'ತಾಕತ್ತಿದ್ದರೆ ಮಾಡಿ ನೋಡೋಣ': ನಟ ದರ್ಶನ್ ಗೆ ನಿರ್ಮಾಪಕ ಉಮಾಪತಿ ಸವಾಲು

‘ಕಾಟೇರ’ (Kaatera) ಸಿನಿಮಾದ ಕತೆ ಮತ್ತು ಟೈಟಲ್ ತಾವು ಮಾಡಿಸಿದ್ದು ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹೇಳಿದ್ದರು.
ನಿರ್ಮಾಪಕ ಉಮಾಪತಿ ಗೌಡ ನಟ ದರ್ಶನ್(ಸಂಗ್ರಹ ಚಿತ್ರ)
ನಿರ್ಮಾಪಕ ಉಮಾಪತಿ ಗೌಡ ನಟ ದರ್ಶನ್(ಸಂಗ್ರಹ ಚಿತ್ರ)

ಬೆಂಗಳೂರು: ಕಳೆದ ವರ್ಷಾಂತ್ಯ ಬಿಡುಗಡೆಯಾಗಿ 50 ದಿನ ಥಿಯೇಟರ್ ನಲ್ಲಿ ಪ್ರದರ್ಶನ ಕಂಡು ಯಶಸ್ಸು ಗಳಿಸಿರುವ ‘ಕಾಟೇರ’ (Kaatera) ಸಿನಿಮಾದ ಕತೆ ಮತ್ತು ಟೈಟಲ್ ತಾವು ಮಾಡಿಸಿದ್ದು ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹೇಳಿಕೆಗೆ ನಿನ್ನೆ ಕಾರ್ಯಕ್ರಮದಲ್ಲಿ ನಟ ದರ್ಶನ್ ನೀಡಿದ್ದ ತಿರುಗೇಟಿನಿಂದ ವಿವಾದ ಹುಟ್ಟಿಕೊಂಡಿತು.

ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿರುದ್ಧ ಗರಂ ಆಗಿದ್ದ ನಟ ದರ್ಶನ್ ಅವರು ಕಾರ್ಯಕ್ರಮದಲ್ಲಿ ನೇರ ವಾಗ್ದಾಳಿ ನಡೆಸಿ 'ಅಯ್ಯೋ ತಗಡೇ ರಾಬರ್ಟ್‌ ಕಥೆ ನಿನಗೆ ಕೊಟ್ಟಿದ್ದು ನಾವು. ಹಾಗಾದರೆ ಇಂಥ ಒಳ್ಳೆ ಕಥೆ ಮತ್ತೆ ಯಾಕ್‌ ಬಿಟ್ಟೆ ನೀನು?' ಕಾಟೇರ ಕಥೆ ಬಿಟ್ಟು ಕೊಟ್ಟಿದ್ದು ಯಾಕೆ? ಅಂತಾನು ನಿರ್ಮಾಪಕ ಉಮಾಪತಿಗೆ ಪ್ರಶ್ನೆ ಮಾಡಿದರು.

ಮಾತು ಮುಂದುವರಿಸಿ ದರ್ಶನ್ 'ಕೊಟ್ಟಿದ್ದು ಮಾಡಿದ್ದನ್ನ ಹೇಳಬಾರದು ಒಂದ್ಸಲ ಆಗಿರೋ ಘಟನೆಯಿಂದ ಬುದ್ದಿ ಕಲಿತಿಲ್ಲ. ಮತ್ತೆ ಮತ್ತೆ ಬಂದು ಯಾಕೆ ಗುಮ್ಮಿಸ್ಕೊಳ್ತಿದ್ದೀಯಾ ಎಂದು ಕೇಳಿದ್ದರು.

ನಿರ್ಮಾಪಕ ಉಮಾಪತಿ ಗೌಡ ನಟ ದರ್ಶನ್(ಸಂಗ್ರಹ ಚಿತ್ರ)
'ಅಯ್ಯೋ ತಗಡೇ... ಕಾಟೇರ ಟೈಟಲ್ ಇಟ್ಟಿದ್ದೇ ನಾನು': ಉಮಾಪತಿ ವಿರುದ್ಧ ನಟ ದರ್ಶನ್ ಗರಂ

