'ಜಸ್ಟ್ ಪಾಸ್' ರಿಲೀಸ್ ಡೇಟ್ ಫಿಕ್ಸ್!

ಟ್ರೇಲರ್ ಬಿಡುಗಡೆ ಸಮಾರಂಭದಲ್ಲೇ ಚಿತ್ರದ "ನೋಡಿದ ಕೂಡಲೆ" ಎಂಬ ಸುಮಧುರ ಹಾಡನ್ನು ಸಹ ಪ್ರದರ್ಶಿಸಲಾಯಿತು. ಸದ್ಯ ಜಸ್ಟ್ ಪಾಸ್ ಸಿನಿಮಾ ಬಿಡುಗಡೆ ಡೇಟ್ ಫಿಕ್ಸ್ ಮಾಡಿದ್ದಾರೆ. ಫೆಬ್ರವರಿ 9 ರಂದು ಸಿನಿಮಾ ರಿಲೀಸ್ ಆಗಲಿದೆ. 
ಜಸ್ಟ್ ಪಾಸ್ ಸಿನಿಮಾ ಸ್ಟಿಲ್
ಜಸ್ಟ್ ಪಾಸ್ ಸಿನಿಮಾ ಸ್ಟಿಲ್

ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಎಲ್ಲರ ಮೆಚ್ಚುಗೆ ಪಡೆದಿರುವ "ಜಸ್ಟ್ ಪಾಸ್" ಚಿತ್ರದ ಟ್ರೇಲರ್ A2 music ಮೂಲಕ ಬಿಡುಗಡೆಯಾಗಿದೆ. ಟ್ರೇಲರ್ ಕೂಡ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ನೋಡಿದವರು ಇದು "ಜಸ್ಟ್ ಪಾಸ್" ಚಿತ್ರದ ಫಸ್ಟ್ ಕ್ಲಾಸ್ ಟ್ರೇಲರ್ ಎನ್ನುತ್ತಿದ್ದಾರೆ.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲೇ ಚಿತ್ರದ "ನೋಡಿದ ಕೂಡಲೆ" ಎಂಬ ಸುಮಧುರ ಹಾಡನ್ನು ಸಹ ಪ್ರದರ್ಶಿಸಲಾಯಿತು. ಸದ್ಯ ಜಸ್ಟ್ ಪಾಸ್ ಸಿನಿಮಾ ಬಿಡುಗಡೆ ಡೇಟ್ ಫಿಕ್ಸ್ ಮಾಡಿದ್ದಾರೆ. ಫೆಬ್ರವರಿ 9 ರಂದು ಸಿನಿಮಾ ರಿಲೀಸ್ ಆಗಲಿದೆ.

ವಿದ್ಯಾರ್ಥಿಗಳು ದೇಣಿಗೆ ನೀಡಲು ಸಿದ್ಧರಿದ್ದರೂ ಸಹ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಹೆಣಗಾಡುತ್ತಿರುವ ಜಸ್ಟ್ ಪಾಸ್ ಅಂಕಗಳನ್ನು  ಪಡೆದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತದೆ. ಕಥೆಯು ಒಂದು ತಾತ್ವಿಕ ಪಾತ್ರದ ಸುತ್ತ ಸುತ್ತುತ್ತದೆ, ಅವರು ಜಸ್ಚ್ ಪಾಸ್ ಮಾರ್ಕ್ಸ್ ಪಡೆದ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ಕಾಲೇಜನ್ನು ಸ್ಥಾಪಿಸುವ ಉದ್ದೇಶದ ಕಥೆಯಾಗಿದೆ.

ಜಸ್ಟ್ ಪಾಸ್ ಈ ಪ್ರಭಾವಶಾಲಿ ಸಂದೇಶವನ್ನು ಮನರಂಜನೆಯ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ, ಪ್ರೇಕ್ಷಕರಿಗೆ ಸಂತೋಷಕರ ಸಿನಿಮೀಯ ಅನುಭವವನ್ನು ನೀಡುತ್ತದೆ. ಚಲನಚಿತ್ರವು ಮನರಂಜನೆಯ ಗುರಿಯನ್ನು ಮಾತ್ರವಲ್ಲದೆ ಶೈಕ್ಷಣಿಕ ಅನ್ವೇಷಣೆಯಲ್ಲಿ ಪರಿಶ್ರಮ ಮತ್ತು ನಿರ್ಣಯದ ಪ್ರಾಮುಖ್ಯತೆಯ ಬಗ್ಗೆ ಮೌಲ್ಯಯುತವಾದ ಸಂದೇಶ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಟ್ರೇಲರ್ ಬಿಡುಗಡೆ ನಂತರ ಮಾತನಾಡಿದ ನಿರ್ದೇಶಕ ಕೆ.ಎಂ.ರಘು, ಚಿತ್ರ ಇಷ್ಟು ಅದ್ದೂರಿಯಾಗಿ ಬರಲು ನಮ್ಮ ನಿರ್ಮಾಪಕ ಕೆ.ವಿ.ಶಶಿಧರ್ ಅವರು ಕಾರಣ. ಯಾವುದೇ ಕೊರತೆ ಇಲ್ಲದೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರಿಗೂ ನಾನು ಈ ಸಮಯದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು. ಟ್ರೇಲರ್ ನೋಡಿದ ಮೇಲೆ ಬಹಳ ಖುಷಿಯಾಯಿತು. ಚಿತ್ರ ಕೂಡ ಚೆನ್ನಾಗಿ ಬಂದಿದೆ. ಫೆಬ್ರವರಿ 9ರಂದು ಬಿಡುಗಡೆಯಾಗುತ್ತಿದೆ. ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಕೆ.ವಿ.ಶಶಿಧರ್.

ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ತುಂಬಾ ಚೆನ್ನಾಗಿದೆ. ಚಿತ್ರ ಇನ್ನೂ ಚೆನ್ನಾಗಿದೆ‌ ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎನ್ನುತ್ತಾರೆ ನಾಯಕ ಶ್ರೀ.ನಾನು ಕೂಡ ಈ ಚಿತ್ರದಲ್ಲಿ "ಜಸ್ಟ್ ಪಾಸ್" ವಿದ್ಯಾರ್ಥಿ ಎಂದು ತಮ್ಮ ಪಾತ್ರದ ಬಗ್ಗೆ ನಾಯಕಿ ಪ್ರಣತಿ ಹೇಳಿದರು. ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್, ಛಾಯಾಗ್ರಾಹಕ ಸುಜಯ್ ಕುಮಾರ್, ಹಾಡು ಬರೆದಿರುವ ಪ್ರಮೋದ್ ಮರವಂತೆ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕ ಕಲಾವಿದರಾದ "ಜಸ್ಟ್ ಪಾಸ್" ಚಿತ್ರದ ಕುರಿತು ಮಾತನಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com