
ಶರಣ್ ಅಭಿನಯದ ಬಹುನಿರೀಕ್ಷಿತ ಹಾರರ್-ಕಾಮಿಡಿ ಸಿನಿಮಾ ʼಛೂ ಮಂತರ್ʼ ಜನವರಿ 10, 2025 ಕ್ಕೆ ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಹಲವು ವಿಷಯಗಳಿಗಾಗಿ ಸದ್ದು ಮಾಡುತ್ತಿದೆ.
ಹಾರರ್ ಕಾಮಿಡಿ ಚೂಮಂತರ್‌ನೊಂದಿಗೆ ನಟ ಶರಣ್ 2025 ನೇ ವರ್ಷ ಪ್ರಾರಂಭಿಸಲಿದ್ದಾರೆ. ನವನೀತ್ ನಿರ್ದೇಶನದ ಈ ಚಿತ್ರವು ಕಾಮಿಡಿ ಥ್ರಿಲ್ಲರ್ ಆಗಿದೆ. ಹೆಸರಾಂತ ಧ್ವನಿ ವಿನ್ಯಾಸಕ ರೆಸೂಲ್ ಪೂಕುಟ್ಟಿ ಅವರ ಪಾಲ್ಗೊಳ್ಳುವಿಕೆ ಚೂಮಂತರ್ ಸಿನಿಮಾವನ್ನು ಇನ್ನಷ್ಟು ರೋಮಾಂಚನಗೊಳಿಸುತ್ತದೆ. ಇತ್ತೀಚಿನ ಪುಷ್ಪ 2: ದಿ ರೂಲ್ ಸೇರಿದಂತೆ ಬಹು ಭಾಷೆಗಳಲ್ಲಿ ಅವರು ತಮ್ಮ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ, ರೆಸುಲ್ ಸೌಂಡ್ ಡಿಸೈನ್ ಮಾಡುತ್ತಿರುವುದು ಸಿನಿಮಾಗೆ ಸಂಪೂರ್ಣ ಹೊಸ ಮಟ್ಟದ ಮ್ಯಾಜಿಕ್ ತರುತ್ತದೆ. ಇದು ಅವರ ಎರಡನೇ ಕನ್ನಡ ಚಿತ್ರ ಮತ್ತು ನಿರುತ್ತರ ಅವರ ಮೊದಲ ಸಿನಿಮಾವಾಗಿತ್ತು, ಚೂಮಂತರ್ ನಲ್ಲಿ ರೆಸುಲ್ ಪಾಲ್ಗೊಳ್ಳುತ್ತಿರುವುದು ಸಿನಿಮಾವನ್ನು ಮತ್ತಷ್ಚು ಮೇಲ್ದರ್ಜೆಗೇರಿಸುತ್ತದೆ ಎಂದುನಿರ್ದೇಶಕ ನನೀತ್ ತಿಳಿಸಿದ್ದಾರೆ. ಚಿತ್ರದಲ್ಲಿ ಹಾರರ್ ಜೊತೆ ಕಾಮಿಡಿ ಹಾಗೂ ಥ್ರಿಲ್ಲರ್ ಕೂಡ ಇದೆ'' ಎಂದಿದ್ದಾರೆ 'ಕರ್ವ' ಖ್ಯಾತಿಯ ನಿರ್ದೇಶಕ ನವನೀತ್.
ಚಿತ್ರದ ಮತ್ತೊಂದು ಹೈಲೈಟ್ ಎಂದರೆ 50 ನಿಮಿಷಗಳ ಕಾಲ ಅತ್ಯಾಧುನಿಕ ವಿಎಫ್‌ಎಕ್ಸ್ ಬಳಸಿರುವುದು, ಇದು ಕಣ್ಣಿಗೆ ದೃಶ್ಯ ಮತ್ತು ಸಂವೇದನಾಶೀಲ ಹಬ್ಬದ ವಾತಾವರಣ ಸೃಷ್ಟಿಸುತ್ತದೆ. ತರುಣ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಮಾನಸ ತರುಣ್ ಮತ್ತು ತರುಣ್ ಶಿವಪ್ಪ ನಿರ್ಮಿಸಿರುವ ಚೂಮಂತರ ಎರಡು ಹಾಡುಗಳಿಗೆ ಅವಿನಾಶ್ ಬಸುತ್ಕರ್ ಸಂಗೀತ ಸಂಯೋಜಿಸಿದ್ದು, ಚಂದನ್ ಶೆಟ್ಟಿ ಇಂಟ್ರೊಡಕ್ಷನ್ ಸಾಂಗ್ ಕಂಪೋಸ್ ಮಾಡಿದ್ದಾರೆ. ಅನುಪ್ ಕಟ್ಟುಕರನ್ ಛಾಯಾಗ್ರಹಣ ಮತ್ತು ವೆಂಕಿ ಯುಡಿವಿ ಸಂಕಲನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಶರಣ್, ಚಿಕ್ಕಣ್ಣ, ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್ ಮುಂತಾದವರಿದ್ದಾರೆ.
Advertisement