ಟಾಲಿವುಡ್ ಗೆ ಹಾರಲಿದ್ದಾರೆ ಪ್ರದೀಪ್ ಈಶ್ವರ್: ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ನಟನೆ!

ನಾನು ಮೆಗಾಸ್ಟಾರ್ ಚಿರಂಜೀವಿಯವರ ದೊಡ್ಡ ಫ್ಯಾನ್. ಚಿರಂಜೀವಿ ಅವರಿಗೆ ನನ್ನ ಮೇಲೆ ವಿಶೇಷವಾದ ಪ್ರೀತಿ ಇದೆ. ನಾನು ಚಿರಂಜೀವಿ ಅವರ ಸಮುದಾಯದ ಹುಡುಗ, ಶಾಸಕನಾದಾಗಲೂ ಮನೆಗೆ ಕರೆಸಿದ್ದರು ಎಂದು ತಿಳಿಸಿದರು.
ಚಿರಂಜೀವಿ ಮತ್ತು ಪ್ರದೀಪ್ ಈಶ್ವರ್
ಚಿರಂಜೀವಿ ಮತ್ತು ಪ್ರದೀಪ್ ಈಶ್ವರ್
Updated on

ಬೆಂಗಳೂರು: ಟಾಲಿವುಡ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆ ನಟನೆಗೆ ತನಗೆ ಅವಕಾಶ ಸಿಕ್ಕಿರುವುದಾಗಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ನಗರದಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ನಾನು ಮೆಗಾಸ್ಟಾರ್ ಚಿರಂಜೀವಿಯವರ ದೊಡ್ಡ ಫ್ಯಾನ್. ಚಿರಂಜೀವಿ ಅವರಿಗೆ ನನ್ನ ಮೇಲೆ ವಿಶೇಷವಾದ ಪ್ರೀತಿ ಇದೆ. ನಾನು ಚಿರಂಜೀವಿ ಅವರ ಸಮುದಾಯದ ಹುಡುಗ, ಶಾಸಕನಾದಾಗಲೂ ಮನೆಗೆ ಕರೆಸಿದ್ದರು ಎಂದು ತಿಳಿಸಿದರು. ಟಾಲಿವುಡ್ ಚಿತ್ರರಂಗದ ದಿಗ್ಗಜ ಮೆಗಾಸ್ಟಾರ್ ಚಿರಂಜೀವಿಯವರು ಸಾಮಾಜಿಕ ಕ್ರಾಂತಿಯ ಚಲನಚಿತ್ರವೊಂದರಲ್ಲಿ ನಟಿಸಲು ಸನ್ನದರಾಗುತ್ತಿದ್ದಾರೆ. ಇದರಿಂದ ಚಿರಂಜೀವಿ ಜೊತೆ ನಟಿಸಲು ನನಗೆ ಕರೆ ಬಂದಿದೆ, ಚಿರಂಜೀವಿಯವರ ಚಲನಚಿತ್ರವನ್ನು ನಿರ್ದೇಶಿಸುತ್ತಿರುವ ಖ್ಯಾತ ನಿರ್ದೇಶಕರೊಬ್ಬರು ಮೊನ್ನೆ ಕರೆ ಮಾಡಿ ವಿಷಯ ತಿಳಿಸಿದ್ದಾರೆಂದು ಶಾಸಕ ಪ್ರದೀಪ್‌ಈಶ್ವರ್ ತಿಳಿಸಿದ್ದಾರೆ.

ಪವನ್ ಕಲ್ಯಾಣ್ ಅವರು ಗೆದ್ದಾಗ ನಾನು ಫೋನ್ ಮಾಡಿ ವಿಶ್ ಮಾಡಿದ್ದೆ. ನಟನೆಗೆ ಅವಕಾಶದ ಬಗ್ಗೆ ಚರ್ಚೆ ನಡೆದಿರೋದು ನಿಜ. ಸದ್ಯ ಚಿರಂಜೀವಿ ಅವರು ವಿಶ್ವಾಂಬರ ಚಿತ್ರದಲ್ಲಿ ಈಗ ನಟನೆ ಮಾಡುತ್ತಿದ್ದಾರೆ. ಇದಾದ ನಂತರ ಮುಂದಿನ ಚಿತ್ರದಲ್ಲಿ ಅವಕಾಶದ ಬಗ್ಗೆ ಚರ್ಚೆ ನಡೆದಿದೆ. ಯಾವ ಪಾತ್ರ ಏನು ಎಂಬುದು ಮುಂದಿನ ದಿನಗಳಲ್ಲಿ ಅವರೇ ತಿಳಿಸಲಿದ್ದಾರೆ ಎಂದರು. ನನಗೆ ಚಿರಂಜೀವಿ ಅವರ ಜೊತೆ ಡ್ಯಾನ್ಸ್ ಮಾಡಬೇಕು ಎಂಬುದು ಆಸೆ. ಒಂದು ಸಣ್ಣ ಸ್ಟೆಪ್ ಹಾಕಲು ಅವಕಾಶ ಸಿಕ್ರೂ ಅದು ನನ್ನ ಸೌಭಾಗ್ಯ. ನಾನು ರಾಜಕಾರಣದಲ್ಲಿ ಕೆಲವರನ್ನ ಡ್ಯಾನ್ಸ್ ಮಾಡಿಸಿದ್ದೀನಿ. ಆದರೆ ಚಿರಂಜೀವಿ ಅವರ ಜೊತೆ ಡ್ಯಾನ್ಸ್ ಮಾಡಿದ್ರೆ ಅದು ನನಗೆ ಖುಷಿ ಎಂದು ಹೇಳಿದ್ದಾರೆ.

ಚಿರಂಜೀವಿ ಮತ್ತು ಪ್ರದೀಪ್ ಈಶ್ವರ್
'ಅವಾಚ್ಯ ಪದ ಬಳಕೆ, ಮಾತನಾಡಲು ಬಿಟ್ಟಿಲ್ಲ': ಆರ್ ಅಶೋಕ್ ವಿರುದ್ಧ ಪ್ರದೀಪ್ ಈಶ್ವರ್ ಹಕ್ಕು ಚ್ಯುತಿ ಮಂಡನೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com