Amitabh Bachchan And Allu Arjun
ಅಮಿತಾಬ್ ಬಚ್ಚನ್ ಮತ್ತು ಅಲ್ಲು ಅರ್ಜುನ್

ನಿಮ್ಮ ಮಾತುಗಳಿಂದ ವಿನಮ್ರನಾಗಿದ್ದೇನೆ, ನನ್ನ ಅರ್ಹತೆಗಿಂತ ಹೆಚ್ಚು ಹೊಗಳಿದ್ದೀರಿ: ಅಲ್ಲು ಅರ್ಜುನ್ ಕುರಿತು ಅಮಿತಾಬ್ ಮೆಚ್ಚುಗೆ!

ನಟ ಅಮಿತಾಬ್‌ ಬಚ್ಚನ್ ಅವರು ಸಿನಿಮಾ ರಂಗದಲ್ಲಿ ಬೆಳೆಯುತ್ತಿರುವ ನಮ್ಮಂತಹವರ ಮೇಲೆ ಅಗಾಧ ಪ್ರಭಾವ ಬೀರಿದ್ದಾರೆ ಎಂದು ಹೊಗಳಿದ್ದರು.
Published on

ನವದೆಹಲಿ: ದೇಶಾದ್ಯಂತ ಪುಷ್ಪ-2 ಸಿನಿಮಾ ಅಬ್ಬರಿಸುತ್ತಿದೆ. ಬಿಡುಗಡೆಯಾದ ಮೂರು ದಿನಗಳಲ್ಲೇ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ 621 ಕೋಟಿ ರು, ಗಳಿಕೆ ಮಾಡಿದೆ ಎಂದು ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್‌ ಹೇಳಿದೆ.

ಪುಷ್ಪ–2 ದಿ ರೂಲ್‌’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ‘ನಾನು ಅಲ್ಲು ಅರ್ಜುನ್‌ ಅವರ ಅಪ್ಪಟ ಅಭಿಮಾನಿಯಾಗಿದ್ದೇನೆ, ನನ್ನಂತಹ ನಟರಿಗೆ ಅಲ್ಲು ಅರ್ಜುನ್‌ ಸ್ಪೂರ್ತಿಯಾಗಿದ್ದಾರೆ’ ಎಂದು ಬಣ್ಣಿಸಿದ್ದಾರೆ. ಕಳೆದ ವಾರ ಕಾರ್ಯಕ್ರಮವೊಂದರಲ್ಲಿ ಅಲ್ಲು ಅರ್ಜುನ್‌ ಅವರ ಬಳಿ ಬಾಲಿವುಡ್‌ನಲ್ಲಿ ಯಾವ ನಟ ನಿಮಗೆ ಸ್ಪೂರ್ತಿಯಾಗಿದ್ದಾರೆ ಎನ್ನುವ ಪ್ರಶ್ನೆಗೆ, ನಟ ಅಮಿತಾಬ್‌ ಬಚ್ಚನ್ ಅವರು ಸಿನಿಮಾ ರಂಗದಲ್ಲಿ ಬೆಳೆಯುತ್ತಿರುವ ನಮ್ಮಂತಹವರ ಮೇಲೆ ಅಗಾಧ ಪ್ರಭಾವ ಬೀರಿದ್ದಾರೆ ಎಂದು ಹೊಗಳಿದ್ದರು.

ಸೋಮವಾರ ಅಲ್ಲು ಅರ್ಜುನ್‌ ಅವರು ಮಾತನಾಡಿರುವ ವಿಡಿಯೊದ ತುಣುಕನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಅಮಿತಾಬ್ ಬಚ್ಚನ್ ಅಲ್ಲು ಅರ್ಜುನ್‌ ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ. ‘ನಿಮ್ಮ ಮಾತುಗಳಿಂದ ವಿನಮ್ರನಾಗಿದ್ದೇನೆ, ನನ್ನ ಅರ್ಹತೆಗಿಂತ ಹೆಚ್ಚಿನದನ್ನು ನೀಡುತ್ತಿದ್ದೀರಿ, ನಾವು ನಿಮ್ಮ ಕೆಲಸ ಮತ್ತು ಪ್ರತಿಭೆಗೆ ಅಭಿಮಾನಿಯಾಗಿದ್ದೇವೆ. ನಮ್ಮೆಲ್ಲರಿಗೂ ನೀವು ಸ್ಪೂರ್ತಿಯಾಗಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.

Amitabh Bachchan And Allu Arjun
Pushpa-2: ನೂಕುನುಗ್ಗಲಿನಲ್ಲಿ ಮಹಿಳೆ ಸಾವು; ಕುಟುಂಬಕ್ಕೆ ಅಲ್ಲು ಅರ್ಜುನ್ 25 ಲಕ್ಷ ರೂ ನೆರವು ಘೋಷಣೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com