
ಪ್ರದೀಪ್ ದೊಡ್ಡಯ್ಯ ನಿರ್ದೇಶನದ 'ಔಟ್ ಆಫ್ ಸಿಲಬಸ್' ಒಂದು ಕ್ರಾಂತಿಕಾರಿ ಸಿನಿಮಾವೆಂದು ಹೇಳಿಕೊಂಡಿದೆ. ಟೈಟಲ್ ಮೂಲಕವೇ ಸಾಕಷ್ಟು ಕುತೂಹಲ ಕೆರಳಿಸಿದೆ.
ಪ್ರಮುಖ ಪಾತ್ರದಲ್ಲಿ ನಟಿಸಿರುವ ಪ್ರದೀಪ್ ದೊಡ್ಡಯ್ಯ, ತಾವೇ ಈ ಸಿನಿಮಾವನ್ನು ನಿರ್ದೇಶನ ಕೂಡ ಮಾಡಿರುವುದು ವಿಶೇಷ.
'ಔಟ್ ಆಫ್ ಸಿಲಬಸ್' ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ಚಿತ್ರರಂಗಕ್ಕೆ ಹೊಸ ಆಯಾಮ ಕೊಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಮಿಸ್ ವರ್ಲ್ಡ್ ಮೊರಾಕೊ, ಸೋನಿಯಾ ಐಟ್ ಮನ್ಸೂರ್ ಅವರಿಗಾಗಿ ಕೆಲಸ ಮಾಡಿ ಪ್ರಸಿದ್ಧರಾಗಿರುವ ಥಾಮಸ್ ಅಬ್ರಹಾಂ ನಾಯಕಿ ಹೃತಿಕಾ ಶ್ರೀನಿವಾಸ್ ಅವರಿಗಾಗಿ ಡ್ರೆಸ್ ವಿನ್ಯಾಸ ಮಾಡಿದ್ದಾರೆ. ಸಿನಿಮಾದ ಹೆಸರೇ ಹೇಳುವಂತೆ ಇಲ್ಲಿವರೆಗೂ ಬಂದಿರುವ ರೆಗ್ಯೂಲರ್ ಜಾನರ್ ಅನ್ನು ಕೈ ಬಿಟ್ಟು ಹೊಸ ಪ್ರಕಾರದ ಸಿನಿಮಾವನ್ನು ಪ್ರೇಕ್ಷಕರಿಗೆ ತೋರಿಸುವುದಕ್ಕೆ ಮುಂದಾಗಿದೆ.
Ad6 ಎಂಟರ್‌ಟೈನ್‌ಮೆಂಟ್, ನಿರ್ಮಾಣದ ಸಿನಿಮಾದಲ್ಲಿ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ‘ಪರೀಕ್ಷೆಗಳ ಪ್ರಶ್ನೆಪತ್ರಿಕೆಯಲ್ಲಿ ಪಠ್ಯಪುಸ್ತದಲ್ಲಿ ಇಲ್ಲದೇ ಇರುವಂಥ ಪ್ರಶ್ನೆಗಳು ಬಂದರೆ 'ಔಟ್ ಆಫ್ ಸಿಲಬಸ್' ಎನ್ನುವ ಆಪಾದನೆ ವಿದ್ಯಾರ್ಥಿಗಳಿಂದ ಕೇಳಿ ಬರುತ್ತದೆ. ಇದನ್ನೇ ಸಿನಿಮಾದ ಶೀರ್ಷಿಕೆಯಾಗಿಸಿದ್ದೇವೆ’ ಎಂದು ಚಿತ್ರತಂಡ ಹೇಳಿದೆ. ವಿಜಯಕಲಾ ಸುಧಾಕರ್ ನಿರ್ಮಿಸಿದ ಈ ಚಿತ್ರವು ವಿಶೇಷವಾಗಿ ಯುವ ಪ್ರೇಕ್ಷಕರಲ್ಲಿ ಗಮನ ಸೆಳೆದಿದೆ, ಟೀಸರ್ ಗೂ ಕೂಡ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇಂದಿನ ಮಾಡರ್ನ್ ಸಂಬಂಧಗಳ ಕುರಿತಾಗಿ ಹೇಳಿರುವ ಸಿನಿಮಾ. ಮನಸ್ಸಿಗೆ ತಟ್ಟುವ ಡೈಲಾಗ್‌ಗಳು ಖಂಡಿತಾ ಪ್ರೇಕ್ಷಕರನ್ನು ಮುಟ್ಟುತ್ತವೆ ಎಂದು ಸಿನಿಮಾ ತಂಡ ಹೇಳಿಕೊಂಡಿದೆ. ಸಾಂಪ್ರದಾಯಿಕ ಶಿಕ್ಷಣವನ್ನು ಮೀರಿದ ಸಾರ್ವತ್ರಿಕ ಜೀವನ ಪಾಠಗಳನ್ನು ಅನ್ವೇಷಿಸುವ ಚಿತ್ರವು ಆಳವಾಗಿ ಅಧ್ಯಯನ ಮಾಡುತ್ತದೆ. ಚಿತ್ರದಲ್ಲಿ ಹುಚ್ಚ ರಾಯಪ್ಪನ ಪಾತ್ರದಲ್ಲಿ ಅಚ್ಯುತ್ ಕುಮಾರ್, ರಾಮಕೃಷ್ಣ ಮತ್ತು ಚಿತ್ಕಲಾ ಬಿರಾದಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಔಟ್ ಆಫ್ ಸಿಲಬಸ್ ಸಿನಿಮಾ ಸಂಬಂಧಗಳು ಹಾಗೂ ಮದುವೆಯ ಜಟಿಲತೆಯನ್ನು ಹೇಳುವುದಕ್ಕೆ ಹೊರಟಿದೆ. ಈ ಕತೆಯು ಪ್ರೇಕ್ಷಕರನ್ನು ಸೆಳೆಯುತ್ತವೆ ಎಂದು ಕಾನ್ಫಿಡೆಂಟ್ ಆಗಿ ಹೇಳಿಕೊಂಡಿದ್ದಾರೆ. ಸದ್ಯ ಟೀಸರ್ ಹಾಗೂ ಗ್ಲಿಂಪ್ಸ್‌ನಿಂದ ಗಮನ ಸೆಳೆದಿರುವ 'ಔಟ್ ಆಫ್ ಸಿಲಬಸ್' ಶೀಘ್ರದಲ್ಲಿಯೇ ಬಿಡುಗಡೆಗೆ ಸಿದ್ಧವಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಧ್ಯಾಯ ಸೃಷ್ಟಿಸುತ್ತೆ ಎಂದು ಚಿತ್ರತಂಡ ಬಲವಾಗಿ ನಂಬಿದೆ.
Advertisement