ನಿಯಮ ಮೀರಿ ಪಬ್ ನಲ್ಲಿ ಪಾರ್ಟಿ ಪ್ರಕರಣ: ನಟ ದರ್ಶನ್ ಸೇರಿ ಇತರ 8 ಮಂದಿ ವಿಚಾರಣೆಗೆ ಹಾಜರು

ಇತ್ತೀಚಿಗೆ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ 'ಕಾಟೇರ' ಸಿನಿಮಾ ಯಶಸ್ಸು ಸಂಭ್ರಮಿಸಲು ಒರಾಯನ್ ಮಾಲ್ ಬಳಿಯ ಜೆಟ್ ಲ್ಯಾಗ್ ಪಬ್ ನಲ್ಲಿ ನಿಯಮ ಉಲ್ಲಂಘಿಸಿ ಮುಂಜಾನೆಯವರೆಗೂ ಪಾರ್ಟಿ ಆಯೋಜಿಸಿದ್ದ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಕ್ರವಾರ ಎಂಟು ಮಂದಿಯೊಂದಿಗೆ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದರು. 
ನಟ ದರ್ಶನ್ ಮತ್ತಿತರರು
ನಟ ದರ್ಶನ್ ಮತ್ತಿತರರು

ಬೆಂಗಳೂರು: ಇತ್ತೀಚಿಗೆ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ 'ಕಾಟೇರ' ಸಿನಿಮಾ ಯಶಸ್ಸು ಸಂಭ್ರಮಿಸಲು ಒರಾಯನ್ ಮಾಲ್ ಬಳಿಯ ಜೆಟ್ ಲ್ಯಾಗ್ ಪಬ್ ನಲ್ಲಿ ನಿಯಮ ಉಲ್ಲಂಘಿಸಿ ಮುಂಜಾನೆಯವರೆಗೂ ಪಾರ್ಟಿ ಆಯೋಜಿಸಿದ್ದ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಕ್ರವಾರ ಎಂಟು ಮಂದಿಯೊಂದಿಗೆ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದರು. 

ಕಾಟೇರ ಸಿನಿಮಾ ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟರಾದ ಡಾಲಿ ಧನಂಜಯ್, ನೀನಾಸಂ ಸತೀಶ್, ಅಭಿಷೇಕ್ ಅಂಬರೀಷ್, ಚಿಕ್ಕಣ್ಣ ಅವರೊಂದಿಗೆ  ನಟ ದರ್ಶನ್ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡರು.

ನಿಯಮ ಉಲ್ಲಂಘಿಸಿ ಜನವರಿ 3 ರಂದು ಪಾರ್ಟಿ ನಡೆಸಿದ್ದ ಆರೋಪದ ಮೇರೆಗೆ ಜನವರಿ 7 ರಂದು ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಜನವರಿ 8 ರಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿತ್ತು. ಆದರೆ, ದರ್ಶನ್ ಹಾಗೂ ತರುಣ್ ಸುಧೀರ್ ಸಿನಿಮಾ ಪ್ರಚಾರಕ್ಕೆ ದುಬೈಗೆ ತೆರಳಿದ್ದರಿಂದ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಶುಕ್ರವಾರ ವಿಚಾರಣೆಗೆ ಹಾಜರಾದರು. 

ವಿಚಾರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ದರ್ಶನ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಾವು ತಡರಾತ್ರಿ ವರೆಗೂ ಪಾರ್ಟಿ ಮಾಡಲಿಲ್ಲ. ಊಟಕ್ಕೆ ಕುಳಿತಿದ್ದೇವು, ಅಡುಗೆ ಮಾಡೋದು ತಡವಾಗಿದ್ದರಿಂದ ತಡರಾತ್ರಿ ಆಗಿದೆ ಎಂದರು. 

ತಡರಾತ್ರಿ ಎಷ್ಟೋ ಬಾರ್ ಗಳು ಓಪನ್ ಇರುತ್ತವೆ. ಆದರೆ, ಈವರೆಗೂ ಯಾವುದೇ ಗ್ರಾಹಕನಿಗೆ ಈ ರೀತಿ ನೋಟಿಸ್ ಕೊಟ್ಟಿಲ್ಲ. ಸಾಮಾನ್ಯ ಜನರಿಗೂ, ಸೆಲೆಬ್ರಿಟಿಗಳಿಗೂ ಒಂದೇ ಕಾನೂನು. ನಮಗೆ ಅವತ್ತು ಯಾವ ಪೊಲೀಸರೂ ಕೇಳಿಲ್ಲ. ಯಾರಿಗೂ ತೊಂದರೆ ಆಗುವಂತೆ ನಡೆದುಕೊಂಡಿಲ್ಲವೆಂದು ಇದೇ ಸಂದರ್ಭದಲ್ಲಿ ರಾಕ್ ಲೈನ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com