ಕಿರಣ್ ರಾಜ್ ನಟನೆಯ 'ರಾನಿ' ಬಿಡುಗಡೆಗೆ ಮುಹೂರ್ತ ನಿಗದಿ

ಈ ಹಿಂದೆ ನೀವು ನೋಡಿರದ ಕಿರಣ್ ರಾಜ್ ಅನ್ನು ‘ರಾನಿ’ ಸಿನಿಮಾದಲ್ಲಿ ನೋಡಬಹುದು‌. ಸಿನಿಮಾದಲ್ಲಿ ಒಟ್ಟು ಆರು ಆಕ್ಷನ್ ಸೀಕ್ವೆನ್ಸ್​ ಇವೆ. ಕೌಟುಂಬಿಕ ಸೆಂಟಿಮೆಂಟ್‍ ಸಹ ಸ್ವಲ್ಪ ಹೆಚ್ಚಾಗಿಯೇ ಇದೆ ಎಂದುಕಿರಣ್ ರಾಜ್ ತಿಳಿಸಿದ್ದಾರೆ.
ರಾನಿ ಸಿನಿಮಾ ಸ್ಟಿಲ್
ರಾನಿ ಸಿನಿಮಾ ಸ್ಟಿಲ್

ಕನ್ನಡದ ಜನಪ್ರಿಯ ಕಿರುತೆರೆ ನಟ ಕಿರಣ್ ರಾಜ್ ಹಿರಿತೆರೆಗೂ ಕಾಲಿಟ್ಟಿದ್ದು, ಸದ್ಯ ಅವರ ಮುಂದಿನ ಚಿತ್ರ ರಾನಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಆಗಸ್ಟ್ 30 ರಂದು ಥಿಯೇಟರ್‌ಗಳಿಗೆ ಬರಲಿದೆ ಎಂದು ನಿರ್ದೇಶಕರು ಘೋಷಿಸಿದ್ದಾರೆ. ಗುರುತೇಜ್ ಶೆಟ್ಟಿ ನಿರ್ದೇಶನದ ಈ ಚಿತ್ರವು ಅದರ ವಿಶಿಷ್ಟ ಕಥಾಹಂದರಕ್ಕಾಗಿ ಸಾಕಷ್ಟು ನಿರೀಕ್ಷೆ ಸೃಷ್ಟಿಸಿದೆ.

ಕಿರಣ್ ರಾಜ್ ಅವರ ಜನ್ಮದಿನದ ಸಂದರ್ಭದಲ್ಲಿ ನಿರ್ದೇಶಕರು ರಾನಿಯ 'ಹವಮಾನವೇ ಸುಂದರ ಸುಂದರ' ಹಾಡನ್ನು ಅನಾವರಣಗೊಳಿಸಿದರು, ಅದು ಈಗ ಟಿ-ಸೀರೀಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ. ಪ್ರಮೋದ್ ಮರವಂತೆ ಬರೆದಿರುವ ಈ ಹಾಡಿಗೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.

ಜೀವನದಲ್ಲಿ ಮುಂದೇನು ಮಾಡಬೇಕು ಎಂಬ ಪ್ರಶ್ನೆ ಎದುರಾದಾಗ ನನಗೆ, ‘ರಾನಿ’ ಸಿನಿಮಾದ ನಿರ್ಮಾಪಕರು ಮತ್ತು ನಿರ್ದೇಶಕರು ದೊರೆತರು. ನನಗೂ ಈ ಸಿನಿಮಾದ ಕತೆ ಇಷ್ಟವಾಯಿತು. ಕಥೆ ಕಾಲ್ಪನಿಕ ಆದರೂ, ಪ್ರತಿಯೊಬ್ಬರಿಗೂ ನನ್ನ ಪಾತ್ರ ಹತ್ತಿರವಾಗುತ್ತದೆ‌. ದೊಡ್ಡ ಬಜೆಟ್​ನ ಸಿನಿಮಾ ಇದು. ಕೆಲವರು ನನ್ನ ಸಿನಿಮಾಗೆ ಯಾಕೆ ಇಷ್ಟೊಂದು ಖರ್ಚು ಮಾಡುತ್ತಿದ್ದೀರಾ? ಎಂದು ನಿರ್ಮಾಪಕರನ್ನು ಕೇಳಿರಬಹುದು. ಆದರೆ ನಮ್ಮ ನಿರ್ಮಾಪಕರು ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಬೆಲೆ ಕೊಡುವವರು.

