ಗೀತಾ ಪಿಕ್ಚರ್ಸ್ ಮುಂದಿನ ಸಿನಿಮಾಗೆ ಧಿರೇನ್ ರಾಮ್ ನಾಯಕ: 'ಶಾಖಾಹಾರಿ' ನಿರ್ದೇಶಕ ಆ್ಯಕ್ಷನ್ ಕಟ್!

ಈ ಚಿತ್ರವು ಗೀತಾ ಪಿಕ್ಚರ್ಸ್‌ ನ ಹೊಸ ಪ್ರಯೋಗವಾಗಿದೆ. ತಮ್ಮಬ್ಯಾನರ್ ನಲ್ಲಿ ಯಾವಾಗಲು ಶಿವಣ್ಣ ನಟಿಸುತ್ತಿದ್ದರು.
Geetha Shivarajkumar, Dheeren Ramkumar, Shivarajkumar and Sandeep Sunkad
ಗೀತಾ, ಧಿರೇನ್, ಶಿವಣ್ಣ ಮತ್ತು ಸಂದೀಪ್ ಸುಂಕದ್
Updated on

ಭೈರತಿ ರಣಗಲ್ ಚಿತ್ರದ ಯಶಸ್ಸಿನಲ್ಲಿರುವ ಗೀತಾ ಪಿಕ್ಚರ್ಸ್ ಮತ್ತೊಂದು ಹೊಸ ಸಿನಿಮಾ ಪ್ರಕಟಿಸಿದೆ. ತಮ್ಮ ಮೂರನೇ ಸಿನಿಮಾ ಎ ಫಾರ್ ಆನಂದ್ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ನಂತರ, ಬ್ಯಾನರ್ ಈಗ ಡಾ ಪಾರ್ವತಮ್ಮ ರಾಜ್‌ಕುಮಾರ್ ಅವರ ಜನ್ಮದಿನದ ನೆನಪಿಗಾಗಿ ಮತ್ತೊಂದು ಭರವಸೆಯ ಸಿನಿಮಾ ಘೋಷಿಸಿದ್ದಾರೆ.

ಈ ಚಿತ್ರದಲ್ಲಿ ಧೀರೇನ್ ರಾಮ್‌ಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾಖಾಹಾರಿ ಚಿತ್ರದ ಡೈರೆಕ್ಟರ್ ಸಂದೀಪ್ ಸುಂಕದ್ ನಿರ್ದೇಶಿಸಲಿದ್ದಾರೆ. ಈ ಚಿತ್ರವು ಗೀತಾ ಪಿಕ್ಚರ್ಸ್‌ ನ ಹೊಸ ಪ್ರಯೋಗವಾಗಿದೆ. ತಮ್ಮಬ್ಯಾನರ್ ನಲ್ಲಿ ಯಾವಾಗಲು ಶಿವಣ್ಣ ನಟಿಸುತ್ತಿದ್ದರು, ಆದರೆ ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಹೊರತು ಪಡಿಸಿ ಬೇರೋಬ್ಬ ನಾಯಕನನ್ನು ಆಯ್ಕೆ ಮಾಡುವ ಸಂಪ್ರದಾಯ ಪಾಲಿಸುತ್ತಿದೆ. ಅದರ ಬ್ಯಾನರ್ ಅಡಿಯಲ್ಲಿಹೊಸ ಮುಖಗಳನ್ನು ಪರಿಚಯಿಸುತ್ತದೆ. ಹಾಗೆಂದ ಮಾತ್ರಕ್ಕೆ ಗೀತಾ ಪಿಕ್ಟರ್ಸ್ ಅಡಿಯಲ್ಲಿ ಬರುತ್ತಿರುವ ಹೊಸ ಸಿನಿಮಾಗೆ ಹೊರಗಿನವರು ನಾಯಕರಲ್ಲ, ಶಿವರಾಜ್ಕುಮಾರ್ ಅವರ ಸಹೋದರಿ ಪೂರ್ಣಿಮಾ ಮತ್ತು ನಟ ರಾಮ ಕುಮಾರ್ ಮಗ ಧಿರೇನ್ ರಾಮ್ ಕುಮಾರ್ ನಾಯಕನಾಗುತ್ತಿದ್ದಾರೆ. ಡಿ. 6, ಪಾರ್ವತಮ್ಮ ರಾಜಕುಮಾರ್‍ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಗೀತಾ ಪಿಕ್ಚರ್ಸ್‍ನ ನಾಲ್ಕನೇ ಚಿತ್ರವನ್ನು ಘೋಷಿಸಲಾಗಿದೆ. ಈ ಚಿತ್ರದಲ್ಲಿ ಧೀರನ್‍ ರಾಮ್‍ಕುಮಾರ್‍ ನಾಯಕನಾಗಿ ನಟಿಸಿದರೆ, ‘ಶಾಖಾಹಾರಿ’ ಚಿತ್ರವನ್ನು ನಿರ್ದೇಶಿಸಿದ್ದ ಸಂದೀಪ್‍ ಸುಂಕದ್‍ ನಿರ್ದೇಶನ ಮಾಡುತ್ತಿದ್ದಾರೆ.

