದ್ದು, ಕೊನೆಗೂ ಚಿತ್ರೀಕರಣದ ತೆರೆಗೆ ಬರುವ ಒಂದು ವರ್ಷಕ್ಕೆ ಮೊದಲು ಅಂದರೆ ಈ ತಿಂಗಳ ಮೂರನೇ ವಾರದಲ್ಲಿ ಆರಂಭವಾಗುತ್ತಿದೆ. ಟಾಕ್ಸಿಕ್ ಚಿತ್ರದ ಪೂರ್ವ ತಯಾರಿ ಕೆಲಸ ಈಗಾಗಲೇ ಮುಗಿದಿದೆ.

ಟಾಕ್ಸಿಕ್ ಚಿತ್ರದಲ್ಲಿ ಯಶ್ ಫಸ್ಟ್ ಲುಕ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮುಂಬರುವ ಚಿತ್ರ 'ಟಾಕ್ಸಿಕ್'ಗೆ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ನಾಯಕಿ?

ಸಿನಿಮಾ ಎಕ್ಸ್‌ಪ್ರೆಸ್ ಈ ಹಿಂದೆ ವರದಿ ಮಾಡಿದಂತೆ, ಚಿತ್ರತಂಡವು ಹಾಲಿವುಡ್ ಸ್ಟುಡಿಯೊಗಳಲ್ಲಿ ಹೆಚ್ಚಾಗಿ ಬಳಸಲಾಗುವ ವರ್ಚುವಲ್ ಪ್ರೊಡಕ್ಷನ್ ಟೂಲ್ ಸ್ಟಂಟ್‌ವಿಸ್‌ನ ಸೇರ್ಪಡೆ ಮಾಡುವುದರೊಂದಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತಿದೆ. ಚಿತ್ರದ ದೃಶ್ಯ ಭವ್ಯತೆಯನ್ನು ಸಾಧಿಸಲು ಯಾವುದೇ ಹಾಲಿವುಡ್ ಚಿತ್ರಗಳಿಗೆ ಕಡಿಮೆಯಿಲ್ಲದಂತೆ ಎಲ್ಲಾ ಸೌಕರ್ಯಗಳನ್ನು ನೋಡುತ್ತಿದೆ.

ಶ್ರೀಲಂಕಾ ಮತ್ತು ಲಂಡನ್‌ನಲ್ಲಿ ಸಂಭಾವ್ಯ ಶೂಟಿಂಗ್ ಸ್ಥಳಗಳ ಬಗ್ಗೆ ಊಹಾಪೋಹಗಳ ನಡುವೆ, ನಿರ್ಮಾಣ ತಂಡವು ಈಗ ಶೂಟಿಂಗ್ ಸ್ಠಳವನ್ನು ಶಿಫ್ಟ್ ಮಾಡಿದ್ದು, ಚಿತ್ರೀಕರಣಕ್ಕಾಗಿ ಬೆಂಗಳೂರನ್ನು ಕೇಂದ್ರಬಿಂದುವಾಗಿ ಆಯ್ಕೆ ಮಾಡಿಕೊಂಡಿದೆ. ಬೆಂಗಳೂರಿನ ಹೃದಯಭಾಗದಲ್ಲಿ ವಿಸ್ತಾರವಾದ ಸೆಟ್‌ಗಳನ್ನು ನಿರ್ಮಿಸುವ ನಿರ್ಧಾರವು ಪ್ರಾಜೆಕ್ಟ್ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಕನ್ನಡ ಸಿನಿಪ್ರಿಯರಲ್ಲಿ ಹುಟ್ಟುಹಾಕಿದೆ.

ಟಾಕ್ಸಿಕ್ ಚಿತ್ರದಲ್ಲಿ ಯಶ್ ಫಸ್ಟ್ ಲುಕ್
'ಟಾಕ್ಸಿಕ್' ಚಿತ್ರೀಕರಣಕ್ಕೆ ಭರದ ತಯಾರಿ; ವಿಡಿಯೋ ವೈರಲ್

ಸ್ಥಳೀಯ ಪ್ರತಿಭೆಗಳನ್ನು ಪೋಷಿಸುವ ಮತ್ತು ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ದೇಶದಿಂದ, ಬೆಂಗಳೂರಿನ ನುರಿತ ಉದ್ಯೋಗಿಗಳಲ್ಲಿ ಉತ್ಪಾದನೆಯ ಹೂಡಿಕೆಯು ಉದ್ಯಮದ ಸುಸ್ಥಿರತೆಯ ಕಡೆಗೆ ದಾಪುಗಾಲು ಹಾಕುತ್ತಿದೆ. ಚಿತ್ರತಂಡವು ಮುಂಬೈನಿಂದ ಪ್ರೊಡಕ್ಷನ್ ಡಿಸೈನರ್ ಮತ್ತು ಬೆಂಗಳೂರಿನ ಕಲಾ ನಿರ್ದೇಶಕರನ್ನು ನೇಮಿಸಿಕೊಂಡಿದೆ. ಪ್ರಸ್ತುತ, ನಗರದ ಹೃದಯಭಾಗದಲ್ಲಿಯೇ ಬೃಹತ್ ಸೆಟ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದ್ದು, ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣಕ್ಕೆ ಮುಂಬೈಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ದೇಶಾದ್ಯಂತ ಪ್ರತಿಭಾವಂತರನ್ನು ಬರಸೆಳೆದು ಅಪ್ಪಿಕೊಳ್ಳುವ ಟಾಕ್ಸಿಕ್ ಚಿತ್ರಕ್ಕೆ ಜೆರೆಮಿ ಸ್ಟಾಕ್ ಸಂಗೀತ ಸಂಯೋಜಿಸಲಿದ್ದಾರೆ. ರಾಜೀವ್ ರವಿ ಛಾಯಾಗ್ರಹಣವನ್ನು ನಿರ್ವಹಿಸಲಿದ್ದಾರೆ. ಮಲಯಾಳಂ ನಟ ಶೈನ್ ಟಾಮ್ ಚಾಕೋ ಜೊತೆಗೆ ಬಾಲಿವುಡ್ ತಾರೆಯರಾದ ಕರೀನಾ ಕಪೂರ್ ಖಾನ್ ಮತ್ತು ನವಾಜುದ್ದೀನ್ ಸಿದ್ದಿಕಿ ಅವರು ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಯಿದೆ. ಟಾಕ್ಸಿಕ್ ಚಿತ್ರದಲ್ಲಿ ನಟಿಸಲಿರುವ ಸ್ಟಾರ್ ನಟರ ಪಟ್ಟಿಯನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com