ಸುಕೃತ ವಾಗ್ಲೆ ನಟನೆಯ ಡಾರ್ಕ್ ವೆಬ್ ಜಗತ್ತಿನ 'ಕಪಟಿ' ಆಗಸ್ಟ್ 23ಕ್ಕೆ ರಿಲೀಸ್

ಬೆಳ್ಳಿತೆರೆಯು ನನ್ನನ್ನು ಬಿಡವುದಿಲ್ಲ ಎಂಬಂತೆ ಎಂದು ತೋರುತ್ತದೆ ಮತ್ತು ಅದರ ಪರಿಣಾಮವಾಗಿ, ಕಪಟಿ, ಮ್ಯಾಕ್ಸ್ ಮತ್ತು ಮಾರ್ಟಿನ್ ಮೂರು ಸಿನಿಮಾ ಆಫರ್ ಸಿಕ್ಕಿತು ಎಂದು ಸುಕೃತಾ ಹೇಳಿದ್ದಾರೆ.
ಸುಕೃತ ವಾಗ್ಲೆ
ಸುಕೃತ ವಾಗ್ಲೆ
Updated on

ಚಿತ್ರರಂಗದಿಂದ ಹಿಂದೆ ಸರಿದು ಎಲ್ ಎಲ್ ಬಿ ಮುಂದುವರಿಸಿದ್ದ ಸುಕೃತಾ ವಾಗ್ಲೆ ಅನಿರೀಕ್ಷಿತವಾಗಿ ನಟನೆಗೆ ಮರಳುತ್ತಿದ್ದಾರೆ. ದಯಾಳ್ ಪದ್ಮನಾಭನ್ ನಿರ್ಮಿಸಿದ ಮತ್ತು ನಿರ್ದೇಶಕ ಜೋಡಿ ರವಿಕಿರಣ್ ಮತ್ತು ಚೇತನ್ ನಿರ್ದೇಶನದ ಕಪಟಿ ಚಿತ್ರವು ಅವರ ಸಿನಿಮಾದ ಉತ್ಸಾಹವನ್ನು ಮತ್ತೆ ಹೆಚ್ಚಿಸಿದೆ.

ರವಿ ಕಿರಣ್​ ಮತ್ತು ಚೇತನ್​ ಆ್ಯಕ್ಷನ್ ​- ಕಟ್​ ಹೇಳಿರುವ ಡಾರ್ಕ್​ ನೆಟ್​ ಕಥಾಹಂದರದ ಸಿನಿಮಾ “ಕಪಟಿ’. ಸುಕೃತಾ ವಾಗ್ಲೆ, ದೇವ್​ ದೇವಯ್ಯ, ಸಾತ್ವಿಕ್​ ಕೃಷ್ಣನ್​ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಆಗಸ್ಟ್ 23 ರಂದು ಥಿಯೇಟರ್‌ಗಳಿಗೆ ಬರಲಿದೆ.

ನಾನು ಮೂಲತಃ 2019 ರಲ್ಲಿ ಚಲನಚಿತ್ರೋದ್ಯಮವನ್ನು ತೊರೆದು ಎಲ್ ಎಲ್ ಬಿ ವ್ಯಾಸಂಗದ ಕಡೆ ಗಮನ ಕೇಂದ್ರೀಕರಿಸಿದೆ, ನಾನು ಈಗಾಗಲೇ ನಟನೆಯಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದಾಗಿ ನನ್ನ ಪೋಷಕರು ಹೇಳಿದರು. ವಿದ್ಯಾಭ್ಯಾಸದ ಸಮಯದಲ್ಲೇ ನಾನು ಮಾರ್ಟಿನ್‌ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ, ಆದರೆ ಕಪಟಿ ನಿಜವಾಗಿಯೂ ನನ್ನನ್ನು ಬೆಳ್ಳಿತೆರೆಗೆ ಮತ್ತೆ ಸೆಳೆಯಿತು. ಚಿತ್ರದ ಕುರಿತು ಮಾತನಾಡಿದ ಅವರು, ಕಪಟಿ ಪರಿಕಲ್ಪನೆಯು ವಿಶಿಷ್ಟವಾಗಿತ್ತು. ಇದು ಮಹಿಳಾ-ಕೇಂದ್ರಿತ ಸ್ಕ್ರಿಪ್ಟ್, ಮತ್ತು ಪಾತ್ರಕ್ಕೆ ಜೀವ ತುಂಬ ಬಲ್ಲ ಕಲಾವಿದರು ಬೇಕೆಂದು ಮತ್ತು ಆ ಪಾತ್ರಕ್ಕೆ ನಾನು ಸೂಕ್ತವೆಂದು ಅವರು ಭಾವಿಸಿದರು ಎಂದು ಸುಕೃತಾ ವಾಗ್ಲೆ ಸಿನಿಮಾ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಸುಕೃತ ವಾಗ್ಲೆ
ಅಕ್ಟೋಬರ್‌ 11ಕ್ಕೆ ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಚಿತ್ರ ‘ಮಾರ್ಟಿನ್’ ತೆರೆಗೆ!