ಧೀರೆನ್ ಶಿವ 143 ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದರು, ಆದರೆ ಹೇಳಿಕೊಳ್ಳವಷ್ಟು ಸಿನಿಮಾ ಯಶಸ್ಸು ಕಾಣಲಿಲ್ಲ, ಹೀಗಾಗಿ ಮುಂದಿನ ಸಿನಿಮಾ ಕತೆ ಆಯ್ಕೆಯಲ್ಲಿ ದಿರೇನ್ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ನಟನಾಗಿ ನನಗೆ ಸವಾಲು ಹಾಕುವ ಮತ್ತು ನನ್ನ ಸಾಮರ್ಥ್ಯವನ್ನು ಎತ್ತಿ ತೋರಿಸುವ ಸರಿಯಾದ ಸ್ಕ್ರಿಪ್ಟ್‌ಗಾಗಿ ನಾನು ಕಾಯುತ್ತಿದ್ದೆ ಎಂದು ಧೀರೆನ್ ಹೇಳಿದ್ದಾರೆ. ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಅವರು ಯಾವುದೇ ನಟನಿಗೆ ಎರಡನೇ ಚಿತ್ರವು ನಿರ್ಣಾಯಕವಾಗಿದೆ ಎಂದು ನಾನು ನಂಬುತ್ತೇನೆ- ಅಲ್ಲಿ ನೀವು ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು ಎಂದು ಹೇಳಿದ್ದಾರೆ. ಸಂದೀಪ್ ಕಥೆಯನ್ನು ಹೇಳಿದಾಗ, ನನ್ನ ಮನಸ್ಸಿಗೆ ಹಿಡಿಸಿತು. ಶಾಖಾಹಾರಿಯಲ್ಲಿನ ಅವರ ಕೆಲಸವು ಕರ್ನಾಟಕದಲ್ಲಿ ಮಾತ್ರವಲ್ಲದೆ ಅದರ ಹೊರಗೂ ವಿಶೇಷವಾಗಿ OTT ಬಿಡುಗಡೆಯ ನಂತರ ಮನ್ನಣೆಯನ್ನು ಗಳಿಸಿತು. ನಾವು ಒಟ್ಟಾಗಿ ಈ ಸಿನಿಮಾ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೊಳಿಸುತ್ತೇವೆ ಎಂದು ನನಗೆ ವಿಶ್ವಾಸವಿದೆ ಎಂದಿದ್ದಾರೆ ದಿರೇನ್.

