'ಕಾಟೇರ' 100 ಕೋಟಿ ಕ್ಲಬ್ ಸೇರುವ ಸಾಲಿನಲ್ಲಿದೆಯೇ, ಚಿತ್ರ ಗಳಿಸಿದ್ದೆಷ್ಟು? ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ದು...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಳೆದ ಶುಕ್ರವಾರ ಬಿಡುಗಡೆಯಾದ 'ಕಾಟೇರ' ಚಿತ್ರ ಯಶಸ್ಸು ಕಂಡಿದ್ದು ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಹೊಸ ವರ್ಷ ದಿನ ಚಿತ್ರತಂಡ ಸಕ್ಸಸ್ ಮೀಟ್ ಇರಿಸಿಕೊಂಡಿತ್ತು.  ಕಾಟೇರ ಚಿತ್ರ ಬಿಡುಗಡೆಗೊಂಡು ಕೇವಲ 3 ದಿನಗಳಲ್ಲಿ 50 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಇನ್ನೊಂದು ವಾರದಲ್ಲಿ 100 ಕೋಟಿ ಕ್ಲಬ್
ರಾಕ್ ಲೈನ್ ವೆಂಕಟೇಶ್-ದರ್ಶನ್ ತೂಗುದೀಪ(ಸಂಗ್ರಹ  ಚಿತ್ರ)
ರಾಕ್ ಲೈನ್ ವೆಂಕಟೇಶ್-ದರ್ಶನ್ ತೂಗುದೀಪ(ಸಂಗ್ರಹ ಚಿತ್ರ)

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಳೆದ ಶುಕ್ರವಾರ ಬಿಡುಗಡೆಯಾದ 'ಕಾಟೇರ' ಚಿತ್ರ ಯಶಸ್ಸು ಕಂಡಿದ್ದು ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಹೊಸ ವರ್ಷ ದಿನ ಚಿತ್ರತಂಡ ಸಕ್ಸಸ್ ಮೀಟ್ ಇರಿಸಿಕೊಂಡಿತ್ತು.

ಕಾಟೇರ ಚಿತ್ರ ಬಿಡುಗಡೆಗೊಂಡು ಕೇವಲ 3 ದಿನಗಳಲ್ಲಿ 50 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಇನ್ನೊಂದು ವಾರದಲ್ಲಿ 100 ಕೋಟಿ ಕ್ಲಬ್ ಸೇರಲಿದೆ ಎಂದೆಲ್ಲ ಸುದ್ದಿಯಾಗಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸ್ಪಷ್ಟನೆ ನೀಡಿದ್ದಾರೆ.

'ನಿಜವಾಗಿ ಹೇಳಬೇಕೆಂದರೆ ನಾನು ಯಾವತ್ತೂ ಚಿತ್ರದ ಬಜೆಟ್ ಮತ್ತು ಗಳಿಕೆ ಬಗ್ಗೆ ಲೆಕ್ಕಹಾಕಿದವನಲ್ಲ, ಕಾಟೇರ ಕೂಡ ಹಾಗೆಯೇ 50 ಕೋಟಿ ರೂಪಾಯಿ ಗಳಿಸಿದೆ ಇನ್ನೊಂದು ವಾರದಲ್ಲಿ 100 ಕೋಟಿ ದಾಟಲಿದೆ ಎಂದೆಲ್ಲ ಹೇಳುತ್ತಾರೆ, ಎಷ್ಟು ಗಳಿಸಿದೆ ಎಂದು ನಾನು ಲೆಕ್ಕ ಹಾಕಿಲ್ಲ, 100 ಕೋಟಿ ಗಳಿಸಿದರೆ ಸಂತೋಷ, ಆದರೆ ಈಗ ಬರುತ್ತಿರುವ ಸುದ್ದಿಗಳು ನಿಜವಲ್ಲ, ಒಂದಂತೂ ಸತ್ಯ,ಚಿತ್ರ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ, ದರ್ಶನ್ ಸೆಲೆಬ್ರಿಟಿಗಳು, ಕನ್ನಡ ಚಿತ್ರ ಪ್ರೇಮಿಗಳು ಕಾಟೇರವನ್ನು ಗೆಲ್ಲಿಸಿದ್ದಾರೆ ಎಂದು ಸಂತೋಷದಿಂದ ಹೇಳಿದರು.

ಕನ್ನಡ ನೆಲದಲ್ಲಿ ಕನ್ನಡ ಚಿತ್ರಗಳ ಬೆಳವಣಿಗೆ ಸಂಭ್ರಮಿಸೋಣ: ಇದೇ ಸಂದರ್ಭದಲ್ಲಿ ರಾಕ್ ಲೈನ್ ಅವರು ಒಂದು ಪ್ರಶ್ನೆಯನ್ನು ಎತ್ತಿದ್ದಾರೆ. ಕನ್ನಡ ಚಿತ್ರ ತನ್ನದೇ ನೆಲದಲ್ಲಿ ಯಶಸ್ವಿಯಾಗುವ ಸಾಮರ್ಥ್ಯವನ್ನು ಜನರು ಏಕೆ ಅನುಮಾನಿಸುತ್ತಾರೆ. ನಾವು ಇತರ ಭಾಷೆಯ ಚಲನಚಿತ್ರಗಳನ್ನು ಬೆಂಬಲಿಸಿದಾಗ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಅವುಗಳ ಸಂಗ್ರಹಗಳ ಬಗ್ಗೆ ಮಾತನಾಡುವಾಗ ಕನ್ನಡ ಚಲನಚಿತ್ರಗಳು ಏಕೆ ಉನ್ನತ ಗುಣಮಟ್ಟವನ್ನು ಹೊಂದಿಸಲು ಸಾಧ್ಯವಿಲ್ಲ. ಪ್ರೇಕ್ಷಕರು ಚಿತ್ರವನ್ನು ಶ್ಲಾಘಿಸಿ ಥಿಯೇಟರ್‌ಗಳಿಗೆ ಬರುತ್ತಿರುವಾಗ ನಾವೇಕೆ ಕನ್ನಡ ಸಿನಿಮಾವನ್ನು ಹೆಚ್ಚು ಆಚರಿಸಬಾರದು.

ಒಂದು ಚಿತ್ರವನ್ನು ಅದರ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಆಧಾರದ ಮೇಲೆ ಮಾತ್ರ ಬ್ಲಾಕ್‌ಬಸ್ಟರ್ ಎಂದು ಕರೆಯಬೇಕೇ, ಪೈಪೋಟಿಯ ನಡುವೆಯೂ ಉತ್ತಮ ಚಿತ್ರ ನಿರ್ಮಾಣದ ಹಿಂದೆ ತಂಡದ ಶ್ರಮವನ್ನು ಶ್ಲಾಘಿಸೋಣ. ನಾವು ನಮ್ಮ ಚಲನಚಿತ್ರಗಳನ್ನು ಕೇವಲ ಬಾಕ್ಸ್ ಆಫೀಸ್ ಸಂಖ್ಯೆಗಳನ್ನು ಮೀರಿ ಗೌರವಿಸಿದಾಗ, ಸಿನಿಮಾ ಮತ್ತು ಪ್ರೇಕ್ಷಕರು ನಿಜವಾಗಿಯೂ ಒಟ್ಟಿಗೆ ಬೆಳೆಯುತ್ತಾರೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com