ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ಮನೆ ಖರೀದಿಸಿದ ನಟಿ ಅದಾ ಶರ್ಮಾ!

ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಸಾಯುವಾಗ ಉಳಿದುಕೊಂಡಿದ್ದ ಮನೆಯನ್ನು ಅವರು ಖರೀದಿ ಮಾಡಿದ್ದಾರೆ
ಅದಾ ಶರ್ಮ
ಅದಾ ಶರ್ಮ
Updated on

ನಟಿ ಅದಾ ಶರ್ಮಾ ಅವರು ಇತ್ತೀಚೆಗೆ ಸಖತ್ ಸುದ್ದಿಯಲ್ಲಿದ್ದಾರೆ. ‘ದಿ ಕೇರಳ ಸ್ಟೋರಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಕಾರಣದಿಂದ ಅವರು ಸಾಕಷ್ಟು ಸುದ್ದಿ ಆದರು. ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಿದೆ. ಈಗ ಅವರು ಮತ್ತೊಂದು ವಿಶೇಷ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಸಾಯುವಾಗ ಉಳಿದುಕೊಂಡಿದ್ದ ಮನೆಯನ್ನು ಅವರು ಖರೀದಿ ಮಾಡಿದ್ದಾರೆ. ಈ ವಿಚಾರದಲ್ಲಿ ಮೌನ ವಹಿಸಿದ್ದ ಅವರು ಆ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ನೀವು ನನ್ನ ಹೃದಯದಲ್ಲಿ ಇದ್ದೀರಿ ಎನ್ನುವಂತಹ ಸಂದೇಶವನ್ನೂ ಅವರು ಕೊಟ್ಟಿದ್ದಾರೆ.

ಯುವ ನಟ ಸುಶಾಂತ್ ಸಿಂಗ್ ಮುಂಬೈನ ಮೋಂಟ್ ಬ್ಲ್ಯಾಂಕ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದರು. 2020 ಜೂನ್ 14ರಂದು ಅದೇ ಅಪಾರ್ಟ್ ಮೆಂಟ್ ನ ರೂಮ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಅಲ್ಲಿಂದ ಆ ಫ್ಲ್ಯಾಟ್ ಖಾಲಿಯೇ ಉಳಿದಿತ್ತು. ಸುಶಾಂತ್ ಸಿಂಗ್ ಆತ್ಮ ಅಲ್ಲಿದೆ ಎಂದೂ ಹಬ್ಬಿಸಲಾಗಿತ್ತು.

ಅದಾ ಶರ್ಮ
ರಣವಿಕ್ರಮ ಬೆಡಗಿ ಅದಾ ಶರ್ಮಾ ಓಪನ್ ಚಾಲೆಂಜ್, ಫೋಟೋ ನೋಡಿ ದಂಗಾದ ಅಭಿಮಾನಿಗಳು!

ಮುಂಬೈನ ಆ ಫ್ಲ್ಯಾಟ್ ನಾಲ್ಕು ಕೋಣೆಗಳನ್ನು ಹೊಂದಿದ್ದು, ಸಮುದ್ರಕ್ಕೆ ಮುಖ ಮಾಡಿದ ಮನೆಯಾಗಿದೆ. ಒಟ್ಟು 2500 ಸ್ಕ್ವೇರ್ ಫೀಟ್ ವಿಸ್ತೀರ್ಣ ಹೊಂದಿದೆ. ಇಲ್ಲಿಯೇ ಹಲವಾರು ವರ್ಷಗಳಿಂದ ಸುಶಾಂತ್ ಸಿಂಗ್ ವಾಸವಿದ್ದರು. ಸಾವಿನ ನಂತರ ಯಾರೂ ಈ ಮನೆಯಲ್ಲಿ ಉಳಿದುಕೊಳ್ಳಲು ಇಷ್ಟ ಪಟ್ಟಿರಲಿಲ್ಲ.

ಈ ಕುರಿತಾಗಿ ಮಾತನಾಡಿದ ನಟಿ ಅದಾ ಶರ್ಮಾ "ನಾನು ಕೋಟ್ಯಂತರ ಜನರ ಹೃದಯದಲ್ಲಿ ಇದ್ದೇನೆ ಅದರ ಬಗ್ಗೆ ಖಂಡಿತವಾಗಲೂ ಸರಿಯಾದ ಸಮಯ ಬಂದಾಗ ಅದರ ಬಗ್ಗೆ ಮಾತನಾಡುತ್ತೇನೆ ಹೊರತು ಈಗಲ್ಲ ಎಂದು ಹೇಳಿದರು. ಇದೆ ವೇಳೆ ಸುಶಾಂತ್ ಅಪಾರ್ಟ್ ಮೆಂಟ್ ಬಗ್ಗೆ ಕೇಳಿದ್ದಕ್ಕೆ ಉತ್ತರಿಸುತ್ತಾ" ಎಲ್ಲವನ್ನು ಹೇಳಲಿಕ್ಕೆ ಸಮಯವಿದೆ. ನಾನು ಆ ಸ್ಥಳಕ್ಕೆ ಹೋದಾಗ ಮಾಧ್ಯಮಗಳು ಈ ವಿಚಾರವಾಗಿ ಹೆಚ್ಚು ಗಮನ ನೀಡಿದವು. ನಾನು ಖಾಸಗಿ ವ್ಯಕ್ತಿ, ಚಲನಚಿತ್ರಗಳನ್ನು ಹೊರತುಪಡಿಸಿ, ನನ್ನ ಇತರ ವಿಷಯಗಳನ್ನು ಖಾಸಗಿಯಾಗಿಡಲು ನಾನು ಇಷ್ಟಪಡುತ್ತೇನೆ ಎಂದು ಹೇಳಿದರು.

ಇಲ್ಲದ ವ್ಯಕ್ತಿಯ ಬಗ್ಗೆ ಯಾರಾದರೂ ಕೆಟ್ಟದಾಗಿ ಹೇಳಿದಾಗ ನನಗೆ ತುಂಬಾ ಬೇಸರವಾಗುತ್ತದೆ.ಅವರು ನಾನು ತುಂಬಾ ಗೌರವಿಸುವ ನಟ. ನಾನು ಅವರ ಮನೆಗೆ ಭೇಟಿ ನೀಡಿದಾಗ ಜನರು ಮಾಡಿದ್ದ ಕಾಮೆಂಟ್ ಗಳನ್ನು ನೋಡಿ ನನಗೆ ತುಂಬಾ ಬೇಸರವಾಯಿತು. ನೀವು ನನ್ನನ್ನು ಟ್ರೋಲ್ ಮಾಡಬಹುದು ಆದರೆ ಇನ್ನು ಮುಂದೆ ಈ ಜಗತ್ತಿನಲ್ಲಿ ಇಲ್ಲದ ವ್ಯಕ್ತಿಯ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ" ಎಂದು ಮನವಿ ಮಾಡಿದರು. ಇದೇ ವೇಳೆ ಅದಾ ಶರ್ಮಾ ತಾನು ಎಲ್ಲಿ ವಾಸಿಸುತ್ತಿದ್ದೇನೆ ಎಂದು ಶೀಘ್ರದಲ್ಲೇ ಹೇಳುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com