'ಮಾರಿಗೋಲ್ಡ್' ಸಿನಿಮಾದಲ್ಲಿ ಹೊಸ ಅವತಾರದಲ್ಲಿ ದೂದ್ ಪೇಡ ದಿಗಂತ್!

ದೂದ್ ಪೇಡ ದಿಗಂತ್ ನಟಿಸಿರುವ ಮಾರಿಗೋಲ್ಡ್ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿದ್ದು, ಇತ್ತೀಚೆಗೆ ಟೀಸರ್  ಅನಾವರಣಗೊಂಡಿದೆ. ಮಾರಿಗೋಲ್ಡ್ ಸಿನಿಮಾವೂ ಆ್ಯಕ್ಷನ್-ಪ್ಯಾಕ್ಡ್ ಸಸ್ಪೆನ್ಸ್ ಥ್ರಿಲ್ಲರ್‌ ಸಿನಿಮಾವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 10ರ ಎರಡನೇ ರನ್ನರ್ ಅಪ್ ಸಂಗೀತಾ ಶೃಂಗೇರಿ ನಾಯಕಿಯಾಗಿ ನಟಿಸಿದ್ದಾರೆ.
ಸಂಗೀತಾ ಶೃಂಗೇರಿ ಮತ್ತು ದಿಗಂತ್
ಸಂಗೀತಾ ಶೃಂಗೇರಿ ಮತ್ತು ದಿಗಂತ್
Updated on

ದೂದ್ ಪೇಡ ದಿಗಂತ್ ನಟಿಸಿರುವ ಮಾರಿಗೋಲ್ಡ್ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿದ್ದು, ಇತ್ತೀಚೆಗೆ ಟೀಸರ್  ಅನಾವರಣಗೊಂಡಿದೆ. ಮಾರಿಗೋಲ್ಡ್ ಸಿನಿಮಾವೂ ಆ್ಯಕ್ಷನ್-ಪ್ಯಾಕ್ಡ್ ಸಸ್ಪೆನ್ಸ್ ಥ್ರಿಲ್ಲರ್‌ ಸಿನಿಮಾವಾಗಿದೆ.  ಬಿಗ್ ಬಾಸ್ ಕನ್ನಡ ಸೀಸನ್ 10 ರ ಎರಡನೇ ರನ್ನರ್ ಅಪ್ ಸಂಗೀತಾ ಶೃಂಗೇರಿ ನಾಯಕಿಯಾಗಿ ನಟಿಸಿದ್ದಾರೆ.

ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ಮಾಪಕ ರಘುವರ್ಧನ್,  ನಾನು ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದರೂ, ಆರ್‌ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ‌ ರಘುವರ್ಧನ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

'ಗೋಲ್ಡ್ ಬಿಸ್ಕೇಟ್ ಮಾರಲು ಹೋಗುವ ನಾಲ್ಕು ಜನರ ಕಥೆ ಈ ಸಿನಿಮಾದಲ್ಲಿದೆ. ನಾನು ಯಾವುದೇ ಸಂದೇಶ ಹೇಳುತ್ತಿಲ್ಲ. ಬರೀ ಮನರಂಜನೆ ಇಲ್ಲಿ ಮುಖ್ಯವಾಗಿರುತ್ತದೆ. ಕೋವಿಡ್ ಕಾರಣದಿಂದ ಸಿನಿಮಾ ಬಿಡುಗಡೆ ತಡವಾಯಿತು. ಈಗ ನಮ್ಮ ಸಿನಿಮಾವು ಬಿಡುಗಡೆಗೆ ರೆಡಿಯಾಗಿದೆ. ಇಲ್ಲಿ ದಿಗಂತ್ ಅವರನ್ನು ಬೇರೆ ರೀತಿ ತೋರಿಸುವ ಪ್ರಯತ್ನ ಮಾಡಲಾಗಿದೆ‌. ಅದಕ್ಕಾಗಿ ಚಿತ್ರೀಕರಣಕ್ಕೂ ಮುನ್ನ ದಿಗಂತ್ ಅವರು ರಿಹರ್ಸಲ್ ಮಾಡಿದ್ದರು' ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ರಾಘವೇಂದ್ರ ಎಂ ನಾಯ್ಕ್. ಬೆಂಗಳೂರು ಮತ್ತು ಸಕಲೇಶಪುರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.

ಗುಣವಂತ ಸೇರಿ ಹಲವು ಚಿತ್ರ ನಿರ್ದೇಶನ ಮಾಡಿದ್ದೇನೆ. ರಾಘವೇಂದ್ರ ನಾಯ್ಕ್ ಹೇಳಿದ ಕಥೆ ಇಷ್ಟವಾಯಿತು. ನಾನು ನಿರ್ಮಾಣ ಮಾಡುತ್ತೇನೆ. ನೀವೇ ನಿರ್ದೇಶನ ಮಾಡಿ ಎಂದು ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಚಿತ್ರ ಅಂದುಕೊಂಡದ್ದಕ್ಕಿಂತ ಚೆನ್ನಾಗಿ ಮೂಡಿ ಬಂದಿದೆ. ನಾಯಕ ದಿಗಂತ್, ನಾಯಕಿ ಸಂಗೀತ ಸಹಕಾರ ಅದ್ಬುವಾಗಿತ್ತು. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಎರಡನೇ ಅಥವಾ ಮೂರನೇ ವಾರ ಚಿತ್ರ ತೆರೆಗೆ ತರುವ ಉದ್ದೇಶವಿದೆ ಸಹಕಾರವಿರಲಿ ಎಂದರು. ಚಿತ್ರದ ಛಾಯಾಗ್ರಹಣವನ್ನು ಚಂದ್ರಶೇಖರ್ ನಿರ್ವಹಿಸಿದ್ದಾರೆ ಮತ್ತು ವೀರ್ ಸಮರ್ಥ್ ಅವರ ಸಂಗೀತವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com