ಹೊಸ ರೂಪದಲ್ಲಿ ಬರಲಿದೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ಘಟಶ್ರಾದ್ಧ!

ಕನ್ನಡ ಚಲನಚಿತ್ರರಂಗದ ಅತ್ಯಮೂಲ್ಯ ಚಿತ್ರಗಳ ಪೈಕಿ ಒಂದೆಂದು ಗುರುತಿಸಿಕೊಂಡಿರುವ ಗಿರೀಶ್‌ ಕಾಸರವಳ್ಳಿ ಅವರ ಘಟಶ್ರಾದ್ಧ ಚಿತ್ರ ಶೀಘ್ರದಲ್ಲಿ ಪುನಶ್ಚೇತನಗೊಂಡು ಸಹೃದಯ ಪ್ರೇಕ್ಷಕರನ್ನು ತಲುಪಲಿದೆ.
ಘಟಶ್ರಾದ್ಧ ಸಿನಿಮಾ ಸ್ಟಿಲ್
ಘಟಶ್ರಾದ್ಧ ಸಿನಿಮಾ ಸ್ಟಿಲ್

ಬೆಂಗಳೂರು: ಕನ್ನಡ ಚಲನಚಿತ್ರರಂಗದ ಅತ್ಯಮೂಲ್ಯ ಚಿತ್ರಗಳ ಪೈಕಿ ಒಂದೆಂದು ಗುರುತಿಸಿಕೊಂಡಿರುವ ಗಿರೀಶ್‌ ಕಾಸರವಳ್ಳಿ ಅವರ ಘಟಶ್ರಾದ್ಧ ಚಿತ್ರ ಶೀಘ್ರದಲ್ಲಿ ಪುನಶ್ಚೇತನಗೊಂಡು ಸಹೃದಯ ಪ್ರೇಕ್ಷಕರನ್ನು ತಲುಪಲಿದೆ.

ಹಾಲಿವುಡ್‌ನ ಖ್ಯಾತ ನಿರ್ದೇಶಕ ಹಾಗೂ ಚಲನಚಿತ್ರ ಸಂರಕ್ಷಣೆ ಮತ್ತು ಪುನಶ್ಚೇತನ ಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಾರ್ಟಿನ್‌ ಸ್ಕಾರ್ಸೆಸಿ ಅವರ ಸಿನಿಮಾ ಫೌಂಡೇಷನ್‌ ನ ವರ್ಲ್ಡ್‌ ಸಿನಿಮಾ ಪ್ರಾಜೆಕ್ಟ್‌ ಹಾಗೂ ಸ್ಟಾರ್ ವಾರ್ಸ್‌ ಚಿತ್ರಸರಣಿಯ ನಿರ್ದೇಶಕ ಜಾರ್ಜ್‌ ಲ್ಯೂಕಾಸ್‌ ತಮ್ಮ ಪತ್ನಿಯ ಸಹಕಾರದೊಂದಿಗೆ ಕಟ್ಟಿಕೊಂಡಿರುವ ಹ್ಯಾಬ್ರನ್‌-ಲ್ಯೂಕಾಸ್‌ ಫೌಂಡೇಷನ್‌ ಜತೆಗೂಡಿ ಘಟಶ್ರಾದ್ಧ ಚಿತ್ರವನ್ನು ಮರುಸೃಷ್ಟಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಗಿರೀಶ್ ಕಾಸರವಳ್ಳಿಯವರು 1978ರಲ್ಲಿ ನಿರ್ದೇಶಿಸಿದ್ದ ಡಾ.ಯು. ಆರ್. ಅನಂತಮೂರ್ತಿಯವರ ಕತೆ ಆಧರಿಸಿದ ಚಿತ್ರ ಘಟಶ್ರಾದ್ಧ ಹಲವು ಪ್ರಥಮಗಳನ್ನು ಕನ್ನಡಕ್ಕೆ ತಂದುಕೊಟ್ಟ ಚಿತ್ರ. 90 ವರ್ಷಗಳ ಕನ್ನಡ ಚಿತ್ರ ಇತಿಹಾಸದಲ್ಲಿ ಕನ್ನಡದ ಆರು ಚಿತ್ರಗಳಿಗೆ ಮಾತ್ರ ರಾಷ್ಟ್ರಪತಿಗಳ ಸ್ವರ್ಣ ಕಮಲ ಲಭ್ಯವಾಗಿದ್ದು, ಅವುಗಳಲ್ಲಿ ನಾಲ್ಕು ಕಾಸರವಳ್ಳಿ ನಿರ್ದೇಶನದ ಚಿತ್ರಗಳಾಗಿವೆ. ಘಟಶ್ರಾದ್ಧ ಆ ಸರಣಿಯಲ್ಲಿ ಮೊದಲನೆಯದು.