Geetha Shivarajkumar, Dheeren Ramkumar, Shivarajkumar and Sandeep Sunkad
'ಭಜರಂಗಿ' ನಿರ್ದೇಶಕ ಚೇತನ್ ಕುಮಾರ್ ಜೊತೆ ಧೀರೇನ್ ರಾಮ್ ಮುಂದಿನ ಸಿನಿಮಾ

ಗೀತಾ ಪಿಕ್ಚರ್ಸ್ ಅವರು ಚಿತ್ರ ನಿರ್ಮಿಸಲು ಒಪ್ಪಿಕೊಂಡಾಗ ನಾನು ರೋಮಾಂಚನಗೊಂಡೆ ಎಂದು ಧೀರೆನ್ ಹೇಳಿದ್ದಾರೆ, ಏಕೆಂದರೆ ನಾನು ನಿರೀಕ್ಷಿಸಿರಲಿಲ್ಲ. “ನಾನು ಸ್ಕ್ರಿಪ್ಟ್‌ನೊಂದಿಗೆ ಶಿವಣ್ಣ ಮಾಮಾ ಅವರನ್ನು ಸಂಪರ್ಕಿಸಿದೆ, ಅವರ ಮಾರ್ಗದರ್ಶನವನ್ನು ಕೋರಿದೆ. ನಿರ್ಮಾಪಕರನ್ನು ಸೂಚಿಸಬಹುದೇ ಎಂದು ಕೇಳಿದೆ. ನಾನು ಅವರಿಗೆ ಕಥೆಯ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದೆ. ನನಗೆ ಆಶ್ಚರ್ಯವಾಗುವಂತೆ, ಶಿವಣ್ಣ ಮತ್ತು ಗೀತಾ ಮೇಡಂ ಇಬ್ಬರೂ ಅದನ್ನು ತಮ್ಮ ಬ್ಯಾನರ್‌ನಲ್ಲಿ ನಿರ್ಮಿಸುವುದಾಗಿ ಹೇಳಿದರು, ಅವರ ಬೆಂಬಲವು ದೊಡ್ಡ ಆಶೀರ್ವಾದವಾದವಾಗಿದೆ. ಡೆಸ್ಟಿನಿ ನಾನು ಊಹಿಸಿದ್ದಕ್ಕಿಂತ ದೊಡ್ಡ ಪ್ಲಾನ್ ಹೊಂದಿತ್ತು ಎಂದು ಧೀರೆನ್ ಹೇಳಿದ್ದಾರೆ.

ಧೀರೆನ್ ಸಂದೀಪ್ ಸುಂಕದ್ ಅವರ ಚಿತ್ರಕ್ಕೆ ಆದ್ಯತೆ ನೀಡಿದ್ದಾರೆ. ಮುಂಬರುವ ಈ ಯೋಜನೆಯು ಕ್ರೈಮ್ ಥ್ರಿಲ್ಲರ್ ಆಗಿದೆ. ನಾನು ಕಥೆ ಹೇಳಿದಾಗ, ಶಿವಣ್ಣ ಸರ್ ಮತ್ತು ಗೀತಾ ಮೇಡಮ್ ತಕ್ಷಣ ಅದರೊಂದಿಗೆ ಕನೆಕ್ಟ್ ಆದರು, ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮಾಡಲು ನಿರ್ಧರಿಸಿದರು ಎಂದು ಸಂದೀಪ್ ಸುಂಕದ್ ತಿಳಿಸಿದ್ದಾರೆ. ನನ್ನ ವೃತ್ತಿಜೀವನದ ಆರಂಭದಲ್ಲಿ ಅಂತಹ ಪ್ರತಿಷ್ಠಿತ ಸಂಸ್ಥೆಯ ಸಹಯೋಗದೊಂದಿಗೆ ಕೆಲಸ ಮಾಡುತ್ತಿರುವುದು ಅತಿ ರೋಮಾಂಚನ ತಂದಿದೆ. ಗೀತಾ ಪಿಕ್ಚರ್ಸ್ ನಂತಹ ಸಂಸ್ಥೆಯಡಿ ಕೆಲಸ ಮಾಡುವುದು ಪ್ರತಿಯೊಬ್ಬ ನಿರ್ದೇಶಕನ ಜೀವನದ ಕನಸಾಗಿರುತ್ತದೆ ಎಂದಿದ್ದಾರೆ. ಈ ಯೋಜನೆಯು ಪ್ರಸ್ತುತ ಪ್ರಿಪ್ರೊಡಕ್ಷನ್ ಪ್ರಕ್ರಿಯೆಯಲ್ಲಿದೆ, ಮುಂದಿನ ವರ್ಷದ ಆರಂಭದಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com