ಬಾಯ್ ಫ್ರೆಂಡ್ ಎಡ್ ವೆಸ್ಟ್‌ವಿಕ್ ಜತೆ ಆಮಿ ಜಾಕ್ಸನ್ ಎಂಗೇಜ್‌ಮೆಂಟ್
ಸ್ವಿಟ್ಜರ್ಲೆಂಡ್: ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ದಿ ವಿಲನ್ ಚಿತ್ರದಲ್ಲಿ ನಟಿಸಿದ್ದ ಆಮಿ ಜಾಕ್ಸನ್ ಅವರು ಸುಮಾರು ಎರಡು ವರ್ಷಗಳ ಡೇಟಿಂಗ್ ಬಳಿಕ ತಮ್ಮ ಬಾಯ್ ಫ್ರೆಂಡ್ ಎಡ್ ವೆಸ್ಟ್‌ವಿಕ್ ಅವರೊಂದಿಗೆ ಸೋಮವಾರ ತಮ್ಮ ನಿಶ್ಚಿತಾರ್ಥ ಘೋಷಿಸಿದ್ದಾರೆ.
31 ವರ್ಷದ ಆಮಿ ಜಾಕ್ಸನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಚಿತ್ರಗಳ ಪ್ರಕಾರ, 36 ವರ್ಷದ ವೆಸ್ಟ್‌ವಿಕ್ ಅವರು ಸ್ವಿಟ್ಜರ್ಲೆಂಡ್‌ನ ಜಿಸ್ಟಾಡ್‌ನಲ್ಲಿರುವ ಸೇತುವೆಯೊಂದರಲ್ಲಿ ದಿ ವಿಲನ್ ನಟಿಗೆ ಪ್ರಪೋಸ್ ಮಾಡಿದ್ದಾರೆ.
ತಾರಾ ಜೋಡಿ ಈ ಫೋಟೋವನ್ನು ತಮ್ಮ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಹೆಲ್ ಯೆಸ್" ಎಂದು ಆಮಿ ಜಾಕ್ಸನ್ ಫೋಟೋಗಳಿಗೆ ಶೀರ್ಷಿಕೆ ನೀಡಿದ್ದಾರೆ.
"ನಾನು ಜಾಕ್‌ಪಾಟ್ ಹೊಡೆದಿದ್ದೇನೆ" ಎಂದು ವೆಸ್ಟ್‌ವಿಕ್ ತಮ್ಮ Instagram ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಆಮಿ ಜಾಕ್ಸನ್ ಅವರು ಈ ಹಿಂದೆ ಲಂಡನ್ ಮೂಲದ ವಾಣಿಜ್ಯೋದ್ಯಮಿ ಜಾರ್ಜ್ ಪನಾಯೊಟೌ ಅವರೊಂದಿಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು ಮತ್ತು ಅವರಿಗೆ ಆಂಡ್ರಿಯಾಸ್ ಎಂಬ ನಾಲ್ಕು ವರ್ಷದ ಮಗನಿದ್ದಾರೆ.