ದರ್ಶನ್ ಅವರು ಆಡಿದ ಮಾತು, ಬಳಸಿರುವ ಪದಗಳಿಂದ ಸಿಟ್ಟಾಗಿರುವ ನಿರ್ಮಾಪಕ ಉಮಾಪತಿ ಮಾಧ್ಯಮಗಳ ಮೂಲಕ ನಟ ದರ್ಶನ್ ಗೆ ತಿರುಗೇಟು ನೀಡಿದ್ದಾರೆ. ದರ್ಶನ್ ಅವರು ಯಾಕಪ್ಪಾ ನಮ್ಮ ಹತ್ತಿರ ಗುಮ್ಮಿಸಿಕೊಳ್ತೀಯಾ? ಅಂತಾ ಕೇಳಿದ್ದ ಪ್ರಶ್ನೆ ಉತ್ತರವನ್ನ ನೀಡಿರುವ ಉಮಾಪತಿ, ನಾನು ಕೂಡ ಟೈಂ ಬಂದಾಗ ಗುಮ್ಮಿದ್ದೀನಿ ಎಂದಿದ್ದಾರೆ. ಇವರ ಮನೆ ಉದ್ಧಾರ ಮಾಡಲು ನಮ್ಮ ಮನೆಯ ಹಣ ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ಕಾಸು ಕೊಟ್ಟಿದ್ದು ನಾನೇ: 'ಕಾಟೇರ' ಸಿನಿಮಾ ಕಥೆ ಬಗ್ಗೆಯೂ ಮಾತನಾಡಿದ ನಿರ್ಮಾಪಕ ಉಮಾಪತಿ ಅವರು, ಕಾಟೇರ ಕಥೆ ಬರೆಸಿದ್ದು ನಾನೇ. ಕಾಟೇರ ಕಥೆ ಬರೆಯೋದಕ್ಕೆ ಕಾಸು ಕೊಟ್ಟಿದ್ದೂ ನಾನೆ ಎಂದು ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ಕಾಟೇರ ಚಿತ್ರದ ಮೇಲಿನ ತಮ್ಮ ಹಕ್ಕನ್ನು ಪ್ರತಿಪಾದಿಸಿದ್ದಾರೆ.

ನಾನು ಅವರಷ್ಟು ದೊಡ್ಡ ನಟನಲ್ಲ, ಹಾಗೇ ಅವರಿಗೆ ನಾವು ಉತ್ತರ ಕೊಡುವಷ್ಟು ದೊಡ್ಡವರು ಕೂಡ ಅಲ್ಲ. ನಿಜ ಏನು ಅನ್ನೋದು ನನಗೆ ಗೊತ್ತು. ಅವರ ಹೊಟ್ಟೆ ತುಂಬಿದೆ ಮಾತನಾಡಿದ್ದಾರೆ, ಮಾತನಾಡಲಿ. ಅವರ ಏನೋ ಅಂದರು ಅಂತ ನಾನು ಅನ್ನೋದು ಸರಿಯಲ್ಲ, ಅನ್ನೋಕೆ ನನಗೆ ಎರಡು ನಿಮಿಷ ಸಾಕು. ನಾನು ಸುಮ್ಮನೆ ಬಂದಿರೋನಲ್ಲ, ತಾಕತ್ತಿರೋದಕ್ಕೆ ಇಲ್ಲಿ ನಿಂತಿದ್ದೀನಿ. ಯಾರಿಗೂ ಭಯ ಪಡೋ ಅವಶ್ಯಕತೆ ಇಲ್ಲ. ಸಮಯ-ಸಂದರ್ಭ ನೋಡಿಕೊಂಡೆ ಉತ್ತರ ಕೊಡ್ತೀನಿ. ಗುಮ್ಮೋ ಟೈಂ ಅಲ್ಲಿ ನಾನು ಸರಿಯಾಗಿಯೇ ಗುಮ್ಮಿದ್ದೀನಿ ಅದು ಅವರಿಗೂ ಗೊತ್ತಿದೆ. ಇದೇ ಪದ ಬಳಕೆಯಿಂದ ಮಾಧ್ಯಮಗಳಿಂದ ಬ್ಯಾನ್ ಆಗಿದ್ದರು. ಬ್ಯಾನ್ ಮಾಡಿದರೂ ಪದಬಳಕೆ ಹೇಗೆ ಮಾಡೋದು ಎಂಬುದನ್ನು ಕಲಿಯದೇ ಹೋದರೆ ಹೇಗೆ? ವೇದಿಕೆ ಸಿಕ್ಕಿದೆ ಅಂತ ಏನು ಬೇಕಾದರೂ ಮಾತನಾಡಬಹುದಾ? ಏನ್ ಬೇಕಾದರೂ ಮಾಡಿಬಿಡ್ತೀರಾ? ತಾಕತ್ತಿದ್ದರೆ ಮಾಡಿ ನೋಡೋಣ’ ಎಂದು ಸವಾಲು ಎಸೆದರು ಉಮಾಪತಿ ಶ್ರೀನಿವಾಸ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com