ಘಟಶ್ರಾದ್ಧ ಸಿನಿಮಾ ಸ್ಟಿಲ್
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಸ್ಯಾಂಡಲ್ ವುಡ್ ಗೆ 90 ವರ್ಷ; 30 ಕನ್ನಡ ಚಿತ್ರಗಳ ಪ್ರದರ್ಶನ

ಇಟಲಿಯ ʼಲ ಇಮಾಜಿನ್‌ ರಿಟ್ರೋವತ ಸಂಸ್ಕರಣ ಘಟಕದಲ್ಲಿ ಘಟಶ್ರಾದ್ಧ ಚಿತ್ರದ ಮರು ಸೃಷ್ಟಿಯ ಕಾರ್ಯ ಆರಂಭವಾಗಲಿದೆ. ಈ ಸಂಸ್ಕರಣ ಕಾರ್ಯ ಘಟಶ್ರಾದ್ಧ ಚಿತ್ರಕ್ಕೆ 50 ವರ್ಷ ತುಂಬುವ ವೇಳೆಗೆ ಪೂರ್ಣಗೊಳ್ಳಲಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಪುಣೆಯಲ್ಲಿರುವ ನ್ಯಾಷನಲ್‌ ಫಿಲಂ ಆರ್ಖೈವ್‌ ಆಫ್‌ ಇಂಡಿಯಾದಲ್ಲಿ ಘಟಶ್ರಾದ್ಧದ ಮೂಲ ಕ್ಯಾಮರಾ ನೆಗೆಟಿವ್‌ ಅನ್ನು ಸಂಸ್ಕರಿಸಿ ಇರಿಸಲಾಗಿದೆ.

ಘಟಶ್ರಾದ್ಧ ಚಿತ್ರ ಚಲನಚಿತ್ರ ನಿರ್ದೇಶಕನಾಗಿ ನನ್ನ ಮೊದಲ ಚಿತ್ರ. ಈ ಚಿತ್ರವನ್ನು ಸಂಸ್ಕರಿಸಿ ಕಾರ್ಯವನ್ನು ಜಗತ್ತಿನ ಅತ್ಯುತ್ತಮ ನಿರ್ದೇಶಕರು ಕೈಗೆತ್ತಿಕೊಂಡಿರುವುದು ನನಗೆ ನಿಜಕ್ಕೂ ಹೆಮ್ಮೆ ಎನ್ನಿಸುತ್ತಿದೆ. ಈ ಚಿತ್ರದ ಸಂಸ್ಕರಣ ಮತ್ತು ಮರುಸೃಷ್ಟಿ ಕಾರ್ಯ 2026ರ ವೇಳೆಗೆ ಪೂರ್ಣಗೊಳ್ಳಲಿದೆ. ಅದು ಘಟಶ್ರಾದ್ಧ ಚಿತ್ರದ ಐವತ್ತನೇ ವರ್ಷ. ಅದು ಮರುಸೃಷ್ಟಿಗೊಂಡಾಗ ತಳೆಯಬಹುದಾದ ರೂಪವನ್ನು ನೋಡಲು ನಾನು ಕಾತುರನಾಗಿದ್ದೇನೆ ಎಂದು ತಮ್ಮ ಮೊದಲ ಚಿತ್ರದ ಹೊಸ ರೂಪ ಕುರಿತು ಗಿರೀಶ್‌ ಕಾಸರವಳ್ಳಿ ಹೇಳಿದ್ದಾರೆ.

