
ದೀರ್ಘಾವಧಿಯ ವಿಳಂಬದ ಬಳಿಕ ಕೊನೆಗೂ ಸಂಜು ವೆಡ್ಸ್ ಗೀತಾ 2 ಸಿನಿಮಾ ಬಿಡುಗಡೆಯ ದಿನಾಂಕ ನಿಗದಿಯಾಗಿದೆ.
ಸಂಜು ವೆಡ್ಸ್ ಗೀತಾ 2 ಸಿನಿಮಾವನ್ನು ನಾಗಶೇಖರ್ ನಿರ್ದೇಶಿಸಿದ್ದು, 2011 ರಲ್ಲಿ ಬಿಡುಗಡೆಯಾದ ಸಂಜು ವೆಡ್ಸ್ ಗೀತಾ ಸಿನಿಮಾದ ಸೀಕ್ವೆಲ್ ಇದಾಗಿದೆ.
ಶ್ರೀನಗರ ಕಿಟ್ಟಿ ನಾಯಕ ನಟನಾಗಿದ್ದರೆ, ಸೀಕ್ವೆಲ್ ಸಿನಿಮಾದಲ್ಲಿ ರಚಿತಾರಾಮ್ ನಾಯಕಿಯಾಗಿದ್ದಾರೆ. ಶರಣ್, ಅದಿತಿ ಪ್ರಭುದೇವ ಮತ್ತು ಮೇಘನಾ ಗಾಂವ್ಕರ್ ನಟಿಸಿದ ಕನ್ನಡದ ಹಾರರ್ ಎಂಟರ್ಟೈನರ್ ಚೂಮಂತರ್ ಸೇರಿದಂತೆ ಇತರ ಪ್ರಮುಖ ಸಿನಿಮಾಗಳ ಜೊತೆಗೆ ಸಂಜು ವೆಡ್ಸ್ ಗೀತಾ 2 ಸಿನಿಮಾ ಬಿಡುಗಡೆಯಾಗುತ್ತಿದೆ. ರಾಮ್ ಚರಣ್ ಅವರ ಗೇಮ್ ಚೇಂಜರ್ ಮತ್ತು ಇತರ ಕೆಲವು ಚಿತ್ರಗಳು ಸಹ ಅದೇ ಸಮಯದಲ್ಲಿ ತೆರೆಗೆ ಬರಲು ಸಿದ್ಧವಾಗಿವೆ.
ಸಂಜು ವೆಡ್ಸ್ ಗೀತಾ ಸಿನಿಮಾ ಕುರಿತ ನಿರೀಕ್ಷೆ ಹೆಚ್ಚಾಗಿದ್ದು, ಫ್ರ್ಯಾಂಚೈಸ್‌ಗೆ ಹೊಸ ಗುರುತನ್ನು ತಂದುಕೊಟ್ಟಿದ್ದಾರೆ. ಚಿತ್ರದ ಪ್ರಮುಖ ಭಾಗಗಳನ್ನು ಸ್ವಿಟ್ಜರ್ಲೆಂಡ್‌ನ ಸುಂದರವಾದ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಭವ್ಯತೆ ಮತ್ತು ಭಾವನಾತ್ಮಕ ಆಳವನ್ನು ಸಂಯೋಜಿಸುವ ಚಿತ್ರವನ್ನು ಚಲಪತಿ ಕುಮಾರ್ ಅವರು ನಾಗಶೇಖರ್ ಮೂವೀಸ್, ಪವಿತ್ರಾ ಇಂಟರ್ನ್ಯಾಷನಲ್ ಮೂವೀಸ್ ಮತ್ತು ಮಹಾನಂದಿ ಕ್ರಿಯೇಷನ್ಸ್ ಸಹಯೋಗದೊಂದಿಗೆ ನಿರ್ಮಿಸಿದ್ದಾರೆ.
ತಾರಾಗಣದಲ್ಲಿ ಸಾಧು ಕೋಕಿಲ ಮತ್ತು ರಂಗಾಯಣ ರಘು ಅವರು ಗಮನಾರ್ಹ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಗಿಣಿ ದ್ವಿವೇದಿ ವಿಶೇಷ ಹಾಡಿನೊಂದಿಗೆ ಗ್ಲಾಮರ್ ನ್ನು ಸೇರಿಸಿದ್ದಾರೆ. ಆರ್ ಶ್ರೀಧರ್ ಮತ್ತು ವಿ ಸಂಭ್ರಮ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಚಿತ್ರ ಜನವರಿ 10 ರಂದು ಬಿಡುಗಡೆಯಾಗಲಿದೆ.
Advertisement