ಶಾಂತಂ ಪಾಪಂ ಸೀಸನ್ 6: ಕಿರುತೆರೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಅಂಡರ್ ವಾಟರ್‌ನಲ್ಲಿ ಶೂಟಿಂಗ್!

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಶೋ ಆಗಿರುವ ಈ 'ಶಾಂತಂ ಪಾಪಂ' ಈಗ ಆರನೇ ಸೀಸನ್ ಆರಂಭಿಸಿದೆ. ಫೆ.19ರಿಂದಲೇ 'ಶಾಂತಂ ಪಾಪಂ' ಸೀಸನ್ 6ರ ಸಂಚಿಕೆಗಳು ಪ್ರಸಾರ ಆರಂಭಿಸಿವೆ.
ಶಾಂತಂ ಪಾಪಂ ಸ್ಟಿಲ್
ಶಾಂತಂ ಪಾಪಂ ಸ್ಟಿಲ್

ಬೆಂಗಳೂರು: ನಮ್ಮ ಸಮಾಜದ ಸುತ್ತ ಮುತ್ತ ನಡೆಯುವ ಅಪರಾಧ ಪ್ರಕರಣಗಳ ಬಗ್ಗೆ ನಿತ್ಯ ಟಿವಿಗಳಲ್ಲಿ ಹಾಗೂ ಪೇಪರ್‌ಗಳ ಮೂಲಕ ತಿಳಿದುಕೊಳ್ಳುತ್ತೇವೆ. ಆದರೆ, ಅಪರಾಧ ಕೃತ್ಯಗಳ ನೈಜ ಘಟನೆಗಳನ್ನು ಆಧರಿಸಿ ಧಾರಾವಾಹಿ ಕಥೆಯಂತೆ ಸಿರೀಸ್ ರೂಪದಲ್ಲಿಯೂ ತೋರಿಸಲಾಗುತ್ತದೆ. ಕನ್ನಡದಲ್ಲಿ ಇದೇ ಮಾದರಿಯಲ್ಲಿ 'ಶಾಂತಂ ಪಾಪಂ' ಎಂಬ ಸೀರೀಸ್ ಕೂಡ ಹಲವು ವರ್ಷಗಳಿಂದ ಮೂಡಿ ಬರುತ್ತಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಶಾಂತಂ ಪಾಪಂ' ಕಾರ್ಯಕ್ರಮದ ಮತ್ತೊಂದು ಸೀಸನ್ ಆರಂಭವಾಗಿದೆ. ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಶೋ ಆಗಿರುವ ಈ 'ಶಾಂತಂ ಪಾಪಂ' ಈಗ ಆರನೇ ಸೀಸನ್ ಆರಂಭಿಸಿದೆ. ಫೆ.19ರಿಂದಲೇ 'ಶಾಂತಂ ಪಾಪಂ' ಸೀಸನ್ 6ರ ಸಂಚಿಕೆಗಳು ಪ್ರಸಾರ ಆರಂಭಿಸಿವೆ.

ಶಾಂತಂ ಪಾಪಂ ಇದರಲ್ಲಿ ಅಪರಾಧ ಲೋಕವನ್ನು ವೈಭವೀಕರಿಸದೇ ನೈಜ ಕತೆಗಳನ್ನು ಅನಾವರಣಗೊಳಿಸಲಾಗುತ್ತಿದೆ. ಅಪರಾಧ ಜಗತ್ತಿನ ಹಿಂದಿರುವ ಮನಸ್ಥಿತಿಳಿಂದ ಉಂಟಾಗುವ ಅವಘಡಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಶಾಂತಂ ಪಾಪಂ' ಕಾರ್ಯಕ್ರಮವು ರಾತ್ರಿ 10.30ರಿಂದ 11.30ರ ವರೆಗೆ ಪ್ರಸಾರವಾಗುತ್ತದೆ.

'ಶಾಂತಂ ಪಾಪಂ' ಕಾರ್ಯಕ್ರಮದ ಈ ಸೀಸನ್ ನ ಒಂದು ಎಪಿಸೋಡ್‌ಗಾಗಿ ಅಂಡರ್ ವಾಟರ್‌ನಲ್ಲಿ ಚಿತ್ರೀಕರಣ ಮಾಡಿರುವುದು ವಿಶೇಷ. ಅದಕ್ಕಾಗಿ ಇಡೀ ತಂಡ ನೇತ್ರಾಣಿ ದ್ವೀಪಕ್ಕೆ ಹೋಗಿ ಶೂಟಿಂಗ್ ಮಾಡಿಕೊಂಡು ಬಂದಿದೆ.

