ಚಾಕೊಲೇಟ್ ಬಾಯ್ ಇಮೇಜ್ ನಿಂದ ರಗಡ್ ಲುಕ್: 'ಅತಿಕಾಯ' ಚಿತ್ರದಲ್ಲಿ ನಿರೂಪ್ ಭಂಡಾರಿ ಹೊಸ ಗೆಟಪ್

ಈ ಹಿಂದೆ ಪದೇ ಪದೇ, ನಮಕ್‌ ಹರಾಮ್ ಮೊದಲಾದ ವಿಭಿನ್ನ ರೀತಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ ನಾಗರಾಜ್ ಪೀಣ್ಯ, ಸಣ್ಣ ಗ್ಯಾಪ್‌ನ ಬಳಿಕ ‘ಅತಿಕಾಯ’ನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ನಿರೂಪ್ ಭಂಡಾರಿ
ನಿರೂಪ್ ಭಂಡಾರಿ
Updated on

ರಂಗಿತರಂಗ, ರಾಜರಥ, ಆದಿ ಲಕ್ಷ್ಮಿ ಪುರಾಣ, ವಿಂಡೋ ಸೀಟ್ ಮತ್ತು ವಿಕ್ರಾಂತ್ ರೋಣ ಮುಂತಾದ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ನಿರೂಪ್ ಭಂಡಾರಿ ಹೊಸ ಸಿನಿಮಾದಲ್ಲಿ 'ಚಾಕೊಲೇಟ್ ಬಾಯ್' ಇಮೇಜ್‌ನಿಂದ ರಗಡ್ ಲುಕ್ ಗೆ ಬದಲಿಸಿಕೊಂಡಿದ್ದಾರೆ.

ನಾಗರಾಜ್ ಪೀಣ್ಯ ನಿರ್ದೇಶನದಲ್ಲಿಅತಿಕಾಯ ಸಿನಿಮಾ ಮೂಡಿ ಬರುತ್ತಿದೆ. ಈ ಹಿಂದೆ ಪದೇ ಪದೇ, ನಮಕ್‌ ಹರಾಮ್ ಮೊದಲಾದ ವಿಭಿನ್ನ ರೀತಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ ನಾಗರಾಜ್ ಪೀಣ್ಯ, ಸಣ್ಣ ಗ್ಯಾಪ್‌ನ ಬಳಿಕ ‘ಅತಿಕಾಯ’ನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಾರಿ ಹೊಸ ರೀತಿಯ ಕಥೆ ಸಿದ್ಧಪಡಿಸಿಕೊಂಡು ಅಖಾಡಕ್ಕಿಳಿದಿರುವ ನಾಗರಾಜ್, ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿಸಿದ್ದಾರೆ. ಮತ್ತೊಂದು ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ ಚಿತ್ರತಂಡ.

ನಿರೂಪ್ ಭಂಡಾರಿ ಅವರು ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದಾರೆ ಎಂದು ನಿರ್ದೇಶಕ ನಾಗರಾಜ ಪೀಣ್ಯ ಹೇಳಿದ್ದಾರೆ. ವರ್ಕೌಟ್ ಮಾಡಿ ದೇಹ ದಂಡಿಸಿದ್ದಾರೆ. ಪಾತ್ರಕ್ಕಾಗಿ ಗೆಟಪ್ ಸಹ ಬದಲಾಯಿಸಿಕೊಂಡಿದ್ದಾರೆ. ಅವರು ಈವರೆಗೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ‘ಅತಿಕಾಯ’ ಮೂಲಕ ಎಂಟ್ರಿ ಕೊಡಲಿದ್ದಾರೆ ಎಂಬುದು ವಿಶೇಷ. ಡೈಲಾಗ್ ಡೆಲಿವರಿ ಕೂಡ ಭಿನ್ನವಾಗಿರಲಿದೆ. ಒಟ್ಟಾರೆ ಅವರು ಔಟ್ ಆಂಡ್ ಔಟ್ ಬದಲಾದ ರೂಪದಲ್ಲಿ ಕಾಣಸಿಗುತ್ತಾರೆ. ಸಿನಿಮಾ ಕೂಡ ತುಂಬಾ ರಗಡ್ ಆಗಿರಲಿದೆ’ ಎಂದು ವಿವರಿಸುತ್ತಾರೆ ನಿರ್ದೇಶಕ ನಾಗರಾಜ್ ಪೀಣ್ಯ. ಉದಯಲೀಲ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀನಿವಾಸ್ ಪಿ ಬಾಬು ಸಂಕಲನ, ಸತೀಶ್ ಆರ್ಯನ್ ಸಂಗೀತ ಸಂಯೋಜಿಸುತ್ತಿದ್ದಾರೆ.

ನಿರೂಪ್ ಭಂಡಾರಿ
'ರಂಗಿತರಂಗ' ನಂತರ ಮತ್ತೆ ಜೊತೆಯಾದ ನಿರೂಪ್ ಭಂಡಾರಿ - ಸಾಯಿಕುಮಾರ್!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com