ಜುಲೈ 12ಕ್ಕೆ ದರ್ಶನ್​ ನಟನೆಯ ‘ಶಾಸ್ತ್ರಿ’ ಸಿನಿಮಾ ರೀ-ರಿಲೀಸ್!

ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ವಿಚಾರಣೆ ನಡೆಯುತ್ತಿದೆ. ಏತನ್ಮಧ್ಯೆ, ವಿತರಕ ಶಂಕರ್ ಅವರು ದರ್ಶನ್ ನಟನೆಯ 2005 ರ ಹಿಟ್ ಶಾಸ್ತ್ರಿ ಸಿನಿಮಾ ರಿ ರೀಲೀಸ್ ಘೋಷಿಸಿದ್ದಾರೆ.
ಶಾಸ್ತ್ರಿ ಸಿನಿಮಾ ಸ್ಟಿಲ್
ಶಾಸ್ತ್ರಿ ಸಿನಿಮಾ ಸ್ಟಿಲ್
Updated on

ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ವಿಚಾರಣೆ ನಡೆಯುತ್ತಿದೆ. ಏತನ್ಮಧ್ಯೆ, ವಿತರಕ ಶಂಕರ್ ಅವರು ದರ್ಶನ್ ನಟನೆಯ 2005 ರ ಹಿಟ್ ಶಾಸ್ತ್ರಿ ಸಿನಿಮಾ ರೀ-ರಿಲೀಸ್ ಘೋಷಿಸಿದ್ದಾರೆ.

ಪಿಎನ್ ಸತ್ಯ ನಿರ್ದೇಶಿಸಿದ ಶಾಸ್ತ್ರಿ, ವೈದ್ಯಕೀಯ ವಿದ್ಯಾರ್ಥಿಯ ಕಥೆಯಾಗಿದೆ. ವೈದ್ಯ ವಿದ್ಯಾರ್ಥಿ ನಂತರ ಹೇಗೆ ಗ್ಯಾಂಗ್ ಸ್ಟರ್ ಆಗುತ್ತಾನೆ ಎಂಬುದು ಚಿತ್ರದ ಕಥೆಯಾಗಿದೆ. ಸಂಪ್ರದಾಯ ಬದ್ದ ಕುಟುಂಬದಿಂದ ಬಂದ ಶಾಸ್ತ್ರಿ ಪರಿಸ್ಥಿತಿಯ ಕೈಗೊಂಬೆಯಾಗಿ ಭೂತ ಲೋಕದ ನಂಟು ಬೆಳೆಸಿಕೊಳ್ಳುತ್ತಾನೆ. ಕ್ರಿಮಿನಲ್ ಆಗಿದ್ದರೂ ಸಹ ಬಡವರಿಗೆ ಮತ್ತು ನೊದವರಿಗೆ ಸಹಾಯ ಮಾಡುವ ಪರೋಪಕಾರಿ ವ್ಯಕ್ತಿಯಾಗುತ್ತಾನೆ. ಅವನ ನಡೆವಳಿಕೆಯಿಂದ ಕೋಪಗೊಂಡ ಡಾನ್ ಗಳು ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾರೆ. ಚಿತ್ರದಲ್ಲಿ ಹಿಂದೆ ಶಾಸ್ತ್ರಿಯಿಂದ ತಿರಸ್ಕರಿಸಲ್ಪಟ್ಟ ಸೊಕ್ಕಿನ ಶ್ರೀಮಂತ ಹುಡುಗಿ ಕನಕಾ ಪಾತ್ರದಲ್ಲಿ ಮಾನ್ಯ ನಟಿಸಿದ್ದಾರೆ.

ರೀ-ರಿಲೀಸ್ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿತರಕರು, ದರ್ಶನ್ ಅವರ ಸದ್ಯದ ಪರಿಸ್ಥಿತಿಗೂ ಸಿನಿಮಾ ರಿ ರಿಲೀಸ್ ಮಾಡುತ್ತಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಂಕರ್ ನಿರ್ದೇಶನದ ಕಮಲ್ ಹಾಸನ್ ಅವರ ಇಂಡಿಯನ್ 2 ಹೊರತುಪಡಿಸಿ ಈ ವಾರ ಯಾವುದೇ ಹೊಸ ಕನ್ನಡ ಚಲನಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಶಾಸ್ತ್ರಿ ಮರು ಬಿಡುಗಡೆ ಮಾಡಲಾಗುತ್ತಿದೆ ಎಂದಿದ್ದಾರೆ.

ಶಾಸ್ತ್ರಿ ಸಿನಿಮಾ ಸ್ಟಿಲ್
ನಟ ದರ್ಶನ್ ನ್ಯಾಯಾಂಗ ಬಂಧನ ಇಂದು ಅಂತ್ಯ: ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ಸಾಧ್ಯತೆ

ಕನ್ನಡ ಚಲನಚಿತ್ರೋದ್ಯಮದ ವೆಚ್ಚದಲ್ಲಿ ಕೆಲವು ಕನ್ನಡ ತಾರೆಯರು ಪ್ಯಾನ್-ಇಂಡಿಯಾ ಚಿತ್ರಗಳತ್ತ ತಮ್ಮ ತಮ್ಮ ಮಾರ್ಗ ಬದಲಾಯಿಸುತ್ತಿರುವ ಬಗ್ಗೆ ಶಂಕರ್ ಕಳವಳ ವ್ಯಕ್ತಪಡಿಸಿದರು. ಆರಂಭದಲ್ಲಿ ಕನ್ನಡ ಚಿತ್ರರಂಗದ ಮೂಲಕ ಖ್ಯಾತಿ ಗಳಿಸಿದ ಕೆಲವು ಕನ್ನಡ ತಾರೆಯರು ಈಗ ಪ್ಯಾನ್-ಇಂಡಿಯನ್ ಪ್ರಾಜೆಕ್ಟ್‌ಗಳತ್ತ ವಾಲುತ್ತಿದ್ದಾರೆ. ಆ ಮೂಲಕ ಸ್ಥಳೀಯ ಉದ್ಯಮವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಅವರಂತಹ ದಿಗ್ಗಜ ನಟರು ಪ್ರತಿ ಮೂರು ತಿಂಗಳಿಗೊಮ್ಮೆ ಹೊಸ ಸಿನಿಮಾ ಬಿಡುಗಡೆ ಮಾಡುವ ದಿನಗಳನ್ನು ಅವರು ನೆನಪಿಸಿಕೊಂಡರು, ಇದು ಅನೇಕರಿಗೆ ಸ್ಥಿರ ಉದ್ಯೋಗವನ್ನು ನೀಡುತ್ತಿತ್ತು. 2023 ರ ಡಿಸೆಂಬರ್‌ನಲ್ಲಿ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ತರುಣ್ ಕಿಶೋರ್ ಸುಧೀರ್ ನಿರ್ದೇಶನದ ದರ್ಶನ್ ಅವರ ಕಾಟೇರ ಬಿಡುಗಡೆಯಾಗಿದ್ದು, 80 ಥಿಯೇಟರ್‌ಗಳನ್ನು ಪುನಃ ತೆರೆಯಲಾಯಿತು ಮತ್ತು ವಿವಿಧ ಸ್ಥಳಗಳಲ್ಲಿ 500 ಜನರಿಗೆ ಉದ್ಯೋಗ ನೀಡಿತು, ಇದು ಸಾಮಾನ್ಯ ಕನ್ನಡ ಚಲನಚಿತ್ರ ಬಿಡುಗಡೆಯ ಸಕಾರಾತ್ಮಕ ಪರಿಣಾಮವನ್ನು ಎತ್ತಿ ತೋರಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com