
ರೂಪಾಂತರ' ಸಿನಿಮಾ ನಿರ್ದೇಶಕರು ಇತ್ತೀಚೆಗೆ 'ಕಿತ್ತಳೆ' ಎಂಬ ಹಾಡಿನ ಜೊತೆಗೆ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಮಿಧುನ್ ಮುಕುಂದನ್ ಅವರ ಸಂಗೀತ ಸಂಯೋಜನೆಯ ಈ ಹಾಡಿಗೆ ನಟಿ ಚೈತ್ರ ಆಚಾರ್ ಧ್ವನಿ ನೀಡಿದ್ದಾರೆ. ರಾಜ್ ಬಿ ಶೆಟ್ಟಿ ಅವರ ಸಾಹಿತ್ಯ ಬರೆದಿದ್ದಾರೆ.
ಸದ್ಯ ಲೈಟರ್ ಬುದ್ಧ ಫಿಲಂಸ್ ನ ಯೂಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿರುವ ಈ ಹಾಡು ಈಗಾಗಲೇ ಭಾರಿ ವೀಕ್ಷಣೆ ಪಡೆದುಕೊಂಡಿದೆ. ಒಂದು ಮೊಟ್ಟೆಯ ಕಥೆಯ ನಿರ್ಮಾಪಕರಾದ ಸುಹಾನ್ ಪ್ರಸಾದ್ ಈ ಚಿತ್ರದ ನಿರ್ಮಾಣವನ್ನು ಮಾಡಿದ್ದಾರೆ. ಪ್ರವೀಣ್ ಶ್ರೀಯಾನ್ ಛಾಯಗ್ರಹಣ, ಮಿಧುನ್ ಮುಕುಂದನ್ ಸಂಗೀತವನ್ನೂ ನೀಡುವ ಮೂಲಕ ಈ ಜೋಡಿ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಹೊರಟಿದೆ. ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕುತೂಹಲಕಾರಿಯಾಗಿ, ರಾಜ್ ಬಿ ಶೆಟ್ಟಿ ಚಿತ್ರಕ್ಕೆ ಸಂಭಾಷಣೆಯನ್ನೂ ಬರೆದಿದ್ದಾರೆ.
ಭುವನೇಶ್ ಮಣಿವಣ್ಣನ್ ಮತ್ತು ಪ್ರವೀಣ್ ಶ್ರೀಯಾನ್ ಸಂಕಲನ ಮಾಡಿದ್ದಾರೆ, ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರದ್ವಾಜ್ ಮತ್ತಿರರರು ನಟಿಸಿದ್ದಾರೆ.
Advertisement