ರಾನಿ ಸಿನಿಮಾ ಸ್ಟಿಲ್
ಜುಲೈ 5ಕ್ಕೆ ರಾನಿ ಚಿತ್ರ ಟೀಸರ್ ರಿಲೀಸ್: ರಗಡ್ ಲುಕ್ ನಲ್ಲಿ ಕಿರಣ್ ರಾಜ್ ಮಿಂಚಿಂಗ್

ಹಾಗಾಗಿ, ಹಣಕಾಸಿನ ವಿಚಾರಕ್ಕಿಂತ ಒಳ್ಳೆಯ ಸಿನಿಮಾ ಮಾಡಿದ್ದಾರೆ’ ಎಂದರು. ಇದು ಆ್ಯಕ್ಷನ್‍ ಚಿತ್ರವಾದರೂ, ಕೌಟುಂಬಿಕ ಕತೆಯನ್ನೂ ಸಹ ಒಳಗೊಂಡಿದೆ. ಈ ಹಿಂದೆ ನೀವು ನೋಡಿರದ ಕಿರಣ್ ರಾಜ್ ಅನ್ನು ‘ರಾನಿ’ ಸಿನಿಮಾದಲ್ಲಿ ನೋಡಬಹುದು‌. ಸಿನಿಮಾದಲ್ಲಿ ಒಟ್ಟು ಆರು ಆಕ್ಷನ್ ಸೀಕ್ವೆನ್ಸ್​ ಇವೆ. ಕೌಟುಂಬಿಕ ಸೆಂಟಿಮೆಂಟ್‍ ಸಹ ಸ್ವಲ್ಪ ಹೆಚ್ಚಾಗಿಯೇ ಇದೆ ಎಂದುಕಿರಣ್ ರಾಜ್ ತಿಳಿಸಿದ್ದಾರೆ.

ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಗುರುತೇಜ್ ಶೆಟ್ಟಿ ಚಿತ್ರದ ಆಕರ್ಷಣೆಯ ಬಗ್ಗೆ ತೆರೆದಿಟ್ಟರು. ರಾನಿಯನ್ನು ಆಕ್ಷನ್-ತುಂಬಿದ ಚಿತ್ರ ಎಂದು ವಿವರಿಸಿದ ಅವರು ಇದು ಕುಟುಂಬ-ಆಧಾರಿತ ಚಿತ್ರವಾಗಿದೆ ಮತ್ತು ಪ್ರೇಕ್ಷಕರು ಕಿರಣ್ ರಾಜ್ ಅವರ ವಿಭಿನ್ನಶೇಡ್ ನೋಡುತ್ತಾರೆ ಎಂದು ಭರವಸೆ ನೀಡಿದರು. ಚಂದ್ರಕಾಂತ್ ಪೂಜಾರಿ ಮತ್ತು ಉಮೇಶ್ ಹೆಗ್ಡೆ ನಿರ್ಮಾಣದ ರಾನಿ ಚಿತ್ರದಲ್ಲಿ ಸಮೀಕ್ಷಾ ಮತ್ತು ರಾಧ್ಯಾ ಕೂಡ ನಟಿಸಿದ್ದಾರೆ. ರಾಘವೇಂದ್ರ ಬಿ ಕೋಲಾರ ಅವರ ಛಾಯಾಗ್ರಹಣವಿದ್ದು, ವಿನೋದ್ ಮಾಸ್ಟರ್ ಅವರ ಆರು ಸಾಹಸ ದೃಶ್ಯಗಳನ್ನು ನೃತ್ಯ ಸಂಯೋಜನೆ ಮಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com