ರಂಗಾಯಣ ರಘು ನಟನೆಯ 'ಶಾಖಾಹಾರಿ' ರಿಲೀಸ್ ಡೇಟ್ ಫಿಕ್ಸ್!

ಶಿವಮೊಗ್ಗದ ತೀರ್ಥಹಳ್ಳಿಯ ಹಳ್ಳಿಯೊಂದರಲ್ಲಿ ನಡೆಯುವ ಈ ಚಿತ್ರವು ಮಲೆನಾಡಿನ ನಿಗೂಢ ಘಟನೆಗಳ ಸುತ್ತ ಸುತ್ತುತ್ತದೆ. ರಘು ಅಡುಗೆಯ ಪಾತ್ರದಲ್ಲಿ, ಗೋಪಾಲಕೃಷ್ಣ ದೇಶಪಾಂಡೆ ಪೊಲೀಸ್ ಅಧಿಕಾರಿಯಾಗಿ ಮತ್ತು ಸುಜಯ್ ಶಾಸ್ತ್ರಿ ಪ್ರಮುಖ ಪಾತ್ರದಲ್ಲಿದ್ದಾರೆ.
ಶಾಖಾಹಾರಿ ಸಿನಿಮಾ ಸ್ಟಿಲ್
ಶಾಖಾಹಾರಿ ಸಿನಿಮಾ ಸ್ಟಿಲ್
Updated on

ರಂಗಾಯಣ ರಘು (Rangayana Raghu) ಅವರು ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ದಶಕಗಳಿಂದ ಹೆಸರುವಾಸಿಯಾಗಿದ್ದಾರೆ, ಅಭಿನಯಸುರ (ನಟನೆಯ ಮಾಸ್ಟರ್) ಎಂಬ ಬಿರುದನ್ನು ಗಳಿಸಿದ್ದಾರೆ. ಫೆಬ್ರವರಿ 16 ರಂದು ಬಿಡುಗಡೆಯಾಗಲಿರುವ ಅವರ ಮುಂಬರುವ ಚಿತ್ರ ಶಾಖಾಹಾರಿಯ (Shakhahari) ಪ್ರೀ-ರಿಲೀಸ್ ಸಮಾರಂಭದಲ್ಲಿ  ಈ ಗೌರವ ನೀಡಲಾಯಿತು.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ನಿರ್ದೇಶಕ ಸುಕ್ಕ ಸೂರಿ ವಿಶೇಷ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಸಾಥ್ ಕೊಟ್ಟರು. ಇದೇ ವೇಳೆ ರಂಗಾಯಣ ರಘು ಅವರಿಗೆ ಶಾಖಾಹಾರಿ ಸಿನಿ ಬಳಗ ಅಭಿನಯಾಸುರ ಎಂಬ ಬಿರುದು ನೀಡಿ ಗೌರವಿಸಿತು. ಇಲ್ಲಿವರೆಗೂ ಯಾವುದೇ ಚಿತ್ರತಂಡ ಅವರಿಗೆ ಈ ರೀತಿ ಬಿರುದು ಕೊಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ ಅವರ ಕಲಾಸೇವೆಗೆ ಚಿತ್ರತಂಡ ಈ ರೀತಿ ಗೌರವ ಸೂಚಿಸಿದೆ.