ಶಾಂತಂ ಪಾಪಂ ಸೀಸನ್ 6
ಶಾಂತಂ ಪಾಪಂ ಸೀಸನ್ 6

ಕಿರುತೆರೆ ಕಾರ್ಯಕ್ರಮವೊಂದಕ್ಕಾಗಿ ಅಂಡರ್ ವಾಟರ್‌ನಲ್ಲಿ ಶೂಟಿಂಗ್ ಮಾಡುವ ಸಾಹಸವನ್ನು ಬಹುಶಃ ಕನ್ನಡದಲ್ಲಿ ಯಾರೂ ಮಾಡಿರಲಿಲ್ಲ. ಆದರೆ 'ಶಾಂತಂ ಪಾಪಂ' ತಂಡ ಅಂಥದ್ದೊಂದು ಪ್ರಯತ್ನ ಮಾಡಿದೆ. 'ಶಾಂತಂ ಪಾಪಂ' ಸೀಸನ್ 6ರ 'ಸ್ಕೂಬಾ ದಿಲ್‌ರೂಬಾ' ಎಂಬ ಸಂಚಿಕೆಗಾಗಿ ಸ್ಕೂಬಾ ಡೈವ್ ಸೀನ್‌ಗಳನ್ನು ತಂಡ ಚಿತ್ರೀಕರಿಸಿದೆ. ಈ ಸಂಚಿಕೆಯ ಮುಖ್ಯಪಾತ್ರಧಾರಿ ಸ್ಕೂಬಾ ಡೈವ್ ಕಲಿಸುವ ಟೀಚರ್ ಆಗಿದ್ದು, ಆತನೊಂದಿಗೆ ಸ್ಕೂಬಾ ಡೈವ್ ಕಲಿಯುವ ವಿದ್ಯಾರ್ಥಿನಿ ಪ್ರೀತಿಯಲ್ಲಿ ಬೀಳುತ್ತಾಳೆ.

ಅದಕ್ಕಾಗಿ ಅವರಿಬ್ಬರ ನಡುವಿನ ಪ್ರೇಮ ನಿವೇದನೆಯ ದೃಶ್ಯಗಳನ್ನು ಅಂಡರ್ ವಾಟರ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ಅದಕ್ಕಾಗಿ 'ಶಾಂತಂ ಪಾಪಂ' ತಂಡವು ಬೆಂಗಳೂರಿನಿಂದ ಮುರುಡೇಶ್ವರದ ನೇತ್ರಾಣಿ ದ್ವೀಪಕ್ಕೆ ಹೋಗಿ ಶೂಟಿಂಗ್ ಮಾಡಿದೆ. ಫೆ.26ರ ಸೋಮವಾರದ ಸಂಚಿಕೆಯಲ್ಲಿ ಅಂಡರ್ ವಾಟರ್ ದೃಶ್ಯಗಳಿರುವ ಸಂಚಿಕೆ ಪ್ರಸಾರವಾಗಲಿದೆ.

ಶಾಂತಂ ಪಾಪಂ ಸ್ಟಿಲ್
'ನಿದ್ರಾದೇವಿ ನೆಕ್ಸ್ಟ್ ಡೋರ್' ನಿರ್ದೇಶನದ ಮೂಲಕ ಸ್ಯಾಂಡಲ್‌ವುಡ್‌ಗೆ ಸುರಾಗ್ ಸಾಗರ್ ಪದಾರ್ಪಣೆ

ನೇತ್ರಾಣಿಯಲ್ಲಿ ಅಂಡರ್ ವಾಟರ್ ಸ್ಕೂಬಾ ಡೈವಿಂಗ್ ದೃಶ್ಯಗಳನ್ನು ಚಿತ್ರೀಕರಣ ಮಾಡುವುದಕ್ಕಾಗಿಯೇ ಮುಂಬೈನಿಂದ ಅತ್ಯಾಧುನಿಕ ಕ್ಯಾಮೆರಾಗಳನ್ನು ತರಿಸಲಾಗಿತ್ತು. ಜೊತೆಗೆ 7-8 ಹೆಲಿಕ್ಯಾಮ್‌ಗಳನ್ನು ಕೂಡ ತಂಡ ಬಳಸಿದೆ. ಈ ಸೀನ್‌ಗಳಲ್ಲಿ ನಟಿಸಿರುವ ಇಬ್ಬರು ಕಲಾವಿದರು ಕೇವಲ ಈಜು ಕಲಿತಿದ್ದಾರೆ ವಿನಃ ಅವರಿಗೆ ಸಮುದ್ರದಲ್ಲಿ ಈಜಿ ಅಭ್ಯಾಸವಿಲ್ಲ.

ಜೊತೆಗೆ ಸ್ಕೂಬಾ ಡೈವ್ ಕೂಡ ತಿಳಿದಿರಲಿಲ್ಲ. ಆದರೂ ಅವರ ಬದಲಿಗೆ ಡ್ಯೂಪ್ ಬಳಸದೇ, ರಿಯಲ್ ಕಲಾವಿದರನ್ನು ಇಟ್ಟುಕೊಂಡೇ ಚಿತ್ರೀಕರಣ ಮಾಡಲಾಗಿದೆ. ಅದಕ್ಕಾಗಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೂಡ ತಂಡ ತೆಗೆದುಕೊಂಡಿದ್ದು ಸುಮಾರು 10 ಗಂಟೆಗಳ ಚಿತ್ರೀಕರಣ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com