'ರಂಗ ಸಮುದ್ರ' ದಲ್ಲಿನ 'ತಾತ'ನ ಪಾತ್ರ ಹೊಸ ಅನುಭವ: ರಂಗಾಯಣ ರಘು

ಈ ಹಿಂದೆ ಖಳನಾಯಕ,ಕಾಮಿಡಿ ಸೇರಿದಂತೆ ಹಲವು ಪಾತ್ರಗಳಲ್ಲಿ ಅಭಿನಯಿಸಿ ತಮ್ಮ ನಟನೆಯಿಂದಲೇ ಮನೆ ಮಾತಾಗಿರುವ ರಂಗಾಯಣ ರಘು, ರಾಜ್‌ಕುಮಾರ್ ಅಸ್ಕಿ ನಿರ್ದೇಶನದ ರಂಗ ಸಮುದ್ರ ಎಂಬ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.
ರಂಗಸಮುದ್ರ ಸಿನಿಮಾದಲ್ಲಿ ರಂಗಾಯಣ ರಘು
ರಂಗಸಮುದ್ರ ಸಿನಿಮಾದಲ್ಲಿ ರಂಗಾಯಣ ರಘು
Updated on

ಈ ಹಿಂದೆ ಖಳನಾಯಕ,ಕಾಮಿಡಿ ಸೇರಿದಂತೆ ಹಲವು ಪಾತ್ರಗಳಲ್ಲಿ ಅಭಿನಯಿಸಿ ತಮ್ಮ ನಟನೆಯಿಂದಲೇ ಮನೆ ಮಾತಾಗಿರುವ ರಂಗಾಯಣ ರಘು, ರಾಜ್‌ಕುಮಾರ್ ಅಸ್ಕಿ ನಿರ್ದೇಶನದ ರಂಗ ಸಮುದ್ರ ಎಂಬ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.

ಮೊದಲ ಬಾರಿಗೆ ಪರದೆಯ ಮೇಲೆ ಮಗುವಿನಿಂದ ತಾತ ಎಂದು ಕರೆಸಿಕೊಂಡ ಖುಷಿಯನ್ನು ರಂಗಾಯಣ ರಘು ಅನುಭವಿಸುತ್ತಿದ್ದಾರೆ. ರಂಗ ಸಮುದ್ರದಲ್ಲಿನ ಅವರ ವಿಭಿನ್ನ ಪಾತ್ರ ರಂಗಾಯಣ ರಘು ಅವರ ವೃತ್ತಿಜೀವನಕ್ಕೆ ಹೊಸ ಆಯಾಮವನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ.

30 ವರ್ಷಗಳ ನನ್ನ ವೃತ್ತಿಜೀವನದಲ್ಲಿ 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ರಂಗಸಮುದ್ರದಲ್ಲಿ ಮಗು ನನ್ನನ್ನು ‘ತಾತ’ ಎಂದು ಕರೆಯುವುದನ್ನು ಕೇಳಿದಾಗ ನನ್ನಲ್ಲಿ ಮುಗ್ಧತೆಯ ಅನುಭವವಾಯಿತು. ಇದುವರೆಗೆ ಅಮ್ಮ, ಅಪ್ಪ, ದೊಡ್ಡಪ್ಪ ಎಂದು ಕರೆಸಿಕೊಂಡಿದ್ದ ನನಗೆ ತಾತ’ ಫ್ರೆಶ್ ಪಾತ್ರವಾಗಿದ್ದು, ನನ್ನ ವಯಸ್ಸಿಗೆ ಈ ಪಾತ್ರ ಮಾಡಿದ್ದು ಸರಿ ಎನಿಸಿತು’ ಎಂದು ರಂಗಾಯಣ ರಘು  ತಮ್ಮ ಅನುಭವ ಹೇಳಿಕೊಂಡಿದ್ದಾರೆ.

<strong>ರಂಗಸಮುದ್ರ ಸಿನಿಮಾದಲ್ಲಿ ರಂಗಾಯಣ ರಘು</strong>
ರಂಗಸಮುದ್ರ ಸಿನಿಮಾದಲ್ಲಿ ರಂಗಾಯಣ ರಘು

ಚಿತ್ರವು ಅಜ್ಜ ಮತ್ತು ಮೊಮ್ಮಗನ ನಡುವಿನ ಹೃದಯಸ್ಪರ್ಶಿ ಕಥೆಯನ್ನು ಬಿಚ್ಚಿಡುತ್ತದೆ. ತನ್ನನ್ನು ತಾನು ಸಾಬೀತುಪಡಿಸುವ  ಕಥೆಯನ್ನು ನವಿರಾಗಿ ಹೆಣೆಯಲಾಗಿದೆ. ತನ್ನ ತಾತ ಕಾರು ಓಡಿಸಲು ಅವಕಾಶ ನೀಡುವಂತೆ ಹಳ್ಳಿಯ ಮುಖ್ಯಸ್ಥನಿಗೆ ಸವಾಲು ಹಾಕುವುದು ಕಥೆಯ ತಿರುಳು. ಚಿತ್ರವು  ಕೇವಲ ಮನರಂಜನೆ ಮಾತ್ರವಲ್ಲದೆ ಮಾನವ ಸಂಬಂಧಗಳ ಸೂಕ್ಷ್ಮ ಎಳೆಗಳನ್ನು ವಿವರಿಸುತ್ತದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com