ಘಟಶ್ರಾದ್ಧ ಹೊಸ ರೂಪ ತಳೆದು ಹೊರಬರಲು ಕಾರಣರಾಗಿರುವ ಫಿಲಂ ಹೆರಿಟೇಜ್‌ ಫೌಂಡೇಷನ್‌ ನ ಶಿವೇಂದ್ರ ಸಿಂಗ್‌ ಡುಂಗರ್ಪುರ್‌ ಅವರು ತಾವು ದೇಶದ ಪ್ರತಿಭಾಷೆಯ ಅತ್ಯುತ್ತಮ ಕಲಾತ್ಮಕ ಚಿತ್ರವನ್ನು ಸಂಸ್ಕರಿಸಿ ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವನ್ನು ಮಾಡುತ್ತಿರುವುದಾಗಿಯೂ, ಘಟಶ್ರಾದ್ಧ ಈ ಪ್ರಯತ್ನದ ಮುಂದುವರಿದ ಭಾಗವೆಂದು ಹೇಳಿಕೊಂಡಿದ್ದಾರೆ.

ಘಟಶ್ರಾದ್ಧ ಸಿನಿಮಾ ಸ್ಟಿಲ್
'ಶಾಲಿವಾಹನ ಶಕೆ' ಹಳ್ಳಿಯಲ್ಲಿ ನಡೆಯುವ ಟೈಮ್ ಲೂಪ್ ಚಿತ್ರವಾಗಿದೆ: ನಿರ್ದೇಶಕ ಗಿರೀಶ್

ನಾನು ಎಫ್‌ಟಿಐಐ (ಫಿಲ್ಮ್ ಅಂಡ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ) ನಿಂದ ನೇರವಾಗಿ ಹೊರಬಂದಾಗ ನಾನು ಈ ಚಿತ್ರ ಮಾಡಿದೆ. ನನ್ನ ವಯಸ್ಸು ಕೇವಲ 25. ನಾನು ಸಂಸ್ಕಾರ ಮತ್ತು ಮಾಲ್ಗುಡಿ ಡೇಸ್‌ ಚಿತ್ರಗಳಿಗೆ ಸರಿಸಮಾನವಾದ ಏನನ್ನಾದರೂ ಮಾಡಬೇಕೆಂದು ಬಯಸಿದ್ದೆ.

ಗಿರೀಶ್‌ ಕಾಸರವಳ್ಳಿ ಅವರು ಈ ಘಟಶ್ರಾದ್ಧ ಚಿತ್ರವನ್ನು ನಿರ್ದೇಶಿಸಿದ್ದು 1977ರಲ್ಲಿ. ಈ ಚಿತ್ರರಂಗ ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಒಂದು ಮೈಲಿಗಲ್ಲಿನಂಥ ಚಲನಚಿತ್ರ ಕೃತಿ ಎಂದು ಗುರುತಿಸಲಾಗಿದೆ. ಇದು ಜ್ಞಾನಪೀಠ ಪುರಸ್ಕೃತ ಸಾಹಿತಿ ಯು ಆರ್‌ ಅನಂತಮೂರ್ತಿ ಅವರ ಕಾದಂಬರಿಯನ್ನು ಆಧರಿಸಿದ ಚಿತ್ರವಾಗಿದೆ.

ಬರೀ ಕಥೆಯಿಂದಲೇ ಸಿನಿಮಾ ಒಳ್ಳೆಯದಾಗುವುದಿಲ್ಲ. ಮಾಧ್ಯಮದ ಮೇಲೆ ಹಿಡಿತ ಇರಬೇಕು’ ಎಂದು ಹೇಳುವ ಕಾಸರವಳ್ಳಿ, ‘ಈ ಸಿನಿಮಾ ಕೂಡ ಜಗತ್ತಿನಾದ್ಯಂತ ಗಮನ ಸೆಳೆದಿದ್ದ ಕಾಲಘಟ್ಟದಲ್ಲಿ ನಿರ್ಮಿಸಲಾಗಿದೆ’ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com