ಕಪಟಿ ತಂಡದ ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿದರು. ನಿರ್ದೇಶಕರು ತಮ್ಮ ಹಿಂದಿನ ಕೆಲಸದ ಕೆಲವು ದೃಶ್ಯಗಳನ್ನು ನನಗೆ ತೋರಿಸಿದರು. ಅವರ ಸಮರ್ಪಣೆ ನನಗೆ ತುಂಬಾ ಹಿಡಿಸಿತು. ತಮ್ಮ ಐಟಿ ಹಿನ್ನೆಲೆಯ ಹೊರತಾಗಿಯೂ, ಅವರು ಈ ಯೋಜನೆಯನ್ನು ಪೂರ್ಣಗೊಳಿಸಲು ಕೆಲಸದಿಂದ ರಜೆ ತೆಗೆದುಕೊಂಡರು. ಅವರು ಸ್ಪಷ್ಟ ದೃಷ್ಟಿಕೋನವನ್ನು ಹೊಂದಿದ್ದರು ಮತ್ತು ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ದಯಾಳ್ ಪದ್ಮನಾಭನ್ ಅವರಂತಹವರು ನಿರ್ಮಾಪಕರಾಗಿರುವುದು ನನಗೆ ಮತ್ತಷ್ಟು ಉತ್ಸಾಹ ಹೆಚ್ಚಿಸಿತು ಎಂದಿದ್ದಾರೆ.

ಸುದೀಪ್ ಅವರ ಮ್ಯಾಕ್ಸ್‌ನಲ್ಲಿನ ತಮ್ಮ ಪಾತ್ರದ ಬಗ್ಗೆ ಸುಕೃತಾ ಥ್ರಿಲ್ ಆಗಿದ್ದಾರೆ. "ಬೆಳ್ಳಿತೆರೆಯು ನನ್ನನ್ನು ಬಿಡವುದಿಲ್ಲ ಎಂಬಂತೆ ಎಂದು ತೋರುತ್ತದೆ ಮತ್ತು ಅದರ ಪರಿಣಾಮವಾಗಿ, ಕಪಟಿ, ಮ್ಯಾಕ್ಸ್ ಮತ್ತು ಮಾರ್ಟಿನ್ ಮೂರು ಸಿನಿಮಾ ಆಫರ್ ಸಿಕ್ಕಿತು ಎಂದು ಸುಕೃತಾ ಹೇಳಿದ್ದಾರೆ. ಕಪಟಿ ಒಂದು ಥ್ರಿಲ್ಲರ್ ಆಗಿದ್ದು ಅದು ಡಾರ್ಕ್ ವೆಬ್‌ ಕರಾಳ ಜಗತ್ತಿನ ಬಗ್ಗೆ ಕಥೆ ಅನಾವರಣಗೊಂಡಿದೆ.

ಕಪಟಿ ಚಿತ್ರಕ್ಕೆ ಜೋಹನ್ ಸಂಗೀತ ನೀಡಿದ್ದು, ಸತೀಶ್ ರಾಜೇಂದ್ರನ್ ಕ್ಯಾಮೆರಾ ಕೈಚಳಕವಿದೆ. ಸುನೀಲ್ ಅವರ ಕಲಾ ನಿರ್ದೇಶನವಿದ್ದು, ರವಿ ಸಾಹಸ ನಿರ್ದೇಶನ ಮಾಡಿದ್ದಾರೆ. ಡಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣ ಆಗಿರುವ ಕಪಟಿ ಸಿನಿಂಆ ಆಗಸ್ಟ್ 23ರಂದು ರಿಲೀಸ್ ಆಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com