ಐತಿಹಾಸಿಕ ಚಿತ್ರ 'ಸಿಂಧೂರ ಲಕ್ಷ್ಮಣ'ಗಾಗಿ ಮತ್ತೆ ಒಂದಾದ ದರ್ಶನ್ - ತರುಣ್ ಸುಧೀರ್

ದರ್ಶನ್ ಅವರು ಕಾಂತ್ರಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಬಳಿಕ ಮತ್ತೊಬ್ಬ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣನ ಅವತಾರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲ್ಲಿದ್ದಾರೆ.
ದರ್ಶನ್ - ತರುಣ್ ಸುಧೀರ್
ದರ್ಶನ್ - ತರುಣ್ ಸುಧೀರ್
Updated on

ಕಾಟೇರ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ತರುಣ್ ಸುಧೀರ್ ಅವರು ಈಗ ಐತಿಹಾಸಿಕ ಚಿತ್ರ ‘ಕ್ರಾಂತಿವೀರ ಸಿಂಧೂರ ಲಕ್ಷ್ಮಣ’ಗಾಗಿ ಒಂದಾಗಿದ್ದಾರೆ.

ದರ್ಶನ್ ಅವರು ಕಾಂತ್ರಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಬಳಿಕ ಮತ್ತೊಬ್ಬ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣನ ಅವತಾರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲ್ಲಿದ್ದಾರೆ. ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಸುರೇಶ್ ಬಿ ಅವರು ಈ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಶೈಲಜಾ ನಾಗ್ ಈ ಸಹಯೋಗದ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರೆ, ತರುಣ್ ಸುಧೀರ್ ಅವರು 'ಸಿಂಧೂರ ಲಕ್ಷ್ಮಣ'ನೊಂದಿಗಿನ ಭಾವನಾತ್ಮಕ ಸಂಬಂಧವನ್ನು ಹಂಚಿಕೊಂಡಿದ್ದಾರೆ.

ದರ್ಶನ್ - ತರುಣ್ ಸುಧೀರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ‘ಡೆವಿಲ್‌’ ಟೀಸರ್ ಟ್ರೀಟ್...

ಸಿಂಧೂರ ಲಕ್ಷ್ಮಣ ನಾಟಕವನ್ನು ಜನಪ್ರಿಯಗೊಳಿಸಿದ ನನ್ನ ತಂದೆ, ನಟ, ರಂಗಭೂಮಿ ಕಲಾವಿದ ಸುಧೀರ್ ಅವರು ಕನಿಷ್ಠ 18000 ಪ್ರದರ್ಶನಗಳನ್ನು ನೀಡಿದ್ದಾರೆ ಮತ್ತು ಅದು ಆಗ ದೊಡ್ಡ ಹಿಟ್ ಆಗಿತ್ತು. ಈ ನಾಟಕದ ಕ್ಯಾಸೆಟ್ ಹಾಟ್‌ಕೇಕ್‌ಗಳಂತೆ ಮಾರಾಟವಾಗುತ್ತಿತ್ತು. ಆ ದಿನಗಳಲ್ಲಿ ಇದು ಅಶ್ವಿನಿ ಆಡಿಯೋದಲ್ಲಿ ಅತ್ಯಧಿಕ ಮಾರಾಟವಾಗಿದೆ. ನಾನು ಈ ನಾಟಕವನ್ನು ನೋಡುತ್ತಾ ಬೆಳೆದಿದ್ದೇನೆ ಮತ್ತು ನನ್ನ ತಂದೆ ಅದನ್ನು ಪ್ರದರ್ಶಿಸಿದ ಕೊನೆಯ ದಿನವೂ ನನಗೆ ನೆನಪಿದೆ. ಅದರಲ್ಲಿ ನನ್ನ ತಾಯಿ ಕೂಡ ಪಾತ್ರ ಮಾಡಿದ್ದಾರೆ. ಈ ಶೀರ್ಷಿಕೆಯೊಂದಿಗೆ ಸಾಕಷ್ಟು ಭಾವನಾತ್ಮಕ ಸಂಬಂಧಗಳಿವೆ. ನಾನು ಪ್ರತಿ ಚಿತ್ರವನ್ನು ಸಮಾನವಾಗಿ ಪರಿಗಣಿಸಿದರೂ, ಇದು ವಿಶೇಷ ಮತ್ತು ನನ್ನ ಹೃದಯಕ್ಕೆ ಹತ್ತಿರವಾದ ಚಿತ್ರ ” ಎಂದು ತರೂಣ್ ಹೇಳಿದ್ದಾರೆ.

ಐತಿಹಾಸಿಕ ಪಾತ್ರಗಳಲ್ಲಿ ನಟಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವಾಗಲೂ ಉತ್ಸುಕರಾಗಿದ್ದಾರೆ ಎಂದು ತರುಣ್ ತಿಳಿಸಿದ್ದಾರೆ. "ಅವರಿಗೆ ಸಿಂಧೂರ ಲಕ್ಷ್ಮಣನ ಬಗ್ಗೆ ಸ್ಪಷ್ಟ ಕಲ್ಪನೆ ಇರಲಿಲ್ಲ ಮತ್ತು ನಾನು ಚೌಕ ಚಿತ್ರದ ನಿರ್ದೇಶಕನಾದ ನಂತರ ಅವರು ಆಗಾಗ್ಗೆ ನನ್ನೊಂದಿಗೆ ಈ ಪಾತ್ರದ ಬಗ್ಗೆ ಚರ್ಚಿಸುತ್ತಿದ್ದರು. ನನ್ನ ಸಹೋದರ ನಂದ ಕಿಶೋರ್ ಕೂಡ ಈ ಯೋಜನೆಗಾಗಿ ಅವರನ್ನು ಸಂಪರ್ಕಿಸಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ನಾವು ಅಂತಿಮವಾಗಿ ಈ ಯೋಜನೆಯನ್ನು ಘೋಷಿಸುತ್ತಿರುವುದಕ್ಕೆ ಸಂತೋಷವಾಗಿದೆ” ಎಂದು ತರುಣ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com