'ಡೆವಿಲ್-ದಿ ಹೀರೋ' ಚಿತ್ರೀಕರಣಕ್ಕೂ ಮುನ್ನವೇ ಭರ್ಜರಿ ಬೆಲೆಗೆ ಚಿತ್ರದ ಆಡಿಯೋ ಹಕ್ಕು ಮಾರಾಟ!

ಕಾಟೇರ ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಚಿತ್ರ ಡೆವಿಲ್-ದಿ ಹೀರೋ ಈಗಾಗಲೇ ಭಾರಿ ಸದ್ದು ಮಾಡುತ್ತಿದೆ. ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರದ ಘೋಷಣೆಯಾದಾಗಿನಿಂದ ಸಖತ್ ಸೌಂಡ್ ಮಾಡುತ್ತಿದೆ.
ಡೆವಿಲ್ ದಿ ಹೀರೋ ಫೋಸ್ಟರ್
ಡೆವಿಲ್ ದಿ ಹೀರೋ ಫೋಸ್ಟರ್

ಕಾಟೇರ ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಚಿತ್ರ ಡೆವಿಲ್-ದಿ ಹೀರೋ ಈಗಾಗಲೇ ಭಾರಿ ಸದ್ದು ಮಾಡುತ್ತಿದೆ. ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರದ ಘೋಷಣೆಯಾದಾಗಿನಿಂದ ಸಖತ್ ಸೌಂಡ್ ಮಾಡುತ್ತಿದೆ.

ಇತ್ತೀಚಿನ ವರದಿ ಪ್ರಕಾರ, ಇನ್ನೂ ಚಿತ್ರೀಕರಣ ಶುರುವಾಗದಿದ್ದರೂ ಈಗಾಗಲೇ ಚಿತ್ರದ ಆಡಿಯೊ ಹಕ್ಕುಗಳನ್ನು ಜನಪ್ರಿಯ ಸರಿಗಮ - ಸೌತ್‌ಗೆ ಭಾರಿ ಬೆಲೆಗೆ ಮಾರಾಟ ಮಾಡಲಾಗಿದೆ. "ಸರಿಗಮದಂತಹ ಹೆಸರಾಂತ ಮ್ಯೂಸಿಕ್ ಕಂಪನಿ ಚಿತ್ರದ ಹಕ್ಕುಗಳನ್ನು ಖರೀದಿಸಲು ಆಸಕ್ತಿ ತೋರಿಸಿದೆ ಎಂಬುದು ನಮಗೆ ಸಂತೋಷವಾಗಿದೆ. ಸಾಕಷ್ಟು ಬೇಡಿಕೆ ಇತ್ತು. ವಿವಿಧ ಸಂಗೀತ ಕಂಪನಿಗಳಿಂದ ಬೇಡಿಕೆ ಬಂದಿತ್ತು. ಆದರೆ ಅಂತಿಮವಾಗಿ, ಈ ಸಂಗೀತ ಕಂಪನಿಗೆ ಆಡಿಯೋ ಹಕ್ಕು ಮಾರಾಟ ಮಾಡಿರುವುದಾಗಿ ಪ್ರಕಾಶ್ ತಿಳಿಸಿದ್ದಾರೆ.

ಈ ಮಧ್ಯೆ ದರ್ಶನ್ ಅವರ ಹುಟ್ಟುಹಬ್ಬದ ಮುನ್ನಾದಿನದಂದು ಬಿಡುಗಡೆಯಾಗಲಿರುವ ಫಸ್ಟ್ ಲುಕ್ ಟೀಸರ್ ಅನ್ನು ತಯಾರಕರು ಪ್ರತ್ಯೇಕವಾಗಿ ಚಿತ್ರೀಕರಿಸಿದ್ದಾರೆ. ಇದು ವಿಶಿಷ್ಟವಾಗಿದೆ ಮತ್ತು ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಇದಕ್ಕಾಗಿ ಥೀಮ್ ಮ್ಯೂಸಿಕ್ ಸಂಯೋಜಿಸಿದ್ದಾರೆ" ಎಂದು ಪ್ರಕಾಶ್ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರಾಗಿರುವ ನಿರ್ದೇಶಕರು ನಾಯಕ ದರ್ಶನ್ ಹೊರತುಪಡಿಸಿ, ಇನ್ನೂ ನಾಯಕಿ ಮತ್ತು ಉಳಿದ ತಾರಾಗಣವನ್ನು ಅಂತಿಮಗೊಳಿಸಿಲ್ಲ ಎಂದು  ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದ್ದಾರೆ. ಜೈ ಮಠ ಕಂಬೈನ್ಸ್ ಪ್ರಸ್ತುತಪಡಿಸುವ ಮತ್ತು ಜೆ ಜಯಮ್ಮ ಮತ್ತು ಪ್ರಕಾಶ್ ವೀರ್ ಅವರು ತಮ್ಮ ಹೋಮ್ ಬ್ಯಾನರ್‌ನಡಿಯಲ್ಲಿ ವೈಷ್ಣೋ ಸ್ಟುಡಿಯೋಸ್‌ನಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್ ಮತ್ತೊಮ್ಮೆ ದರ್ಶನ್ ಅವರ ಚಿತ್ರಕ್ಕೆ ಕೈಜೋಡಿಸಿದ್ದಾರೆ. ಈ ಹಿಂದೆ ತಾರಕ್ (2017) ಗಾಗಿ ಕೈಜೋಡಿಸಿದ  ನಟ-ನಿರ್ದೇಶಕ ಜೋಡಿಗೆ ಡೆವಿಲ್-ದಿ ಹೀರೋ ಎರಡನೇ ಚಿತ್ರವಾಗಿದೆ.

ದರ್ಶನ್‌ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಕ್ಕಾಗಿ ಗೌರವ: ಹುಟ್ಟುಹಬ್ಬದ ಆಚರಣೆಯನ್ನು ಈಗಾಗಲೇ ಆರಂಭಿಸಿರುವ ಅಭಿಮಾನಿಗಳು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿತ್ರರಂಗದಲ್ಲಿ 25 ವರ್ಷಗಳ ಪಯಣವನ್ನು ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಲೈಟ್ ಬಾಯ್‌ನಿಂದ ಮೇಲೆಳುತ್ತಾ ಬಂದ ದರ್ಶನ್ ಮೆಜೆಸ್ಟಿಕ್‌ನೊಂದಿಗೆ ಮಾಸ್ ಹೀರೋ ಆಗಿ ಬೆಳೆದು ನಿಂತಿದ್ದಾರೆ. ಈ ಅವಧಿಯಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ರಜತ ಮಹೋತ್ಸವ ಆಚರಣೆ  ಡಿ-25, ಫೆಬ್ರವರಿ 17 ರಂದು ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ. ಕನ್ನಡ ಚಿತ್ರರಂಗಕ್ಕೆ ದರ್ಶನ್ ಅವರ ಮಹತ್ವದ ಕೊಡುಗೆಯನ್ನು ಗೌರವಿಸಲು ಇದು ಅವರ ಸಾವಿರಾರು ಅಭಿಮಾನಿಗಳನ್ನು, ಸ್ವತಃ ನಟರೇ ಸೆಲೆಬ್ರಿಟಿಗಳು, ಸ್ನೇಹಿತರು ಮತ್ತು ಇಂಡಸ್ಟ್ರಿಯ ಗೆಳೆಯರ ಜೊತೆಯಲ್ಲಿ ಆಚರಿಸಲಾಗುತ್ತಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com