
ಅಣ್ಣಯ್ಯ ಧಾರಾವಾಹಿ ಮೂಲಕ ಗುರುತಿಸಿಕೊಂಡಿರುವ ವಿಕಾಶ್ ಉತ್ತಯ್ಯ ನಾಯಕನಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ‘ಅಪಾಯವಿದೆ ಎಚ್ಚರಿಕೆ’ ಸಿನಿಮಾ ಮೂಲಕ ಪದಾರ್ಪಣೆ ಮಾಡುತ್ತಿದ್ದಾರೆ.
ಈ ಸಿನಿಮಾವನ್ನು ವಿ.ಜಿ.ಮಂಜುನಾಥ್ ಹಾಗೂ ಪೂರ್ಣಿಮಾ ಎಂ.ಗೌಡ ನಿರ್ಮಾಣ ಮಾಡಿದ್ದಾರೆ. ಇತ್ತೀಚಿಗೆ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಯಿತು. ಚಿತ್ರದ ನಿರೂಪಣೆಯು ಪ್ರಕೃತಿಯ ಐದು ಅಂಶಗಳ ಸುತ್ತ ಕೇಂದ್ರೀಕೃತವಾಗಿದೆ ಎಂದು ಪೋಸ್ಟರ್ ಸೂಚಿಸಿದೆ, ಭೂಮಿ, ಗಾಳಿ, ನೀರು, ಬೆಂಕಿ ಮತ್ತು ಆಕಾಶದ ಸುತ್ತುತ್ತದೆ. ಚಿತ್ರರಂಗಕ್ಕೂ ನನಗೂ ಹತ್ತು ವರ್ಷಗಳ ನಂಟು. ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇರುವ ನಾನು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗುತ್ತಿದ್ದೇನೆ. ಪಂಚಭೂತಗಳ ಆಧಾರದ ಮೇಲೆ ಈ ಚಿತ್ರದ ಕಥೆ ಹೆಣೆಯಲಾಗಿದೆ. ವಿಕಾಶ್ ಉತ್ತಯ್ಯ ‘ಸೂರಿ’ ಎಂಬ ಪಾತ್ರದಲ್ಲಿ, ರಾಘವ್ ಕೊಡಚಾದ್ರಿ ಹಾಗೂ ಮಿಥುನ್ ತೀರ್ಥಹಳ್ಳಿ ವಿಕಾಶ್ ಅವರ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಸಸ್ಪೆನ್ ಅಡ್ವೆಂಚರ್ ಹಾರಾರ್ ಜಾನಾರ್‌ನಲ್ಲಿ ಈ ಚಿತ್ರವಿದೆ’ ಎಂದು ಅಭಿಜಿತ್ ತೀರ್ಥಹಳ್ಳಿ ಹೇಳಿದ್ದಾರೆ.
ಕೃಷಿಯಂತೆ ಸಿನಿಮಾವು ಸಮರ್ಪಣೆಯನ್ನು ಬಯಸುತ್ತದೆ. ಇದು ನಿರ್ದೇಶಕ ಅಭಿಜಿತ್ ಅವರ ಬಹುಕಾಲದ ಕನಸಾಗಿದ್ದು, ಅದನ್ನು ನೋಡಿ ನಾನು ಥ್ರಿಲ್ ಆಗಿದ್ದೇನೆ. ಚಿತ್ರದಲ್ಲಿ ನಾನು ಸೂರಿ ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತೇನೆ ಎಂದು ವಿಕಾಶ್ ಉತಯ್ಯ ತಿಳಿಸಿದ್ದಾರೆ. ಈ ಹಿಂದೆ ಕದ್ದು ಮುಚ್ಚಿ ಚಿತ್ರದಲ್ಲಿ ಸಹಕರಿಸಿದ್ದ ನಿರ್ಮಾಪಕರಾದ ವಿಜಿ ಮಂಜುನಾಥ್ ಮತ್ತು ಪೂರ್ಣಿಮಾ ಎಂ ಗೌಡ ಈ ಯೋಜನೆಗಾಗಿ ಮತ್ತೆ ಕೈಜೋಡಿಸಿದ್ದಾರೆ. ಸುನಾದ್ ಗೌತಮ್ ಛಾಯಾಗ್ರಹಣ ಮತ್ತು ಸಂಗೀತ ಸಂಯೋಜನೆ ಎರಡನ್ನೂ ನಿರ್ವಹಿಸಿದ್ದಾರೆ. ಆನಂದ್ ಆಡಿಯೊ ಸಂಗೀತ ಹಕ್ಕುಗಳನ್ನು ಪಡೆದುಕೊಂಡಿದೆ, ಹರ್ಷಿತ್ ಪ್ರಭು ಸಂಕಲನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅಪಾಯವಿದೆ ಎಚ್ಚರಿಕೆ ಸಿನಿಮಾ 2023ರ ಜನವರಿಯಲ್ಲಿ ರಿಲೀಸ್ ಆಗಲಿದೆ.
Advertisement