
ತೆಲುಗಿನ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ 'Pushpa 2' ಆರ್ಭಟಕ್ಕೆ ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳು ಉಡೀಸ್ ಆಗಿದೆ. ಬಿಡುಗಡೆಯಾದ ಮೊದಲ ದಿನವೇ ಜಾಗತಿಕವಾಗಿ ರೂ. 294 ಕೋಟಿ ಕಲೆಕ್ಷನ್ ಮಾಡಿದೆ.
2021 ರ ತೆಲುಗು ಬ್ಲಾಕ್‌ಬಸ್ಟರ್ ಪುಷ್ಪಾ: ದಿ ರೈಸ್‌ನ ಮುಂದುವರಿದ ಭಾಗವಾದ ಸುಕುಮಾರ್ ನಿರ್ದೇಶನದ 'Pushpa 2' ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಬಿಡುಗಡೆಯಾದ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿ ದಾಖಲೆ ಬರೆದಿದೆ.
ಈ ಮೂಲಕ RRR ದಾಖಲೆಯನ್ನು ಮುರಿದಿದೆ. ಈ ಹಿಂದೆ ಎಸ್ ಎಸ್ ರಾಜಮೌಳಿ ನಿರ್ದೇಶನದ RRR ಬಿಡುಗಡೆಯಾದ ಮೊದಲ ದಿನ ರೂ. 223.5 ಕೋಟಿ ಕಲೆಕ್ಷನ್ ಮಾಡಿತ್ತು. ನಂತರ ಬಾಹುಬಲಿ 2 ರೂ. 217 ಕೋಟಿ, ಕಲ್ಕಿ 2898 ಎಡಿ ರೂ. 175 ಕೋಟಿ ಕಲೆಕ್ಷನ್ ಮಾಡಿತ್ತು.
ಈ ಚಿತ್ರದ ಕಲೆಕ್ಷನ್ ಟ್ರೆಂಡ್ ಭಾರತೀಯ ಚಿತ್ರೋದ್ಯಮದ ತಜ್ಞರ ಲೆಕ್ಕಾಚಾರವನ್ನು ತಲೆ ಕೆಳಗಾಗಿಸಿದೆ. ಮೊದಲ ದಿನ 150 ಕೋಟಿಗಿಂತ ಸ್ವಲ್ಪ ಹೆಚ್ಚು ಗಳಿಸಬಹುದು ಎಂದು ಊಹಿಸಿದ್ದರು. ಪುಷ್ಪ 2 ನಿರ್ಮಾಣ ಮಾಡಿರುವ ಮೈತ್ರಿ ಮೂವೀ ಮೇಕರ್ಸ್, ಬಾಕ್ಸ್ ಆಫೀಸ್ ಅಂಕಿಅಂಶಗಳನ್ನು ಹಂಚಿಕೊಂಡಿದೆ.
ಬಾಕ್ಸ್ ಆಫೀಸ್ ಇತಿಹಾಸದಲ್ಲಿ ಪುಷ್ಪ-2 ಇತಿಹಾಸ ಸೃಷ್ಟಿಸಿದೆ. ಬಿಡುಗಡೆಯಾದ ಮೊದಲ ದಿನ ವಿಶ್ವಾದ್ಯಂತ 294 ಕೋಟಿ ಗಳಿಸಿದೆ. ಭಾರತೀಯ ಚಿತ್ರರಂಗದಲ್ಲಿ ಬಿಡುಗಡೆಯಾದ ಮೊದಲ ದಿನವೇ ಅತ್ಯಧಿಕ ಕಲೆಕ್ಷನ್ ಮಾಡಿದೆ ಎಂದು ಸ್ಟುಡಿಯೋ Instagram ನಲ್ಲಿ ಪೋಸ್ಟ್ ಮಾಡಿದೆ.
ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಶ್ರೀಗಂಧದ ಕಳ್ಳಸಾಗಾಣಿಕೆದಾರರಾದ ಪುಷ್ಪಾ ರಾಜ್ ಆಗಿ ಮರಳಿದ್ದಾರೆ, ಜೊತೆಗೆ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಮತ್ತು ಎಸ್ಪಿ ಭನ್ವರ್ ಸಿಂಗ್ ಶೇಖಾವತ್ ಆಗಿ ಫಹಾದ್ ಫಾಸಿಲ್ ಅಭಿನಯಿಸಿದ್ದು,
ಹಿಂದಿ, ತಮಿಳು, ಕನ್ನಡ, ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಲ್ಲಿ ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿದೆ.
Advertisement