
ಆರ್ ಚಂದ್ರಕಾಂತ್ ನಿರ್ದೇಶನದ ತೂಫಾನ್ ಚಿತ್ರದಲ್ಲಿ ನಟ ರೋಷನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷಾ ರೈ ಮೂರು ವಿಭಿನ್ ಶೇಡ್ ಗಳಲ್ಲಿ ನಟಿಸಿದ್ದಾರೆ.
1994 ರ ಹಿನ್ನಲೆಯಲ್ಲಿ ತೂಫಾನ್ ಸೇಡು ತೀರಿಸಿಕೊಳ್ಳುವ ಕಥೆಯನ್ನು ಹೆಣೆದಿದ್ದಾರೆ. ಚಂದ್ರಕಾಂತ್ ನಿರ್ದೇಶನ ಮಾತ್ರವಲ್ಲದೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆದಿದ್ದಾರೆ.
ತೂಫಾನ್ ರೋಷನ್ ಅವರ ಕನಸಿನ ಪ್ರಾಜೆಕ್ಟ್ ಎಂದು ಚಂದ್ರಕಾಂತ್ ಹಂಚಿಕೊಂಡಿದ್ದಾರೆ. "ರೋಷನ್ ನನ್ನ ಬಳಿಗೆ ಕಥೆಯನ್ನು ತಂದರು ಮತ್ತು ನಾನು ಅದನ್ನು ನಿರ್ದೇಶಿಸಬೇಕೆಂದು ಒತ್ತಾಯಿಸಿದರು. ಶೇಕಡಾ 50 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆತ. ನಿರ್ಮಾಪಕರ ಕೋರಿಕೆಯ ಮೇರೆಗೆ ನಾವು ಟೀಸರ್ ರಿಲೀಸ್ ಮಾಡಿದ್ದೇವೆ." ಶೀರ್ಷಿಕೆ ಬದಲಾವಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಭೈರ್ಯ ನಾಯಕನ ಹೆಸರು, ವಿಭಿನ್ನ ಟ್ವಿಸ್ಟ್ ಸೇರಿಸಲು ತೂಫಾನ್ ಟೈಟಲ್ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.
ಎಸ್ ಆರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಶರೀಫಾ ಬೇಗಂ ನದಾಫ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ, ಇತ್ತೀಚೆಗೆ ಖ್ಯಾತ ಗೀತರಚನೆಕಾರ ಕವಿರಾಜ್ ಮೊದಲ ಗ್ಲಿಂಪ್ಸ್ ಅನಾವರಣಗೊಳಿಸಿದರು. ಸಚಿನ್ ಬಸ್ರೂರ್ ಸಂಗೀತ ಸಂಯೋಜನೆಯೊಂದಿಗೆ, ತೂಫಾನ್ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಮಾಡಲು ಉದ್ದೇಶಿಸಲಾಗಿದೆ.
ಹೊಸಬರಾದ ರೋಷನ್ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಹಂಚಿಕೊಂಡಿದ್ದಾರೆ. ನಾವು ಭಾರತದಲ್ಲಿ ಸಾವಿರಕ್ಕೂ ಹೆಚ್ಚು ಕೇಂದ್ರಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಯೋಜಿಸುತ್ತಿದ್ದೇವೆ" ಎಂದು ಹೇಳಿದರು. ಚಿತ್ರದ ಪಾತ್ರವರ್ಗದಲ್ಲಿ ಭೀಷ್ಮ ರಾಮಯ್ಯ, ರಂಗಾಯಣ ರಘು, ಅಶ್ವಿನ್ ಹಾಸನ್, ಸೂರ್ಯ ಪ್ರವೀಣ್, ಅಯ್ಯಪ್ಪ ಶರ್ಮಾ ಮತ್ತು ಬಿ ಸುರೇಶ್ ಪೋಷಕ ಪಾತ್ರಗಳಲ್ಲಿದ್ದಾರೆ. ತೂಫಾನ್‌ಗೆ ಛಾಯಾಗ್ರಹಣವನ್ನು ಗಂಗೂ ನಿರ್ವಹಿಸಿದ್ದಾರೆ.
Advertisement