ದೊಡ್ಡ ಮೊತ್ತ ನೀಡಿ ನಟಿಯನ್ನು ರೆಸಾರ್ಟ್ ಗೆ ಕರೆಸಿದ್ದರು: ತ್ರಿಷಾ ಬಗ್ಗೆ AIADMK ಮಾಜಿ ಸದಸ್ಯ ಅವಹೇಳನಕಾರಿ ಹೇಳಿಕೆ

ಎಐಎಡಿಎಂಕೆ ಮಾಜಿ ಸದಸ್ಯ ಎವಿ ರಾಜು ಅವರು ನಟಿ ತ್ರಿಷಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಈ ಕುರಿತು ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕ್ಷಮೆಯಾಚಿಸಿದ್ದಾರೆ.
ನಟಿ ತ್ರಿಷಾ ಕೃಷ್ಣನ್
ನಟಿ ತ್ರಿಷಾ ಕೃಷ್ಣನ್
Updated on: 

ಚೆನ್ನೈ: ಎಐಎಡಿಎಂಕೆ ಮಾಜಿ ಸದಸ್ಯ ಎವಿ ರಾಜು ಅವರು ನಟಿ ತ್ರಿಷಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಈ ಕುರಿತು ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕ್ಷಮೆಯಾಚಿಸಿದ್ದಾರೆ.

ಎವಿ ರಾಜು, ನಿರ್ದೇಶಕ ಚೇರನ್, ನಟ ಕರುಣಾಸ್ ಮತ್ತು ಇತರರಲ್ಲೂ ಕ್ಷಮೆಯಾಚಿಸಿದ್ದಾರೆ. ನಾನು ಅವರ ಭಾವನೆಗಳನ್ನು ನೋಯಿಸಿದ್ದರೆ ಕ್ಷಮಿಸಿ ಎಂದು ಹೇಳಿದರು. ನಿನ್ನೆ ಸಂಜೆ ತ್ರಿಷಾ ವಿರುದ್ಧ ಎವಿ ರಾಜು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸೇಲಂ ಪಶ್ಚಿಮ ಶಾಸಕ ವೆಂಕಟಾಚಲಂ ಅವರಿಂದ ನಟಿ 25 ಲಕ್ಷ ರೂ.ಗಳನ್ನು ಸೆಟ್ಲ್‌ಮೆಂಟ್ ಹಣವಾಗಿ ಪಡೆದಿದ್ದಾರೆ ಎಂದು ಅವರು ಹೇಳಿದ್ದರು. ಇದಾದ ನಂತರ, ಅವರ ಹೇಳಿಕೆ ತಕ್ಷಣವೇ ಟೀಕೆಗೆ ಗುರಿಯಾಯಿತು. ಅಲ್ಲದೆ ನಟಿ ಎವಿ ರಾಜು ವಿರುದ್ಧ ಕಾನೂನು ಕ್ರಮವನ್ನೂ ತೆಗೆದುಕೊಳ್ಳುವುದಾಗಿ ಹೇಳಿದ್ದು ತ್ರಿಷಾ ಬೆಂಬಲಕ್ಕೆ ಹಲವು ತಾರೆಯರು ಕೂಡ ಸಾಥ್ ನೀಡಿದರು.

ತಮಿಳುನಾಡು ಫಿಲಂ ಕೌನ್ಸಿಲ್ ಮುಖ್ಯಸ್ಥ, ನಟ ವಿಶಾಲ್ ಕೂಡ ಎವಿ ರಾಜು ಹೇಳಿಕೆಯನ್ನು ತಪ್ಪು ಎಂದು ಟೀಕಿಸಿದರು. ತ್ರಿಶಾ ಟ್ವಿಟರ್‌ನಲ್ಲಿ, 'ಜನರ ಗಮನವನ್ನು ಸೆಳೆಯಲು ಯಾವುದೇ ಮಟ್ಟಕ್ಕೆ ಬಗ್ಗುವ ಹೀನ ಮತ್ತು ತಿರಸ್ಕಾರದ ಮನುಷ್ಯರನ್ನು ಮತ್ತೆ ಮತ್ತೆ ನೋಡುವುದು ಇನ್ನೂ ಕೆಟ್ಟದಾಗಿದೆ. ಭರವಸೆ ನೀಡಿ, ಅಗತ್ಯವಿದ್ದರೆ ಗಂಭೀರ ಕ್ರಮ ಕೈಗೊಳ್ಳಲಾಗುವುದು. ಇನ್ಮುಂದೆ ಏನು ಹೇಳಬೇಕು, ಮಾಡಬೇಕಾಗಿರುವುದು ನನ್ನ ಕಾನೂನು ವಿಭಾಗದಿಂದಲೇ ಮಾಡುತ್ತೆ ಎಂದಿದ್ದರು.

ನಟಿ ತ್ರಿಷಾ ಕೃಷ್ಣನ್
ತ್ರಿಶಾ ಬಗ್ಗೆ ಅಶ್ಲೀಲ ಹೇಳಿಕೆ: ಕ್ಷಮೆ ಕೇಳಲ್ಲ ಎಂದ ಮನ್ಸೂರ್ ಅಲಿ ಖಾನ್; ಚೆನ್ನೈ ಪೊಲೀಸರಿಂದ ಕೇಸ್ ದಾಖಲು!

ಎಐಎಡಿಎಂಕೆಯ ಮಾಜಿ ನಾಯಕ ನಟಿಗೆ ಸಂಬಂಧಿಸಿದಂತೆ ನೀಡಿರುವ ವಿವಾದಾತ್ಮಕ ಹೇಳಿಕೆಯಿಂದ ಈ ವಿವಾದ ಸೃಷ್ಟಿಯಾಗಿತ್ತು. ತ್ರಿಷಾ ಅವರನ್ನು ಶಾಸಕರ ರೆಸಾರ್ಟ್‌ಗೆ ಕರೆಸಲಾಗಿತ್ತು. ಅದಕ್ಕಾಗಿ ಆಕೆಗೆ ದೊಡ್ಡ ಮೊತ್ತವನ್ನೂ ನೀಡಲಾಗಿದೆ ಎಂದು ಹೇಳಿದ್ದರು. ಈ ಮೂಲಕ ತ್ರಿಷಾ ವಿರುದ್ಧ ಎವಿ ರಾಜು ಗಂಭೀರ ಆರೋಪ ಮಾಡಿದ್ದರು. ಅವರ ಹೇಳಿಕೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕೋಲಾಹಲ ಎದ್ದಿದ್ದು, ಹಲವರು ರಾಜು ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com