
ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಮೊದಲ ವಾರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ವಿದೇಶದಲ್ಲಿಯೂ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಒಮನ್ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆಸ್ಟ್ರೇಲಿಯಾ ಮತ್ತಿತರ ಕಡೆಗಳಲ್ಲಿಯೂ ಕಾಟೇರ ಸಿನಿಮಾ ಪ್ರದರ್ಶನವಾಗುತ್ತಿದೆ ಎಂಬಂತಹ ವರದಿಗಳು ಬಂದಿವೆ.
" @dasadarshan starrer #Kaatera storms overseas and rocks a packed show in Oman! #Kaatera #Overseas #HousefullShow #DBoss #KaateraBiggestBlockBuster # @TharunSudhir @Dcompany171 pic.twitter.com/9JIuXoB5ob
ವಿದೇಶದಲ್ಲಿರುವ ಇರುವ ಕನ್ನಡಿಗ ಹಾಗೂ ಸೋಶಿಯಲ್ ಮೀಡಿಯಾ ಇನ್ಫೊಲೆನ್ಸರ್ ಎಂ.ಎನ್. ವಿ. ಗೌಡ ಕಾಟೇರ ಚಿತ್ರ ಆಸ್ಟ್ರೇಲಿಯಾಕ್ಕೆ ಬಂದಿದೆ ಅಂತಾ ಹೇಳಿಕೊಂಡಿದ್ದಾರೆ.
ಡಿಸೆಂಬರ್ 29ರಂದು ತೆರೆಕಂಡಿದ್ದ ಚಿತ್ರ ಬಿಡುಗಡೆಯಾದ ಮೊದಲ ದಿನವೇ 19.79 ಕೋಟಿ ರೂ. ಗಳಿಸಿತ್ತು. ಆರನೇ ದಿನಕ್ಕೆ 9.78 ಕೋಟಿ ರೂ. ಗಳಿಸುವ ಮೂಲಕ ಚಿತ್ರವು ಒಟ್ಟು 95.36 ಕೋಟಿ ರೂ. ಸಂಗ್ರಹಿಸಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆಯುತ್ತಾ ಮುನ್ನುಗುತ್ತಿದೆ.
Advertisement