ನಾನು ಈ ರೀತಿ ಮೈಕ್ ಹಿಡಿದು ಮಾತನಾಡುತ್ತಿದ್ದೇನೆ. ನನ್ನ ನಿರ್ದೇಶಕ ಅಂತಾ ಕರೆಯುತ್ತಾರೆ ಎಂದರೆ. ಈ ಹಿಂದೆ ನಾವು ಯೋಗರಾಜ್ ಭಟ್‌ ಅವರ ಮಣಿ ಸಿನಿಮಾ ಮಾಡಬೇಕಾದರೆ ರಘು ಸರ್ ಸಿಕ್ಕಿದರು. ನಮಗೆ ಅಲ್ಲಿಂದ ದೊಡ್ಮನೆ ಹುಡುಗ ಸಿನಿಮಾದವರೆಗೂ ಜೊತೆಯಲಿ ಇದ್ದರು. ನಾನು ಒಂದು ವಿಷಯ ತೆಗೆದುಕೊಂಡು ಹೋದರೆ ಅದಕ್ಕೊಂದು ಹಿನ್ನೆಲೆ ಹೇಳಿ ಗಟ್ಟಿ ಮಾಡುತ್ತಾರೆ. ನಾನು ಇಂದು ಏನಾದ್ರೂ ಮಾಡಿದ್ದೇನೆ ಎಂದರೆ ಅದರಲ್ಲಿ ರಘು ಸರ್ ಅವರ ದೊಡ್ಡ ಪಾಲಿದೆ. ನಮ್ಮ ಬರವಣಿಗೆಗೆ ಕಲಾವಿದ ಜೀವ ತುಂಬಬೇಕು. ನನಗೆ ಅನಿಸುತ್ತದೆ ನಾವು ರಂಗಾಯಣ ರಘು ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೇನೋ ಅನಿಸುತ್ತೆ ಎಂದು ಸೂರಿ ಹೇಳಿದ್ದಾರೆ.

ಜೀವನದಲ್ಲಿ ನನಗೆ ತುಂಬಾ ಅಮೂಲ್ಯ ನೆನಪು ಕೊಟ್ಟಂಥವರು ಸೂರಿ ಅವರು ಹಾಗೂ ಅಶ್ವಿನಿ ಮೇಡಂ. ನಾನು ಇಂಡಸ್ಟ್ರೀಗೆ ಬಂದು ಸುಮಾರು 35 ವರ್ಷವಾಯ್ತು. 1994 ರಿಂದ 2001ರವೆಗೆ ನಾನು ಮಾಡಿದ ಸಿನಿಮಾಗಳ ಬಗ್ಗೆ ಊರಲ್ಲೆಲ್ಲಾ ಹಾಗೆ ಹೀಗೆ ಎಂದೆಲ್ಲ ಹೇಳಿಕೊಂಡು ಬರುತ್ತಿದ್ದೆ. ರಂಗಾಯಣದ ಬಗ್ಗೆ ನಾನು ಎಷ್ಟು ನೆನಪು ಮಾಡಿಕೊಂಡರೆ ಕಡಿಮೆ. ನಾನು ಈವರೆಗೂ 350 ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದರಲ್ಲೂ ಅಪ್ಪು ಅವರ ಋಣ ಜಾಸ್ತಿ ಇದೆ, ಮೇಡಂ ಬಂದಿರುವುದು ಅಷ್ಟೇ ಖುಷಿಯಾಗುತ್ತಿದೆ. ನಮಗೆ ದೊಡ್ಮನೆಯಿಂದ ದೊಡ್ಡ ಆಶೀರ್ವಾದ ಸಿಕ್ಕಿದೆ ಎಂದು ಹೇಳಿದರು.

ಶಿವಮೊಗ್ಗದ ತೀರ್ಥಹಳ್ಳಿಯ ಹಳ್ಳಿಯೊಂದರಲ್ಲಿ ನಡೆಯುವ ಈ ಚಿತ್ರವು ಮಲೆನಾಡಿನ ನಿಗೂಢ ಘಟನೆಗಳ ಸುತ್ತ ಸುತ್ತುತ್ತದೆ. ರಘು ಅಡುಗೆಯ ಪಾತ್ರದಲ್ಲಿ, ಗೋಪಾಲಕೃಷ್ಣ ದೇಶಪಾಂಡೆ ಪೊಲೀಸ್ ಅಧಿಕಾರಿಯಾಗಿ ಮತ್ತು ಸುಜಯ್ ಶಾಸ್ತ್ರಿ ಪ್ರಮುಖ ಪಾತ್ರದಲ್ಲಿದ್ದಾರೆ.

ರಂಗಾಯಣ ರಘು ಅಡುಗೆ ಭಟ್ಟನಾಗಿ, ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಹಾಗೇ ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಸಿನಿಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com